ಕವನ : ನಮ್ಮ ಬದುಕನ್ನು ನೆಮ್ಮದಿಯ ದಡ ಸೇರಿಸುವವರು – “ಆ ದೇವರಿಗಿಂತಲೂ ಮಿಗಿಲಾದವರು…”

ಕಿರುಬೆರಳ ತುದಿ ಹಿಡಿದು ಊರೆಲ್ಲಾ ನಡೆಸುವಿರಿ, ಬಿದ್ದಾಗ ಹಿಡಿದೆತ್ತಿ ಕಣ್ಣೀರ ಒರೆಸುವಿರಿ, ತಪ್ಪು ದಾರಿ ಹಿಡಿದಾಗ ಬೈದು ಬುದ್ಧಿ ಹೇಳುವಿರಿ, ಸರಿದಾರಿ ತೋರಿ ಸದಾ ಬೆನ್ನಹಿಂದೆ ನಿಲ್ಲುವಿರಿ, ಸೋತಾಗ ಜೊತೆನಿಂತು “ನಾವಿದ್ದೇವೆ” ಎನ್ನುವಿರಿ, ನಾವು ಗೆದ್ದಾಗ ಅಲ್ಲೆಲ್ಲೋ ದೂರದಲ್ಲೇ ನಿಲ್ಲುವಿರಿ, ಆದರೆ ಮನದೊಳಗೆ ನೀವು ನಮಗಿಂತ ಹೆಚ್ಚು ಸಂಭ್ರಮಿಸುವಿರಿ…
ಬದುಕಿನಲ್ಲಿ ಕಷ್ಟಗಳೆಷ್ಟೇ ಬಂದರೂ ನಮ್ಮೆದುರು ಸದಾ ನಗು-ನಗುತ್ತಲೇ ಇರುವಿರಿ, ಕಷ್ಟಪಟ್ಟಾದರೂ ಸರಿ ನಾವು ಕೇಳಿದ್ದನ್ನೆಲ್ಲಾ ಕೊಡಿಸುವಿರಿ, ನಿಮ್ಮೊಳಗಿನ ನೋವುಗಳನ್ನೆಲ್ಲಾ ನುಂಗಿ ನಮಗೆ ಸದಾ ಖುಷಿಯನ್ನೇ ನೀಡುವಿರಿ, ನಮ್ಮ ಭವಿಷ್ಯದ ಬದುಕು ಸದಾ ನೆಮ್ಮದಿಯಿಂದಿರಲೆಂದು ನೀವು ಸದಾ ಪ್ರಾರ್ಥಿಸುವಿರಿ, ನಿಮ್ಮ ಬದುಕಿನ ಕಷ್ಟ-ನೋವುಗಳು ನಮ್ಮ ಬದುಕಿಗೆ ಬರಬಾರದೆಂದು ಹಗಲಿರುಳು ಶ್ರಮಿಸುವಿರಿ, ನಿಮ್ಮ ಸಂಪೂರ್ಣ ಬದುಕನ್ನು ನೀವು ನಮಗಾಗಿ ಬದುಕುವಿರಿ, ಹೆಸರಿನಲ್ಲಿ ನೀವು ತಂದೆ-ತಾಯಿಯಾದರೂ ತ್ಯಾಗದಲ್ಲಿ ನೀವು ದೇವರಿಗಿಂತಲೂ ಮಿಗಿಲಾದಿರಿ, ಆ ಭಗವಂತನಿಗಿಂತಲೂ ಮೇಲಾದಿರಿ…
– ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading