ಜಿಲ್ಲೆಯಲ್ಲಿ ಮರಳು ಕೆಂಪು ಕಲ್ಲು ಸಮಸ್ಯೆ- ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅತ್ಯುತ್ತಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ: ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಗೌಡ

ಜಿಲ್ಲೆಯಲ್ಲಿ ಮರಳು, ಕೆಂಪು ಕಲ್ಲು ಸಮಸ್ಯೆ ಈ ಉದ್ಯಮವನ್ನೇ ಅವಲಂಬಿತರಾದ ಸಣ್ಣ ಸಣ್ಣ ಉದ್ಯಮಿ ಕಾಂಟ್ರಾಕ್ಟ್ ಗಳಿಗೆ, ಮನೆಕಟ್ಟುವ ಬಡ ಮಧ್ಯಮ ವರ್ಗ. ಮರಳು ಸಿಗದೇ ತೊಂದರೆಯಲ್ಲಿದೆ. ಇದಕ್ಕೆ ನೂತವಾಗಿ ರಚನೆ ಆಗುತ್ತಿರುವ ಸರಕಾರ ಜನರಿಗೆ ಸುಲಭವಾಗಿ ಸ್ಪಂದಿಸುವ ನಿರೀಕ್ಷೆ ಇದೆ. ಈ ಕುರಿತಾಗಿ ಸರಕಾರ ಯೋಚನೆ, ನಿರ್ಧಾರ ಮಾಡಬೇಕು ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಸರಕಾರಕ್ಕೆ ಅಗ್ರಹ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೇಲೆ ಅಪಾರ ನಿರೀಕ್ಷೆ ಇದೆ. ನಮ್ಮ ಜಿಲ್ಲೆಯ ಮುಖ್ಯ ಸಮಸ್ಯೆಯಾದ ಮರಳು ಕೆಂಪು ಕಲ್ಲು ಸಮಸ್ಯೆ, ಈ ಉದ್ಯಮವನ್ನೇ ನಂಬಿಕೊಂಡ ಸಣ್ಣ ಸಣ್ಣ ಉದ್ಯಮಿ ಕಾಂಟ್ರಾಕ್ಟ್ ದಾರರು, ಮನೆಕಟ್ಟುವ ಬಡ ಮಧ್ಯಮ ವರ್ಗ, ಮರಳು ಸಿಗದೇ ತೊಂದರೆಯಲ್ಲಿದ್ದಾರೆ. ರೂ 12 ಸಾವಿರಕ್ಕೆ ಸಿಗುತ್ತಿದ್ದ ಒಂದು ಲೋಡ್ ಮರಳು ಈಗ ರೂ. 20 ಸಾವಿರ ಆಗಿದೆ. ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆಗೆ ಬೇಕಾದ, ಕಟ್ಟಡಕ್ಕೆ ಬೇಕಾದ ಮರಳಿಗೆ ಆಯಾ ಪಂಚಾಯತ್ ನಿಂದ ಒಂದು ಪರ್ಮಿಷನ್, ಒಂದು ಕಂದಾಯ ಅಂತ ಸಣ್ಣ ಮಟ್ಟದಲ್ಲಿ ಒಂದು ಪಿಕಪ್ ಗೆ, ಒಂದು ಟಿಪ್ಪರ್ ಗೆ ಇಂತಿಷ್ಟು ದರ ಕಂದಾಯ ಎಂದು ನಿಗದಿ ಮಾಡಿ ನದಿಯಲ್ಲಿ ಪ್ರಕೃತಿಯಿಂದ ದೊರೆಯುವ ಅಪಾರ ಮರಳಿನಿಂದ ಆಯಾ ಪಂಚಾಯತ್ ಗೆ ಒಂದಷ್ಟು ಆದಾಯ ಬಂದರೆ. ಪಂಚಾಯತ್ ಗೂ ಅಭಿವೃದ್ಧಿಗೆ ಆದಾಯ ಹಾಗೂ ಯಾವುದೇ ಅಡೆ ತಡೆ ಇಲ್ಲದೇ ಜನರಿಗೆ ಕಾಮಗಾರಿಗೆ ಅನುಕೂಲ ಆಗುತ್ತೆ ಸರಕಾರಕ್ಕೂ ಆದಾಯ ಹೆಚ್ಚುವರಿಯಾಗಿ ದೊರೆಯುತ್ತದೆ.

. . . . . . . . .


ನೂತನ ಮುಖ್ಯ ಮಂತ್ರಿಯಾಗಲಿರುವ ಡಿ.ಕೆ. ಶಿವಕುಮಾರ್ ಅವರಿಗೆ ನಮ್ಮ ಜಿಲ್ಲೆಯ ಬಗ್ಗೆ ಅಪಾರ ಪ್ರೀತಿ ಇದೆ. ಈ ಬಗ್ಗೆ ಅವರು ಅತ್ಯುತ್ತಮ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವ ವಿಶ್ವಾಸ ಇದೆ ಎಂದಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading