ಸುಬ್ರಹ್ಮಣ್ಯ : ಗ್ರಂಥಾಲಯ ವೀಕ್ಷಣೆ ಮತ್ತು ಸಂವಾದ ಕಾರ್ಯಕ್ರಮ

ಸಂಧ್ಯಾರಶ್ಮಿ ಸಾಹಿತ್ಯ ಸಂಘ ಸುಳ್ಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಪಂಜ ಹೋಬಳಿ ಘಟಕ ಇವುಗಳ ಸಹಯೋಗದೊಂದಿಗೆ ಸುಬ್ರಹ್ಮಣ್ಯದ ಅಶೋಕ್ ಮೂಲೆಮಜಲು ಹಾಗೂ ಶ್ರೀಮತಿ ಸುನಿತಾ ಅಶೋಕ್ ಮೂಲೆಮಜಲು ದಂಪತಿಗಳ ಮನೆಯಲ್ಲಿ ಮೇ.26ರಂದು “ಗ್ರಂಥಾಲಯ ವೀಕ್ಷಣೆ ಹಾಗೂ ಸಂವಾದ ಕಾರ್ಯಕ್ರಮ” ನಡೆಯಿತು.
ಅಶೋಕ್ ಮೂಲೆಮಜಲು ರವರು ತಮ್ಮ ಮನೆಯಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಪುಸ್ತಕಗಳು, ವೃತ್ತಪತ್ರಿಕೆಗಳು ಹಾಗೂ ಸಿ.ಡಿ ಕ್ಯಾಸೆಟ್ ಗಳ ಸಂಗ್ರಹಗಳನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಿದ್ದು, ಕಾರ್ಯಕ್ರಮದಲ್ಲಿ ಅವರ ಪುಸ್ತಕ ಸಂಗ್ರಹದ ಆಸಕ್ತಿಯ ಬಗ್ಗೆ ಹಾಗೂ ವಿವಿಧ ಸಾಹಿತ್ಯಾತ್ಮಕ ವಿಚಾರಗಳ ವಿನಿಮಯ ಹಾಗೂ ಸಂವಾದ ನಡೆಯಿತು.
ಈ ಸಂದರ್ಭದಲ್ಲಿ ಅಶೋಕ್ ಮೂಲೆಮಜಲು ಹಾಗೂ ನಿವೃತ್ತ ಗ್ರಂಥಪಾಲಕರಾದ ಶ್ರೀಮತಿ ಸುನಿತಾ ಅಶೋಕ್ ಮೂಲೆಮಜಲು ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಮುಖರಾದ ಡಾ. ಎಸ್ ರಂಗಯ್ಯ, ರಾಮಚಂದ್ರ ಪಳ್ಳತ್ತಡ್ಕ, ಬಾಬು ಗೌಡ ಅಚ್ರಪ್ಪಾಡಿ, ರಾಮಚಂದ್ರ ಪಳಂಗಾಯ, ವೆಂಕಪ್ಪ ಕೇನಾಜೆ, ಶ್ರೀಧರ್ ಭಾಗವತ್, ಯೋಗೀಶ್ ಹೊಸೊಳಿಕೆ, ಕುಮಾರಸ್ವಾಮಿ ತೆಕ್ಕುಂಜ, ಪ್ರಸನ್ನ ಕುಮಾರಿ, ಲೀಲಾ ದಾಮೋದರ, ಹೇಮಾ ದೆಂಗೋಡಿ, ನೀಲಾವತಿ, ಎ.ಕೆ ಹಿಮಕರ, ಗಣೇಶ್ ಭಟ್ ಸಿ.ಎ, ಹರಿಹರ ಬಾಯಾರಿ, ಅಬ್ದುಲ್ಲಾ ಅರಂತೋಡು, ಸಂಜೀವ ಕುದ್ಪಾಜೆ, ಚೆನ್ನಕೇಶವ ಜಾಲ್ಸೂರು, ಶಿವದೇವಿ ಅವನೀಶ್ಚಂದ್ರ, ಪಾರ್ವತಿ ಕಾಮತ್, ಉದಯ ಗೌರಿ, ಕಿಶೋರ್ ಕುಮಾರ್ ಕೂಜುಗೋಡು ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರಾಮಚಂದ್ರ ಪಳ್ಳತ್ತಡ್ಕ ಸ್ವಾಗತಿಸಿ ಬಾಬುಗೌಡ ಅಚ್ರಪ್ಪಾಡಿ ಧನ್ಯವಾದ ಸಮರ್ಪಿಸಿದರು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading