ಹರಿಹರ ಪಳ್ಳತ್ತಡ್ಕ : ಕೊಲ್ಲಮೊಗ್ರು-ಹರಿಹರ ಪ್ರಾ.ಕೃ.ಪ.ಸ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೆಳ್ಯಪ್ಪ ಗೌಡ ಮಣಿಯಾನಮನೆ ರವರಿಗೆ ಬೀಳ್ಕೊಡುಗೆ

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬೆಳ್ಯಪ್ಪ ಗೌಡ ಮಣಿಯಾನಮನೆ ರವರಿಗೆ ಬೀಳ್ಕೊಡುಗೆ ಸಮಾರಂಭವು ಮೇ.30 ರಂದು ಸಂಘದ ಪ್ರಧಾನ ಕಛೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬೆಳ್ಯಪ್ಪ ಗೌಡ ಮಣಿಯಾನಮನೆ ಹಾಗೂ ಶ್ರೀಮತಿ ಪುಷ್ಪಾವತಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷರಾದ ಡಾ.ಸೋಮಶೇಖರ್ ಕಟ್ಟೆಮನೆ, ಉಪಾಧ್ಯಕ್ಷರಾದ ಗಣೇಶ್ ಭಟ್ ಇಡ್ಯಡ್ಕ, ನಿರ್ದೇಶಕರುಗಳಾದ ಶೇಷಪ್ಪ ಗೌಡ ಕಿರಿಭಾಗ, ಡ್ಯಾನಿ ಯಳದಾಳು, ರೇಗನ್ ಶೆಟ್ಯಡ್ಕ, ಹಿಮ್ಮತ್.ಕೆ.ಸಿ, ಶ್ರೀಮತಿ ವೇದಾವತಿ ಮುಳ್ಳುಬಾಗಿಲು, ಶ್ರೀಮತಿ ಮೇನಕಾ ಕೊಪ್ಪಡ್ಕ, ಕಮಲಾಕ್ಷ ಮುಳ್ಳುಬಾಗಿಲು, ಗೋಪಾಲಕೃಷ್ಣ ಚಾಂತಾಳ, ಮಹಾಲಿಂಗ ನಾಯ್ಕ ಶಿರೂರು ಹಾಗೂ ಬೊಳಿಯ ಬೆಂಡೋಡಿ ಉಪಸ್ಥಿತರಿದ್ದರು.
ಸಂಘದ ನಿಕಟಪೂರ್ವ ಅಧ್ಯಕ್ಷರಾದ ಹರ್ಷಕುಮಾರ್ ದೇವಜನ, ಮಾಜಿ ಉಪಾಧ್ಯಕ್ಷರಾದ ಮಣಿಕಂಠ ಕೊಳಗೆ, ಮಾಜಿ ನಿರ್ದೇಶಕರಾದ ತಾರಾನಾಥ್ ಮುಂಡಾಜೆ, ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ದಾಮೋದರ.ಕೆ.ಎಸ್, ಅನಂತರಾಮ ಮಣಿಯಾನಮನೆ, ನಿವೃತ್ತ ಸಹಾಯಕ ಕಾರ್ಯನಿರ್ವಹಣಾಧಿಕಾರಿಗಳಾದ ಚಂದ್ರಶೇಖರ ಬಟ್ಟೋಡಿ, ನಿವೃತ್ತ ಲೆಕ್ಕಿಗರಾದ ಶ್ರೀಮತಿ ಕಮಲಾ ಖಂಡಿಗೆ, ನಿವೃತ್ತ ಸಿಬ್ಬಂದಿಗಳಾದ ರಾಮ.ಹೆಚ್, ಬೆಳ್ಯಪ್ಪ ಗೌಡರ ಪುತ್ರರಾದ ವಿನೋದ್, ವಿಶ್ವಾಸ್, ಸೊಸೆ ಲಿಪಿತಾ ಹಾಗೂ ಸಂಘದ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ತೀರ್ಥಕುಮಾರಿ.ವೈ ಸ್ವಾಗತಿಸಿ ಗೌರೀಶ್ ಮಲ್ಲಾಜೆ ವಂದಿಸಿದರು. ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.
ಸುದೀರ್ಘ 39 ವರ್ಷಗಳ ಕಾಲ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸೇವೆ ಸಲ್ಲಿಸಿ ಮೇ.30 ರಂದು ನಿವೃತ್ತರಾದ ಬೆಳ್ಯಪ್ಪ ಗೌಡ ಮಣಿಯಾನಮನೆ ರವರು ಜೂ.01, 1966ರಂದು ಪ್ರತಿಷ್ಠಿತ ಮಣಿಯಾನಮನೆ ಕುಟುಂಬದ ಶ್ರೀ ದಿ. ನಾಗಪ್ಪ ಗೌಡ ಹಾಗೂ ಶ್ರೀಮತಿ ದಿ. ಹೊನ್ನಮ್ಮ ದಂಪತಿಗಳ ನಾಲ್ಕು ಪುತ್ರರು ಹಾಗೂ ಎರಡು ಪುತ್ರಿಯರಲ್ಲಿ ಕೊನೆಯ ಮಗನಾಗಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಳಲಂಬೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಕಾರು ಇಲ್ಲಿ ಪಡೆದ ಇವರು ಪ್ರೌಢಶಾಲಾ ಶಿಕ್ಷಣವನ್ನು ಹರಿಹರ ಪಳ್ಳತ್ತಡ್ಕದ ಸರಕಾರಿ ಪ್ರೌಢಶಾಲೆಯಲ್ಲಿ ಪಡೆದು 1987ರಲ್ಲಿ ಸಂಘದ ಕೊಲ್ಲಮೊಗ್ರು ಶಾಖೆಯಲ್ಲಿ ದಿನಗೂಲಿ ನೌಕರರಾಗಿ ಕರ್ತವ್ಯ ಪ್ರಾರಂಭಿಸಿ 1988ರಿಂದ ಹಂಗಾಮಿ ನೌಕರರಾಗಿ ಕರ್ತವ್ಯ ಆರಂಭಿಸಿದರು. 1990ರಲ್ಲಿ ಮೂಡುಬಿದ್ರೆಯಲ್ಲಿ ಜಿ.ಡಿ.ಸಿ ಕೋರ್ಸ್ ಅನ್ನು ಮುಗಿಸಿದ ಇವರು ನಂತರ ಕಾಯಂ ನೌಕರರಾಗಿ ಸೇರ್ಪಡೆಗೊಂಡು ಸಂಘದ ವಿವಿಧ ಶಾಖೆಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಕೊಲ್ಲಮೊಗ್ರು ಶಾಖೆಯ ಶಾಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಜುಲೈ 01, 2025 ರಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ಪದೋನ್ನತಿ ಹೊಂದಿದರು.
ಇವರ ಪತ್ನಿ ಶ್ರೀಮತಿ ಪುಷ್ಪಾವತಿ.ಎಂ.ಬಿ, ಪುತ್ರ ವಿನೋದ್.ಎಂ.ಬಿ ಆರ್ಥೋಡೋನ್ಟಲ್ ಡಿಸೈನ್ ಎಂಜಿನಿಯರ್ ಆಗಿ ಡಿ.ಟಿ.ಪಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸೊಸೆ ಶ್ರೀಮತಿ ಲಿಪಿತಾ ಕಂಪೆನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮತ್ತೋರ್ವ ಪುತ್ರ ವಿಶ್ವಾಸ್.ಎಂ.ಬಿ ಇನ್ಫೋಸಿಸ್ ನಲ್ಲಿ ಉದ್ಯೋಗದಲ್ಲಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading