ಇಂದಿನ(ಮೇ 11) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ :11 ಮೇ 2026ವಾರ : ಸೋಮವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮೇ 11) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 445 ರಿಂದ 475ಹಳೆ...

ಸುಳ್ಯದಲ್ಲಿ 4 ನೇ ದಿನಕ್ಕೆ ಕಾಲಿರಿಸಿದ ಭಾವ ತೀರ ಯಾನ – ಇಂದು (ಮೇ.11) ಸಂಜೆ 7.00ಕ್ಕೆ ಚಿತ್ರ ಪ್ರದರ್ಶನ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಇದೀಗ ಸುಳ್ಯದಲ್ಲಿ ಮರು ಬಿಡುಗಡೆಯಾಗಿದ್ದು ಪ್ರೇಕ್ಷಕರ ಮೆಚ್ಚುಗೆ ಪಡೆದು ಯಶಸ್ವಿ ಪ್ರದರ್ಶನದೊಂದಿಗೆ 4ನೇ ದಿನಕ್ಕೆ ಕಾಲಿರಿಸಿದೆ. ಸುಳ್ಯ ಭಾರತ್ ಸಿನೇಮಾಸ್ ( ಸಂತೋಷ್ ಚಿತ್ರಮಂದಿರ) ನಲ್ಲಿ ಮೇ.11 ರಂದು 7 ಗಂಟೆಗೆ ಚಿತ್ರ ಪ್ರದರ್ಶನ ನಡೆಯಲಿದೆ.
Ad Widget

ಲೇಖನ : “ಸಾವಿರ ದೇವರಿಗಿಂತ ಮಿಗಿಲಾದವಳು-ಅವಳು ನನ್ನಮ್ಮ”

ಹೌದು, ಅಮ್ಮ ಎಂಬ ಪದವೇ ಎಷ್ಟು ಸುಂದರ ಅಲ್ವಾ? ಅಮ್ಮ ಎಂದರೆ ಆ ಪದವೇ ಹೇಳಲಾಗದ ಅಧ್ಬುತ , ಅದೇನೋ ವಿಪರೀತ ಶಕ್ತಿ, ಅವಳೆಂದರೆ ಸಹನೆ, ಅವಳೆಂದರೆ ಕರುಣೆ, ಅವಳೆಂದರೆ ಆಗಸದಷ್ಟು ಎತ್ತರ, ಸಾಗರದಷ್ಟು ಆಳ. ಈ ಜಗತ್ತಿನಲ್ಲಿ ಪ್ರೀತಿ ಎನ್ನುವ ಪದಕ್ಕೆ ರೂಪವಿದ್ದರೆ ಅದು ಅಮ್ಮನ ಮುಖವಾಗಿರುತಿತ್ತು. ಮಮತೆ ಎಂಬ ಭಾವನೆಗೆ ಹೃದಯವಿರುತ್ತಿದ್ದರೆ ಅದು ಅಮ್ಮನ...

ಸ್ಕಂದ ಸಿ.ಎಸ್ ಕರ್ನಾಟಕ 7A ಸೈಡ್ ಅಂಡರ್-15 ಫುಟ್ಬಾಲ್ ತಂಡಕ್ಕೆ ಆಯ್ಕೆ

ಕರ್ನಾಟಕ 7A ಸೈಡ್ ಅಂಡರ್-15 ಫುಟ್ಬಾಲ್ ತಂಡಕ್ಕೆ ಸುಳ್ಯ ಮೂಲದ ಸ್ಕಂದ ಸಿ.ಎಸ್ ಆಯ್ಕೆಯಾಗಿದ್ದಾರೆ. ಅವರು ಮೇ.14ರಿಂದ ಗೋವಾದಲ್ಲಿ ನಡೆಯಲಿರುವ ಸಬ್-ಜ್ಯೂನಿಯರ್ ನ್ಯಾಷನಲ್ ಟೂರ್ನಮೆಂಟಿನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಸ್ಕಂದ ಸದ್ಯ ಬೆಂಗಳೂರಿನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಎಣ್ಮೂರಿನ ತೇಜಸ್ವಿನಿ ಕೆ.ಎನ್ ಮತ್ತು ದಂಬೆ ರವಿಶಂಕರ ಶಾಸ್ತ್ರಿಯವರ ಮಗ, ನಿವೃತ್ತ ಅಧ್ಯಾಪಕರಾದ...

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವತಿಯಿಂದ ನೇಮಿರಾಜ ಪಲ್ಲೋಡಿ ಅವರಿಗೆ ಸನ್ಮಾನ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವತಿಯಿಂದ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನೇಮಿರಾಜ ಪಲ್ಲೋಡಿ ಅವರಿಗೆ ಮೇ.09 ರಂದು ದೇಗುಲದ ಸಭಾಭವನದಲ್ಲಿ ಸನ್ಮಾನ ಸಮಾರಂಭ ನಡೆಯಿತು. ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ರವರು ನೇಮಿರಾಜ...

ಜಯಪ್ರಕಾಶ್ ರೈ ಯವರ ಹುಟ್ಟು ಹಬ್ಬ ವಾಲಿಬಾಲ್ ಶಿಬಿರಾರ್ಥಿ ಗಳೊಂದಿಗೆ ವಿಶಿಷ್ಟ ರೀತಿಯಲ್ಲಿ ಆಚರಣೆ – “ಜೆ.ಪಿ ರೈ ರವರು ಕ್ರೀಡಾ ಸ್ಪೂರ್ತಿಯನ್ನು ಜೀವನದಲ್ಲಿ ಅಳವಡಿಸಿ ಪ್ರಾಕ್ಟಿಕಲ್ ಆಗಿ ತೋರಿಸಿದ್ದು ಇತರರಿಗೆ ಪ್ರೇರಣೆ” : ಕೆ.ಎಂ. ಮುಸ್ತಫ

ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಅಸೋಸಿಯೇಟ್ ಸೆಕ್ರೆಟರಿ ಯಾಗಿರುವ ಸುಳ್ಯದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಮತ್ತು ಕ್ರೀಡಾ ಕ್ಷೇತ್ರ ದಲ್ಲಿ ಕಳೆದ ಹಲವು ದಶಕಗಳಿಂದ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಎನ್. ಜಯಪ್ರಕಾಶ್ ರೈ ಯವರಿಗೆ 70ರ ಹುಟ್ಟು ಹಬ್ಬದ ಸಂಭ್ರಮ. ಇದೇ ಸಂದರ್ಭದಲ್ಲಿ ಜೆ.ಪಿ ಯವರ ನೇತೃತ್ವದಲ್ಲಿ ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ಸುಳ್ಯದಲ್ಲಿ...

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರ ವಾಹನ ದಟ್ಟಣೆ

ಸುಬ್ರಹ್ಮಣ್ಯ ಮೇ 10 : ರಾಜ್ಯದ ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜಾ ಹಿನ್ನೆಲೆಯಲ್ಲಿ ರವಿವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾಹನ ದಟ್ಟನೆಯೊಂದಿಗೆ ಭಕ್ತ ಸಮೂಹವೇ ಕ್ಷೇತ್ರಕ್ಕೆ ಆಗಮಿಸಿತ್ತು. ರಾಜ್ಯದ ವಿವಿಧ ಮೂಲಗಳಿಂದ ಆಗಮಿಸಿದ ಭಕ್ತಾದಿಗಳನ್ನು ಹೊತ್ತ ವಾಹನಗಳು ಕಾಶಿ ಕಟ್ಟೆಯಿಂದಲೇ ನಿಧಾನವಾಗಿ ಚಲಿಸಿ ಕುಕ್ಕೆ ರಥಬೀದಿಯ ಸರ್ಕಲ್ ನಿಂದ ಅಲ್ಲಲ್ಲಿ ಪಾರ್ಕಿಂಗ್ ಪ್ರದೇಶಗಳಿಗೆ ತೆರಳಿದವು. ಕ್ಷೇತ್ರದಲ್ಲಿರುವ ಎಲ್ಲಾ ಪಾರ್ಕಿಂಗ್...

ಸುಬ್ರಹ್ಮಣ್ಯದಲ್ಲಿ ಕಡಬ ತಾಲೂಕು ಒಕ್ಕಲಿಗ ಗೌಡ ಗ್ರಾಮ ಸಮಿತಿ ಮಹಾ ಅಭಿಯಾನ

ಸುಬ್ರಹ್ಮಣ್ಯ ಮೇ 10 : ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಹೊಸಮಠದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಗೌಡ ಸಮುದಾಯ ಭವನದ ನಿರ್ಮಾಣಕ್ಕಾಗಿ ಮಾಹಿತಿ ನೀಡಿ ಧನ ಸಂಗ್ರಹಿಸುವ ಎರಡನೆಯ ಹಂತದ ಬೃಹತ್ ಅಭಿಯಾನ ಸುಬ್ರಹ್ಮಣ್ಯದಲ್ಲಿ ಶನಿವಾರ ಜರಗಿತು. ಕಡಬ ತಾಲೂಕಿನ 42 ಗ್ರಾಮಗಳಲ್ಲಿ ಈಗಾಗಲೇ ಮೊದಲ ಹಂತದ ಅಭಿಯಾನ ಪೂರ್ತಿಗೊಂಡು ಎರಡನೇ ಹಂತದ...

“ಮಾರುಕಟ್ಟೆ ರೌಂಡ್ ಅಪ್” – ಸೋಮವಾರದಿಂದ ಶನಿವಾರದ ವರೆಗಿನ “ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ”ಯ ಒಂದು ಸಮಗ್ರ ನೋಟ ; ಈ ವಾರ(ಮೇ.04 ರಿಂದ ಮೇ.09) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಯಲ್ಲಿ ಕಂಡುಬಂದ ಏರಿಳಿತಗಳೇನು…!? ಎಂಬುವುದನ್ನು ವಿವರವಾಗಿ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ಪ್ರತೀದಿನವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ದಿನನಿತ್ಯದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದು, ಈ ವಾರ ಮೇ.04 ಸೋಮವಾರದಿಂದ ಮೇ.09 ಶನಿವಾರದವರೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ...

ನಿಧನ : ಹೊನ್ನಮ್ಮ ನಡುತೋಟ ಕುಲ್ಕುಂದ

ಸುಬ್ರಹ್ಮಣ್ಯ ಮೇ 09 : ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಬಸವನಮೂಲೆಯಲ್ಲಿ ವಾಸವಿರುವ ದಿ. ವೀರಪ್ಪಗೌಡ ನಡುತೋಟ ಅವರ ಪತ್ನಿ ಹೊನ್ನಮ್ಮ(73) ಇಂದು ಶನಿವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಅವರು ಪುತ್ರ ವಿಜಯ್, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!