ಹರಿಹರ ಪಳ್ಳತ್ತಡ್ಕ : ಶ್ರೀ ಹರಿಹರೇಶ್ವರ ದೇವಸ್ಥಾನದ ತೋಟದಲ್ಲಿ ವಿಸ್ಮಯ – ಕೃಷಿ ತೋಟದಲ್ಲಿ ಬೆಳೆದ ಬರೋಬ್ಬರಿ 21 ಕೆ.ಜಿ ತೂಕದ ಬೃಹತ್ “ಕುಂಬಳಕಾಯಿ”

ಸಾಧಾರಣವಾಗಿ ನಾವು ಮಾರುಕಟ್ಟೆಯಲ್ಲಿ 3 ರಿಂದ 5 ಕೆ.ಜಿ ತೂಕದ ಕುಂಬಳಕಾಯಿಗಳನ್ನು ನೋಡಿರುತ್ತೇವೆ. ಆದರೆ ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದ ಅಡಿಕೆ ತೋಟದಲ್ಲಿ ವಿಸ್ಮಯ ಎಂಬಂತೆ ಬರೋಬ್ಬರಿ 21 ಕೆ.ಜಿ ತೂಕದ ಬೃಹತ್ “ಕುಂಬಳಕಾಯಿ”ಯೊಂದು ಬೆಳೆದಿದ್ದು, ದೇವಳದ ಅಡಿಕೆ ತೋಟ ಪುನರ್ಚೇತನ ಮಾಡುವ ಸಂದರ್ಭದಲ್ಲಿ ಅಡಿಕೆ ಗಿಡದ ಬುಡಗಳಲ್ಲಿ ಕುಂಬಳಕಾಯಿ, ಚೀನಿಕಾಯಿ ಹಾಗೂ ಸೌತೆಕಾಯಿ ಬೀಜಗಳನ್ನು ನಾಟಿ ಮಾಡಿದ್ದು, ಇದೀಗ ಅವುಗಳಲ್ಲಿ ತರಕಾರಿಗಳು ಬೆಳೆದಿದ್ದು, ಪ್ರಕೃತಿ ವಿಸ್ಮಯ ಎಂಬಂತೆ ಕುಂಬಳಕಾಯಿಯೊಂದು ಅಚ್ಚರಿಯ ರೀತಿಯಲ್ಲಿ ದೈತ್ಯಾಕಾರವಾಗಿ ಬೆಳೆದಿದೆ. ಇದು ದೇವಸ್ಥಾನದ ಮದ್ಯಾಹ್ನದ ಅನ್ನದಾಸೋಹ ಪ್ರಸಾದಕ್ಕೆ ಸಹಕಾರಿಯಾಗುತ್ತದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪಡ್ಪು ತಿಳಿಸಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading