ಎಲಿಮಲೆ: ಮರಾಟಿ ಗೆಳೆಯರ ಬಳಗ ಮರ್ಕಂಜ ಇದರ ಆಶ್ರಯದಲ್ಲಿ ಕ್ರಿಕೆಟ್ ಪಂದ್ಯಾಟ : ಪ್ರಥಮ – ಕಿಂಗ್ಸ್ ಕಕ್ಕೆಬೆಟ್ಟು ; ದ್ವಿತೀಯ – ಕುಡೆಂಬಿ ಬುಲ್ಡೋಜರ್ಸ್

ಮಾರಾಟಿ ಗೆಳೆಯರ ಬಳಗ ಮರ್ಕಂಜ ಇದರ ಆಶ್ರಯದಲ್ಲಿ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಮಾರಾಟಿ ಟ್ರೋಫಿ -2026 ಇಂದು ಸರಕಾರಿ ಪ್ರೌಢ ಶಾಲೆ ಎಲಿಮಲೆಯಲ್ಲಿ ನಡೆಯಿತು.
ಪಂದ್ಯಾಟದಲ್ಲಿ ಪ್ರಥಮ ಬಹುಮಾನ ಹತ್ತು ಸಾವಿರ ನಗದು ಮತ್ತು ಮರಾಟಿ ಟ್ರೋಫಿಯನ್ನು ಕಿಂಗ್ಸ್ ಕಕ್ಕೆಬೆಟ್ಟು ಮತ್ತು ದ್ವಿತೀಯ ಬಹುಮಾನ ಆರು ಸಾವಿರ ರೂಪಾಯಿ ನಗದು ಮತ್ತು ಮರಾಟಿ ಟ್ರೋಫಿಯನ್ನು ನಿತ್ಯಾನಂದ ಕುಡೆಂಬಿ ಮಾಲಕತ್ವದ ಕುಡೆಂಬಿ ಬುಲ್ದೊಜರ್ಸ್ ಪಡೆದುಕೊಂಡಿತು. ತ್ರಿತೀಯ ಬಹುಮಾನವನ್ನು ಶಿವಾಜಿ ಬ್ರದರ್ಸ್ ಚೆಂಬು ಹಾಗೂ ಚತುರ್ಥ ಬಹುಮಾನ ವನ್ನು ಬ್ಲಾಕ್ ಟಾಪ್ ಕೂಟೇಲು ತಂಡ ಪಡೆದುಕೊಂಡಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಪುರುಷೋತ್ತಮ ಸುಳ್ಳಿ, ಲ್ಯಾಂಪ್ಸ್ ಸೊಸೈಟಿ ನಿರ್ದೇಶಕ ಭವಾನಿಶಂಕರ್ ಕಲ್ಮಡ್ಕ, ಉದ್ಯಮಿ ನಿತ್ಯಾನಂದ ಕುಡೆಂಬಿ ಹಾಗೂ ಹಿರಿಯ ಆಟಗಾರ ನಾರಾಯಣ ನಾಯ್ಕ ಅಜ್ಜಿಕಲ್ಲು ಭಾಗವಹಿಸಿ ಬಹುಮಾನ ವಿತರಿಸಿದರು.
ಸಂಘಟಕರಾದ ಭರತ್ ಮರ್ಕಂಜ, ಕೀರ್ತನ್ ಮರ್ಕಂಜ ಹಾಗೂ ಪ್ರಯೋಜಕರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading