ಮರ್ಕಂಜ : “ಕುಣಿತ ಭಜನೆ ಹಾಗೂ ಭಜನಾ ಅಭ್ಯಾಸ ತರಬೇತಿ ಶಿಬಿರ”ದ ಸಮಾರೋಪ ಸಮಾರಂಭ

ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ವತಿಯಿಂದ ಮೇ.10 ರಿಂದ ಆರಂಭವಾದ ಕುಣಿತ ಭಜನೆ ಭಜನಾ ಅಭ್ಯಾಸ ಮತ್ತು ಸಂಸ್ಕಾರ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭ ಮೇ.24 ರಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು. 

. . . . . . . . .

ಕಾವೂರು ಶ್ರೀ ಮಹಾವಿಷ್ಣು ದೇವಸ್ಥಾನದ ಅರ್ಚಕರಾದ ರಾಘವೇಂದ್ರ ಭಟ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಭಜನಾ ಮಂಡಳಿ ಅಧ್ಯಕ್ಷರಾದ ನವೀನ್ ಅಳವುಪಾರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

. . . . . . .

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ಎನ್.ಎಂ.ಸಿ ಸುಳ್ಯ ಇದರ ಉಪನ್ಯಾಸಕರಾದ ಡಾ. ಅನುರಾಧಾ ಕುರುಂಜಿ ಮಾತನಾಡಿ “14 ದಿನಗಳ ಕಾಲ ನಡೆದ ಶಿಬಿರದಲ್ಲಿ ಭಾಗವಹಿಸಿದ ಪ್ರತಿಯೊಬ್ಬರ ಮನೆಯಲ್ಲಿ ಪ್ರತಿದಿನ ಸಂಜೆ 7:00 ರಿಂದ 8:00 ಗಂಟೆಯ ಒಳಗೆ ಭಜನೆಯನ್ನು ಮಾಡಬೇಕು. ಪ್ರತಿದಿನ ಬೆಳಿಗ್ಗೆ ಶ್ಲೋಕಗಳನ್ನು ಹೇಳಬೇಕು. ಮಗುವಿನ ತಂದೆ ತಾಯಿ ಧಾರ್ಮಿಕ ವಿಚಾರಗಳಲ್ಲಿ ಮಕ್ಕಳು ಹೆಚ್ಚಿನ ಒತ್ತು ನೀಡುವಂತೆ ಮಾಡಬೇಕು. ಜೊತೆ ಜೊತೆಗೆ ಉತ್ತಮ ಸಂಸ್ಕಾರ ನಮ್ಮ ಧರ್ಮದ ಸಂಸ್ಕೃತಿ ಸಂಪ್ರದಾಯಗಳನ್ನು ಆಚಾರ ವಿಚಾರಗಳನ್ನು ಕಲಿಸುವ ಮೂಲಕ ಉತ್ತಮ ವ್ಯಕ್ತಿಗಳಾಗಿ ಸಮಾಜದಲ್ಲಿ ಬದುಕುವಂತೆ ರೂಪಿಸಬೇಕು” ಎಂದು ಹೇಳಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading