ಸವಣೂರಿನಲ್ಲಿ ಅದ್ದೂರಿಯಾಗಿ ನಡೆದ ಸೀತಾ ಕಸ್ತೂರಿ ಕಲ್ಯಾಣ 50ರ ಸಂಭ್ರಮ ;  ಸೀತಾರಾಮ ರೈ ಅವರ 50 ನೇ ವಿವಾಹ ವಾರ್ಷಿಕೋತ್ಸವ ಕಣ್ತುಂಬಿಕೊಂಡ ಸಾವಿರಾರು ಅಭಿಮಾನಿಗಳು ;  ಯುವ ಪೀಳಿಗೆಗೆ ಸೀತಾರಾಮ ರೈಗಳು ಮಾದರಿ – ಗಣ್ಯರ ಅಭಿಮತ

ಸವಣೂರು ಶಿಲ್ಪಿ ಸಹಕಾರಿ ರತ್ನ ಕೆ. ಸೀತಾರಾಮ ರೈ ಮತ್ತು ಶ್ರೀಮತಿ ಕಸ್ತೂರಿಕಲಾ ಎಸ್. ರೈ ಯವರ ಮದುವೆಯ 50 ನೇ ವಾರ್ಷಿಕೋತ್ಸವದ ಪ್ರಯುಕ್ತ ಅವರ ರಶ್ಮಿ ನಿವಾಸದಲ್ಲಿ ಅದ್ದೂರಿಯಾಗಿ ಸೀತಾ ಕಸ್ತೂರಿ ಕಲ್ಯಾಣ 50ರ ಸಂಭ್ರಮ ಮೇ.22 ಮತ್ತು 23ರಂದು ನಡೆಯಿತು.

. . . . . . . . .

ಮೇ. 23 ರಂದು ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹಾಗೂ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಗಳು ಉಪಸ್ಥಿತರಿದ್ದು ಸೀತಾರಾಮರೈ ದಂಪತಿಗಳಿಗೆ ಶುಭಹಾರೈಸಿದರು.

. . . . . . .

ಮಂಗಳೂರಿನ ಲಕ್ಷ್ಮೀ ಮೆಮೋರಿಯಲ್ ಎಜ್ಯುಕೇಶನ್ ಟ್ರಸ್ಟ್ ನ ಸಂಸ್ಥಾಪಕರಾದ ಎ‌.ಜೆ. ಶೆಟ್ಟಿ ಅವರು ದೀಪ ಪ್ರಜ್ವಲನ ಮಾಡಿ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉಪಸ್ಥಿತರಿದ್ದು ಶುಭಹಾರೈಸಿದರು.
ಪುತ್ತೂರಿನ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಕಾವ್ಯ ಶೆಟ್ಟಿ ಅವರು ಅಭಿನಂದನಾ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಯಕ್ಷಧ್ರುಮ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಹಾಗೂ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ಕಂಬಳ ಉದ್ಘೋಷಕರು ಹಾಗೂ ತೀರ್ಪುಗಾರರಾದ ಎಡ್ತೂರು ರಾಜೀವ್ ಶೆಟ್ಟಿ, ಕನ್ನಡ ಚಲನಚಿತ್ರ ರಂಗದ ನಿರ್ಮಾಪಕ ರವಿ ರೈ ಕಳಸ ಅವರನ್ನು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಸನ್ಮಾನಿಸಿದರು.

ಕಾರ್ಯಕ್ರಮದ ಅಂಗವಾಗಿ 50 ದೀಪ ಬೆಳಗಿಸಲಾಯಿತು. ನಂತರ ಸೀತಾರಾಮ ರೈ ದಂಪತಿಗಳು ಹೂ ಹಾರ ಬದಲಾಯಿಸಿ, ಉಂಗುರ ಹಾಕಿ ಸಂಭ್ರಮಿಸಿದರು. ಆಳ್ವಾಸ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಉಸ್ತುವಾರಿಯಲ್ಲಿ ಕಾರ್ಯಕ್ರಮ ಸಾಂಗವಾಗಿ ನಡೆಯಿತು. ಸಾವಿರಕ್ಕೂ ಮಿಕ್ಕಿ ಅಭಿಮಾನಿಗಳು ಉಪಸ್ಥಿತರಿದ್ದರು.

ಸಿಬ್ಬಂದಿಗಳಿಂದ ಅದ್ದೂರಿ ಸನ್ಮಾನ : ಸೀತಾರಾಮ ರೈ ಮಾಲಕತ್ವದ ಸಮೂಹ ಸಂಸ್ಥೆಗಳ ಸಿಬ್ಬಂದಿಗಳು ಮೆರವಣಿಗೆಯಲ್ಲಿ ಪಲ್ಲಕ್ಕಿಯಲ್ಲಿ ಪೇಟ ತಂದು ದಂಪತಿಗಳನ್ನು ಸನ್ಮಾನಿಸಿ,ಹೂ ಹಣ್ಣು, ಮುಡಿ ಅಕ್ಕಿ, ಫಲವಸ್ತು ನೀಡಿ ಗೌರವಿಸಿದರು.

ಸೀತಾ ಕಸ್ತೂರಿ ಕಲ್ಯಾಣ 50ರ ಸಂಭ್ರಮದ ಪ್ರಯುಕ್ತ ಮೇ.22ರಂದು ಮಾಲೆಂಗಲ್ಲು ವಿಜಯಕುಮಾರ್ ತಂತ್ರಿಗಳ ನೇತೃತ್ವದಲ್ಲಿ ಶಿವಕುಮಾರ್ ಎಡಮಂಗಲ ಮಾರ್ಗದರ್ಶನದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮವು ವೇದಮೂರ್ತಿ ಶ್ರೀವತ್ಸ ಕೆದಿಲಾಯ ಅವರ ಉಪಸ್ಥಿತಿಯಲ್ಲಿ ನಡೆಯಿತು. ಮೇ.23ರಂದು ಅಪರಾಹ್ನ ತುಳುನಾಡ ಗಾನಗಾಂಧರ್ವ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading