ಕುಕ್ಕೆ ಸುಬ್ರಹ್ಮಣ್ಯ : ಕುಮಾರಧಾರ ಸ್ನಾನಘಟ್ಟದಲ್ಲಿ ಭಕ್ತಸಂದಣಿ – ರವಿ ಕಕ್ಕೆಪದವು ತಂಡದವರಿಂದ ಸ್ವಚ್ಛತಾ ಕಾರ್ಯ

ಸುಬ್ರಹ್ಮಣ್ಯ ಮೇ 24 : ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟದಲ್ಲಿ ಇಂದು ರವಿವಾರ ಸಾವಿರಾರು ಭಕ್ತರು ಸೇರಿದ್ದರು ತೀರ್ಥ ಸ್ನಾನಕೆಂದು ಬಂದ ಭಕ್ತರು ಅಡ್ಡಾದಿಡ್ಡಿಯಾಗಿ ಎಲ್ಲೆಂದರಲ್ಲಿ ವಾಹನಗಳನ್ನ ನಿಲ್ಲಿಸಿ, ಪದಚಾರಿಗಳಿಗೆ ಹಾಗೂ ರಸ್ತೆ ದಾಟುವವರಿಗೆ ತೊಂದರೆಯನ್ನು ಉಂಟು ಮಾಡಿದ್ದಾರೆ. ಇದಲ್ಲದೆ ಅಡ್ಡಾದಿಡ್ಡಿ ಎಲ್ಲೆಂದರಲ್ಲಿ ಕಸ ಕಡ್ಡಿ ಪ್ಲಾಸ್ಟಿಕ್ ಬಾಟಲ್, ತ್ಯಾಜ್ಯಗಳನ್ನು ಎಸೆದಿದ್ದರು. ಅದರಲ್ಲೂ ಕುಲ್ಕುಂದದಿಂದ ಕುಮಾರಧಾರ ವರೆಗಿನ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ಸಾವಿರಾರುಗಟ್ಟಲೆ ಬಾಟಲ್ ಗಳು ಹಾಗೂ ಪ್ಲಾಸ್ಟಿಕ್ ಅನ್ನು ಯಾತ್ರಾರ್ತಿಗಳು ಎಸೆದಿರುತ್ತಾರೆ. ಇದನ್ನು ಗಮನಿಸಿದ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಸದಸ್ಯರು ತಮ್ಮ ನಾಯಕ ಡಾ. ರವಿ ಕಕ್ಕೆಪದವು ಅವರ ನೇತೃತ್ವದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಸಹಕಾರದೊಂದಿಗೆ ಎಲ್ಲಾ ಕಸ ಕಡ್ಡಿ ಬಾಟಲುಗಳು, ತ್ಯಾಜ್ಯಗಳನ್ನು ಸಂಗ್ರಹಮಾಡಿರುತ್ತಾರೆ. 
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಗಿರೀಶ್ ಆಚಾರ್ಯ ಪೈಲಾಜೆ ಅವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading