ಕುಲ್ಕುಂದ : ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ 9ನೇ ವರ್ಷದ “ವಸಂತ-ವೇದ ಪಾಠ ಶಿಬಿರ”ದ ಸಮಾರೋಪ

ಕುಲ್ಕುಂದ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದ ವತಿಯಿಂದ ನಡೆದ 9ನೇ ವರ್ಷದ “ವಸಂತ-ವೇದ ಪಾಠ ಶಿಬಿರ”ದ ಸಮಾರೋಪ ಸಮಾರಂಭವು ಮೇ.22ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.
ದೇವಸ್ಥಾನದ ಅಧ್ಯಕ್ಷರಾದ ಗಿರಿಧರ ಸ್ಕಂದ ರವರು ಮಾತನಾಡಿ “ಶ್ರೀ ದೇವಳದಲ್ಲಿ ನಡೆಯತಕ್ಕಂತಹ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬಲ್ಲ ಕಾರ್ಯಕ್ರಮಗಳಿಗೆ ಯಾವತ್ತೂ ನಮ್ಮ ಪ್ರೋತ್ಸಾಹ ಇದೆ. ವೇದ ಶಿಬಿರ, ಸಂಸ್ಕಾರ ಶಿಬಿರ, ಭಜನಾ ಶಿಬಿರ ಇತ್ಯಾದಿ ಕಾರ್ಯಕ್ರಮಗಳು ನಿರಂತರವಾಗಿ ಇಲ್ಲಿ ನಡೆಯಬೇಕು” ಎಂದರು.
ದೇವಳದ ಪ್ರಧಾನ ಅರ್ಚಕರು ಹಾಗೂ ಮುಖ್ಯ ಗುರುಗಳಾದ ಗಣೇಶ್ ದೀಕ್ಷಿತ್ ರವರು ಮಾತನಾಡುತ್ತಾ “ಅಧ್ಯಯನ, ಅಧ್ಯಾಪನ, ದಾನ ಹಾಗೂ ಪ್ರತಿಗ್ರಹಣ ಇದರ ಬಗ್ಗೆ ತಿಳಿಸುತ್ತಾ ವಿದ್ಯಾರ್ಥಿಗಳು ಅಧ್ಯಯನ ಅಧ್ಯಾಪನದಲ್ಲಿ ತೊಡಗಿ ದಾನ ಧರ್ಮವನ್ನು ಮಾಡುತ್ತಾ ಸಂಸ್ಕಾರವಂತರಾಗಬೇಕು” ಎಂದು ತಿಳಿಸಿದರು.
ಶಿಬಿರದ ಸಂಚಾಲಕರು ಹಾಗೂ ಅಧ್ಯಾಪಕರೂ ಆದ ಕೃಷ್ಣ ಭಟ್ ಅವರು “ಮಕ್ಕಳಿಗೆ ಎಳವೆಯಲ್ಲಿ ನೀಡಿದ ಸಂಸ್ಕಾರ ಅವರಿಗೆ ಮುಂದಿನ ಜೀವನಕ್ಕೆ ದಾರಿದೀಪವಾಗಲಿದೆ” ಎಂದು ತಿಳಿಸಿದರು.
ವಿದ್ಯಾರ್ಥಿಗಳಾದ ಅರುಣ, ವರುಣ, ಆಶ್ರಿತ್ ಮತ್ತು ಮನು ಇವರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading