ಎಣ್ಮೂರು : ಮಕ್ಕಳ ಭಜನಾ ತರಬೇತಿ ಹಾಗೂ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭ ಹಾಗೂ ಮಾತಾ ಪಿತೃವಂದನಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ನಿಂತಿಕಲ್ಲು ವಲಯ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ನಿಂತಿಕಲ್ಲು ವಲಯ ಶ್ರೀ ಸೀತಾರಾಮಾಂಜನೇಯ ಭಾರತೀ ಮಂದಿರ ಎಣ್ಮೂರು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ನಿಂತಿಕಲ್ಲು ವಲಯ ಇದರ ಸಂಯುಕ್ತ ಆಶ್ರಯದಲ್ಲಿ ಮೇ.15ನೇ ಶುಕ್ರವಾರದಂದು ಉದ್ಘಾಟನೆಗೊಂಡು ಆರಂಭಗೊಂಡ ಮಕ್ಕಳ ಭಜನಾ ತರಬೇತಿ ಮತ್ತು ಸಂಸ್ಕಾರ ಶಿಬಿರ ಇದರ ಸಮಾರೋಪ ಸಮಾರಂಭವು ಮೇ.22 ರಂದು ಶ್ರೀ ಸೀತಾರಾಮಾಂಜನೇಯ ಭಾರತೀ ಮಂದಿರ ಎಣ್ಮೂರು ಇಲ್ಲಿ ನಡೆಯಿತು. 
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನಿಂತಿಕಲ್ಲು ಇದರ ವಲಯಾಧ್ಯಕ್ಷರಾದ ಅನೂಪ್ ಕುಮಾರ್ ಆಳ್ವ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ.ಕ್ಷೇ.ಧ.ಗ್ರಾ.ಯೋ ಬಿ.ಸಿ.ಟ್ರಸ್ಟ್(ರಿ.) ದ.ಕ ಜಿಲ್ಲೆ ಇದರ ನಿರ್ದೇಶಕರಾದ ಬಾಬು ನಾಯಕ್ ಇವರು ಮಾತನಾಡಿ ಕಾರ್ಯಕ್ರಮದ ಹಾಗೂ ಶಿಬಿರದ ವಿದ್ಯಾರ್ಥಿಗಳ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.
ತರಬೇತುದಾರರಾದ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ, ವೆಂಕಟರಮಣ ಆಚಾರ್ ಕಲ್ಮಡ್ಕ, ಸುಹಾಸ್ ಅಲೆಕ್ಕಾಡಿ ಹಾಗೂ ಕು| ಸವಿತಾ ಇವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. 
ಸಮಾರಂಭದಲ್ಲಿ ಪ್ರದರ್ಶನ ನೀಡಿದ ಭಜನಾ ಕಾರ್ಯಕ್ರಮ ಹಾಗೂ ಶ್ಲೋಕ ಪಠಣ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ವೇದಿಕೆಯಲ್ಲಿ ಅತಿಥಿಗಳಾಗಿ ಸೋಮಶೇಖರ ಪೈಕ(ಅಧ್ಯಕ್ಷರು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು, ವಿಶ್ವನಾಥ ಕಲ್ಲೆಂಬಿ – ಅಧ್ಯಕ್ಷರು ಜನಜಾಗೃತಿ ವೇದಿಕೆ ನಿಂತಿಕಲ್ಲು ವಲಯ), ಎನ್.ಜಿ. ಲೋಕನಾಥ ರೈ(ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಶ್ರೀ ಮಹಿಷಮರ್ದಿನಿ ದೇವಸ್ಥಾನ ಕೇರ್ಪಡ), ಲಿಂಗಪ್ಪ ಬೆಳ್ಳಾರೆ(ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ ಎಣ್ಮೂರು), ಅನೂಪ್ ಬಿಳಿಮಲೆ(ಕಾರ್ಯದರ್ಶಿ, ದೇವಕಾನ ಶ್ರೀ ಲಕ್ಷೀನರಸಿಂಹ ದೇವಸ್ಥಾನ ಮುರುಳ್ಯ), ಶ್ರೀಮತಿ ಮಧು ಯತೀಶ್ ಪಾಲೋಳಿ, ಕ್ಷೀರ ಎಂಜನಿಯರಿಂಗ್ ಮುರುಳ್ಯ ಮತ್ತು ವಿಶ್ವನಾಥ ರೈ ಅರ್ಗುಡಿ(ನಿಕಟಪೂರ್ವ ಅಧ್ಯಕ್ಷರು ಶ್ರೀ ಮಂಜುನಾಥ ಭಜನಾ ಪರಿಷತ್ ಸುಳ್ಯ ತಾಲೂಕು) ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ತರಬೇತಿ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು.
ಸಮಾರಂಭದಲ್ಲಿ ವಿದ್ಯಾರ್ಥಿಗಳು ಸಾಮೂಹಿಕ ಪ್ರಾರ್ಥನೆಗೈದರು.
ಮಾಧವ ಗೌಡ(ಯೋಜನಾಧಿಕಾರಿಗಳು, ಶ್ರೀ.ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್(ರಿ.) ಸುಳ್ಯ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಮೇಲ್ವಿಚಾರಕರಾದ ಶ್ರೀಮತಿ ಸವಿತಾ ಶೆಟ್ಟಿ ಇವರ ವಂದನೆ ಸಲ್ಲಿಸಿದರು. ಸುಹಾಸ್ ಅಲೆಕ್ಕಾಡಿಯವರು ಕಾರ್ಯಕ್ರಮ ನಿರೂಪಿಸಿದರು. 
ಸಭಾ ಕಾರ್ಯಕ್ರಮದ ಮಂಚಿತವಾಗಿ ತರಬೇತುದಾರರಾದ ಶ್ರೀಮತೀ ನಳಿನಾಕ್ಷಿ ಕಲ್ಮಡ್ಕ ಇವರ ಮಾರ್ಗದರ್ಶನದಲ್ಲಿ ಶಿಬಿರದ ಎಲ್ಲಾ ವಿದ್ಯಾರ್ಥಿಗಳಿಂದ ಮಾತಾಪಿತೃ ವಂದನಾ ಕಾರ್ಯಕ್ರಮವು ನಡೆಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading