“ಸಹಕಾರ ರತ್ನ” ಸವಣೂರು ಸೀತಾರಾಮ ರೈ ಹಾಗೂ ಕಸ್ತೂರಿಕಲಾ.ಎಸ್ ರೈ ಅವರ ವೈವಾಹಿಕ ಜೀವನದ 50ನೇ ವರ್ಷದ ಸಂಭ್ರಮಾಚರಣೆ

“ಸಹಕಾರ ರತ್ನ” ಸವಣೂರು ಸೀತಾರಾಮ ರೈ- ಕಸ್ತೂರಿಕಲಾ.ಎಸ್ ರೈ ಯವರ ವೈವಾಹಿಕ ಜೀವನದ 50ರ ಸಂಭ್ರಮ ಆಚರಣೆಯ ಪ್ರಯುಕ್ತ ಮೇ.22ರಂದು ಪೂರ್ವಾಹ್ನ ಮಾಲೆಂಗಲ್ಲು ವಿಜಯಕುಮಾರ್ ತಂತ್ರಿಗಳ ನೇತೃತ್ವದಲ್ಲಿ, ಶಿವಕುಮಾರ್ ಭಟ್ ಎಡಮಂಗಲ ಇವರ ಮಾರ್ಗದರ್ಶನದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸವಣೂರು ‘ರತ್ನ ನಿಲಯ’ದಲ್ಲಿ ನಡೆಯಿತು. ವೇದಮೂರ್ತಿ ಶ್ರೀವತ್ಸ ಕೆದಿಲಾಯ ಮತ್ತು ವೆಂಕಟೇಶ ಶಾಸ್ತ್ರಿ(ಕಂಚಿ ಕಾಮಕೋಟಿ ವೇದ ವಿದ್ಯಾಲಯ, ಆರಂಬೂರು, ಸುಳ್ಯ) ಹಾಗೂ ಪುರೋಹಿತ ನಾಗರಾಜ್ ಭಟ್ ಸುಳ್ಯ ರವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸವಣೂರು ಸೀತಾರಾಮ ರೈ ಅವರು ತಾವು ಬಂದ ಹಾದಿಯನ್ನು ಹಂಚಿಕೊಂಡರು. 
ಸೀತಾರಾಮ ರೈಯವರ ಪತ್ನಿ ಕಸ್ತೂರಿಕಲಾ.ಎಸ್ ರೈ, ಮಕ್ಕಳಾದ ರಶ್ಮಿ.ಎ ಶೆಟ್ಟಿ, ಮಹೇಶ್ ರೈ, ಡಾ.ರಾಜೇಶ್ ರೈ, ಅಳಿಯ ಅಶ್ವಿನ್ ಎಲ್.ಶೆಟ್ಟಿ ಸವಣೂರು, ಸೊಸೆಯಂದಿರಾದ ಪಲ್ಲವಿ.ಎಂ ರೈ ಅಶ್ವಿತಾ.ಆರ್ ರೈ, ಮೊಮ್ಮಕ್ಕಳಾದ ಇಶಾನ್ ರೈ, ಅಥರ್ವ ಶೆಟ್ಟಿ, ಅವಿ ಶೆಟ್ಟಿ ಹಾಗೂ ಕುಟುಂಬದ ಬಂಧುಗಳು ಮತ್ತು ಊರ-ಪರವೂರ ಹಿತೈಷಿಗಳು ಉಪಸ್ಥಿತರಿದರು.
ಮೇ.23ರಂದು ಅಪರಾಹ್ನ ಗಂಟೆ 3:00ರಿಂದ ಸಂಗೀತ ಗಾನ ಸಂಭ್ರಮ ಹಾಗೂ ಸಂಜೆ ಗಂಟೆ 5:30ರಿಂದ ಸಭಾ ಕಾರ್ಯಕ್ರಮ, ರಾತ್ರಿ ಗಂಟೆ 8:00ರಿಂದ ಸಹ ಭೋಜನ ನಡೆಯಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading