ಮಂಡೆಕೋಲು ಗ್ರಾ.ಪಂ ಗ್ರಂಥಾಲಯದಲ್ಲಿ 10 ದಿನ ನಡೆದ ವಿಶಿಷ್ಟ ಶಿಬಿರ ಯಶಸ್ವಿ

ಸುಳ್ಯ: ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ದಿನಾಂಕ 10.05.2026 ರಿಂದ 19.05.2026 ರವರೆಗೆ 10 ದಿನಗಳ ವಿಶಿಷ್ಟ ಶಿಬಿರ ಯಶಸ್ವಿಯಾಗಿ ನಡೆದು, 20.05.2026 ರಂದು ಸಮಾರೋಪ ಸಮಾರಂಭ ನಡೆಯಿತು.

. . . . . . . . .

ಶಿಬಿರದ ವಿಶೇಷತೆ:

. . . . . . .
  • 65 ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.
  • 26 ಸಂಪನ್ಮೂಲ ವ್ಯಕ್ತಿಗಳು ದೇಶ, ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ಸಾಧನೆಗೈದವರೇ ಭಾಗವಹಿಸಿದ್ದರು.
  • 38 ವಿಶೇಷ ಅತಿಥಿಗಳು ಸಮಾರೋಪದಲ್ಲಿ ಉಪಸ್ಥಿತರಿದ್ದರು.
  • ಮಂಗಳೂರು, ಕಡಬ, ಮೆಲ್ಕಾರ್, ಕೊಲ್ಲಮೊಗ್ರ ಮುಂತಾದ ದೂರದ ಊರುಗಳಿಂದ ಬಂದ ಸಂಪನ್ಮೂಲ ವ್ಯಕ್ತಿಗಳು ಪೂರ್ಣ ಉಚಿತವಾಗಿ ಸೇವೆ ನೀಡಿರುವುದು ವಿಶೇಷವಾಗಿತ್ತು.

ಭಾಗವಹಿಸಿದ ಗಣ್ಯ ಸಂಪನ್ಮೂಲ ವ್ಯಕ್ತಿಗಳು:
ಸುಬ್ಬು ಸಂಟ್ಯಾರ್ ಸುಬ್ಬು ಮಾವಂಜಿ, ಝೀ ಕನ್ನಡ ಡ್ಯಾನ್ಸರ್ ಕು.ಶ್ರೇಯಾ ಮೇರ್ಕಜೆ ಭರತನಾಟ್ಯ ಕಲಾವಿದೆ, ಹರೀಶ್ ಕ್ಯೊಂಗಾಜೆ, ಶಿಕ್ಷಕರು,ಚದುರಂಗ ಆಟಗಾರರು,
ನವೀನ್ ಮಂಗಳೂರು ವಿನ್ಯಾಸಕಾರರು ,ಗೀತಾಂಜಲಿ ಟಿ. ಜಿ. ಸಂಚಾಲಕರು ಮೊಂಟೆಸ್ಸೂರಿ ವಿದ್ಯಾಸಂಸ್ಥೆ ಸುಳ್ಯ ಸುನಂದ,ಲಕ್ಷ್ಮಿ, ನಿವೃತ್ತ ಶಿಕ್ಷಕರು
ಡಾ. ರವೀಂದ್ರ ಐತಾಳ್ ವೖದ್ಯರು, ಉರಗತಜ್ಞರು, ಸುರೇಶ್ ಕಣೆಮರಡ್ಕ ಗ್ರಂಥಾಲಯ ಸಮಿತಿ ಸದಸ್ಯರು,ಡಾ. ವಿಷ್ಮಾ, ಡಾ. ಶ್ರೀ ರಕ್ಷಾ, ವೖದ್ಯರು ಡಾ. ಸುಬ್ರಹ್ಮಣ್ಯ ಭಟ್, ಡಾ. ಪದ್ಮನಾಭ ಭಟ್, ವರ್ಲ್ಡ್ ರೆಕಾರ್ಡ್ ಸಾಧಕ ಅಭಿಷೇಕ್ ಡಿಂಪಲ್ ಚೊಕ್ಕಾಡಿ ಕಾಲೇಜು ವಿದ್ಯಾರ್ಥಿ ,,ತೇಜಸ್ಸಿನಿ ಅಂಬೆಕಲ್ಲು ಶಿಕ್ಷಕರು (ಮೆಲ್ಕಾರ್)
ಕುಸುಮಾಧರ ಕಡಬ ಕಲಾವಿದರು, ಸಂದೀಪ್, ಸೌಮ್ಯ ಉಪ ವಲಯಾರಣ್ಯಾಧಿಕಾರಿಗಳು
ಸುಜಾತ ಬ್ಯಾಂಕ್ ಮಾಹಿತಿ ನೀಡಿದರು.
ತುಳಸಿ, ದಯಾಪ್ರಸಾದ್ ವನಸಿರಿ ಮತ್ತು ನರ್ಸರಿಗೆ ಭೇಟಿ ನೀಡಲಾಯಿತು.‌


ಶಿಬಿರದ ಚಟುವಟಿಕೆ:
ಕುಂಬಾರ ಕರ್ಮಿಯ ಗ್ರಂಥಾಲಯಕ್ಕೆ ಪ್ರಾತ್ಯಕ್ಷಿಕೆ, ಅರಣ್ಯ ಇಲಾಖೆಯ ಉಪವಲಯಾಧಿಕಾರಿಗಳು ಮತ್ತು ಅರಣ್ಯಪಾಲಕರೊಂದಿಗೆ ಅರಣ್ಯ ಭೇಟಿ, ಕಾಡುಗಳ ಪರಿಚಯ, ಜಾನಪದ ನೃತ್ಯ, ಗಟ್ಟಿ ಓದು, ಗ್ರಂಥಾಲಯ ಪಂಚಾಯತ್ ರಾಜ್ ಮಾಹಿತಿ, ಕಥೆ-ಕವನ ರಚನೆ, ಹಾವು ಮತ್ತು ನಾವು, ದೇಶಭಕ್ತಿಗೀತೆ, ಕರಕುಶಲ ವಸ್ತು ತಯಾರಿ, ವನಸಿರಿಗೆ ಪ್ರವಾಸ ಕೈಗೊಳ್ಳಲಾಯಿತು.

ಶಿಬಿರದಲ್ಲಿ ಪ್ರತಿ ದಿನ “ಮಕ್ಕಳ ಜ್ಞಾನ ಹಬ್ಬ” ಶೀರ್ಷಿಕೆಯಡಿ ಸೆಲ್ಫಿ ಕಾರ್ನರ್ ಪೋಟೋ ತೆಗೆಯಲು ಅವಕಾಶ, ಗ್ರಂಥಾಲಯವನ್ನು ಬಲೂನು, ಕಲರ್ ಪೇಪರ್‌ಗಳಿಂದ ಗ್ರಂಥಾಲಯ ಅಲಂಕಾರ ಮಾಡಿ ಮಕ್ಕಳ ಜ್ಞಾನ ಹಬ್ಬ ಆಚರಿಸಲಾಯಿತು.


ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ಜಯರಾಮ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಮೇಶ್, ಗ್ರಂಥಾಲಯ ಸಮಿತಿಯ ಸದಸ್ಯರು ಸುರೇಶ್ ಕಣೆಮರಡ್ಕ, ಬಾಲಚಂದ್ರ ಡಿ.ಸಿ, ಸಂಧ್ಯಾ ಮಾವಂಜಿ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದವರು

ಶಿಬಿರದ ಖರ್ಚು-ವೆಚ್ಚ ಸಂಪೂರ್ಣ ಊರಿನ ದಾನಿಗಳ ಸಹಕಾರದಿಂದ ನಡೆದಿದ್ದು, ಕಾಲೇಜು ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಸಹಕರಿಸಿದ್ದರು. ಶಿಬಿರದ ಮಕ್ಕಳೇ ಸಭಾ ನಿರ್ವಹಣೆ ಮಾಡಿರುವುದು ವಿಶೇಷವಾಗಿತ್ತು.

ಪಿಡಿಓ ರಮೇಶ್ ಪಿ. ಸ್ವಾಗತಿಸಿ, ಸಾವಿತ್ರಿ ಕಣೆಮರಡ್ಕ ನಿರೂಪಿಸಿದರು. ದಿವ್ಯಾನ್ಸ್ ಪ್ರಾರ್ಥಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading