ಇಂದಿನ(ಮೇ 22) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಇಂದು ಮತ್ತೆ ಕುಸಿತ ಕಂಡ ರಬ್ಬರ್ ಹಾಗೂ ಕಾಳುಮೆಣಸು ದರ – ಸತತ ಇಳಿಕೆಯ ಬಳಿಕ ಅಡಿಕೆ ಧಾರಣೆಯಲ್ಲಿ ಸ್ಥಿರತೆ ; ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 22 ಮೇ 2026
ವಾರ : ಶುಕ್ರವಾರ
ಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮೇ 22) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.

ಅಡಿಕೆ ಧಾರಣೆ
ಹೊಸ ಅಡಿಕೆ : 415 ರಿಂದ 455
ಹಳೆ ಅಡಿಕೆ : 430 ರಿಂದ 535
ಡಬಲ್ ಚೋಲ್ : 430 ರಿಂದ 535
ಫಟೋರಾ : 345 ರಿಂದ 395
ಉಳ್ಳಿಗಡ್ಡೆ : 270 ರಿಂದ 290
ಕರಿಗೋಟು : 255 ರಿಂದ 285
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಆಧಾರದಲ್ಲಿ ದರವನ್ನು ನಿಗದಿಪಡಿಸಲಾಗುವುದು)
ಇಂದು(ಮೇ 22) ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ನಿನ್ನೆಯ(ಮೇ 21) ಬೆಲೆಗೆ ಹೋಲಿಸಿದರೆ ಮಾರುಕಟ್ಟೆಯಲ್ಲಿ ಸಂಪೂರ್ಣ ಸ್ಥಿರತೆ ಕಂಡುಬಂದಿದೆ.
ಅಡಿಕೆ ಧಾರಣೆ ಸ್ಥಿರತೆ : ಹೊಸ ಅಡಿಕೆ ಗರಿಷ್ಠ ₹455 ಮತ್ತು ಹಳೆ ಅಡಿಕೆ ಹಾಗೂ ಡಬಲ್ ಚೋಲ್ ಧಾರಣೆಗಳು ತಮ್ಮ ಗರಿಷ್ಠ ಬೆಲೆ ₹535 ರಲ್ಲೇ ಮುಂದುವರಿದು ಸ್ಥಿರತೆಯನ್ನು ಕಾಯ್ದುಕೊಂಡಿವೆ.
ಉಪ ಉತ್ಪನ್ನಗಳು : ಫಟೋರಾ, ಉಳ್ಳಿಗಡ್ಡೆ ಮತ್ತು ಕರಿಗೋಟು ಬೆಲೆಗಳಲ್ಲಿ ಇಂದು ಕೂಡ ಯಾವುದೇ ಬದಲಾವಣೆ ದಾಖಲಾಗಿಲ್ಲ.

ಇತರ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ
ಕಾಳುಮೆಣಸು : 565 ರಿಂದ 665
ಹಸಿ ಕೊಕ್ಕೋ : 75 ರಿಂದ 105
ಒಣ ಕೊಕ್ಕೋ : 290 ರಿಂದ 320
ಕೊಬ್ಬರಿ : 130 ರಿಂದ 152
(ಕಾಳುಮೆಣಸಿನ ತೇವಾಂಶ ಮತ್ತು ಲೀಟರ್ ತೂಕದ ಆಧಾರದಲ್ಲಿ ದರದಲ್ಲಿ ವ್ಯತ್ಯಾಸವಾಗುವುದು)
(ಮಿಲ್ಲಿಂಗ್ ಕ್ವಾಲಿಟಿ ಕೊಬ್ಬರಿಯನ್ನು ಮಾತ್ರ ಖರೀದಿ ಮಾಡಲಾಗುವುದು)
ಇಂದು(ಮೇ 22) ಕ್ಯಾಂಪ್ಕೋ ಕೃಷಿ ಮಾರುಕಟ್ಟೆಯಲ್ಲಿ ಕಾಳುಮೆಣಸು ಧಾರಣೆಯು ಮತ್ತೆ ₹5 ರಷ್ಟು ಕುಸಿತ ಕಂಡಿದೆ. ಉಳಿದಂತೆ ಕೊಬ್ಬರಿ ಮತ್ತು ಕೊಕ್ಕೋ ಬೆಲೆಗಳು ನಿನ್ನೆಯ(ಮೇ 21) ದರದಲ್ಲೇ ಸ್ಥಿರತೆಯನ್ನು ಕಾಯ್ದುಕೊಂಡಿವೆ.
ಕಾಳುಮೆಣಸು ಕುಸಿತ : ನಿನ್ನೆ ಗರಿಷ್ಠ ₹670 ರಷ್ಟಿದ್ದ ಕಾಳುಮೆಣಸು ಇಂದು ₹665 ಕ್ಕೆ ಇಳಿಕೆಯಾಗಿದೆ. ಆರಂಭಿಕ ಬೆಲೆಯಲ್ಲೂ ₹5 ರಷ್ಟು ಇಳಿಕೆ ದಾಖಲಾಗಿದೆ.
ಕೊಬ್ಬರಿ ಸ್ಥಿರತೆ : ಕೊಬ್ಬರಿ ಧಾರಣೆಯು ಗರಿಷ್ಠ ₹152 ರ ಮಟ್ಟದಲ್ಲೇ ಮುಂದುವರಿದಿದ್ದು, ಯಾವುದೇ ಏರಿಳಿತ ಕಂಡಿಲ್ಲ.
ಕೊಕ್ಕೋ ಬೆಲೆ : ಹಸಿ ಮತ್ತು ಒಣ ಕೊಕ್ಕೋ ಧಾರಣೆಗಳು ಇಂದು ಕೂಡ ನಿನ್ನೆಯ ದರದಲ್ಲೇ ಸ್ಥಿರತೆಯನ್ನು ಕಾಯ್ದುಕೊಂಡಿವೆ.

ರಬ್ಬರ್ ಧಾರಣೆ
ಗ್ರೇಡ್ : 247
ಲಾಟ್ : 207
ಸ್ಕ್ರ್ಯಾಪ್ ಪ್ರಥಮ ದರ್ಜೆ : 145
ಸ್ಕ್ರ್ಯಾಪ್ ದ್ವಿತೀಯ ದರ್ಜೆ : 135
ಇಂದು(ಮೇ 22) ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಪ್ರವೃತ್ತಿ ಮುಂದುವರಿದಿದೆ. ನಿನ್ನೆ(ಮೇ 21) ಮಧ್ಯಾಹ್ನ ಇಳಿಕೆ ಕಂಡಿದ್ದ ದರಗಳು, ಇಂದು ಕೂಡ ಮತ್ತಷ್ಟು ಕೆಳಕ್ಕೆ ಇಳಿದಿವೆ.
ಗ್ರೇಡ್ ರಬ್ಬರ್ ಕುಸಿತ : ನಿನ್ನೆ ಬೆಳಿಗ್ಗೆ ₹250 ಇದ್ದ ಗ್ರೇಡ್ ರಬ್ಬರ್, ಮಧ್ಯಾಹ್ನ ₹249 ಕ್ಕೆ ಇಳಿದಿತ್ತು. ಇಂದು ಅದು ಮತ್ತಷ್ಟು ಕುಸಿದು ₹247 ಕ್ಕೆ ತಲುಪಿದೆ.
ಲಾಟ್ ರಬ್ಬರ್ : ನಿನ್ನೆ ಮಧ್ಯಾಹ್ನ ₹209 ಇದ್ದ ಲಾಟ್ ರಬ್ಬರ್ ಬೆಲೆ, ಇಂದು ₹207 ಕ್ಕೆ ಕುಸಿದಿದೆ. ಒಟ್ಟಾರೆಯಾಗಿ ನಿನ್ನೆ ಬೆಳಿಗ್ಗಿನ ದರಕ್ಕೆ ಹೋಲಿಸಿದರೆ ₹3 ರಷ್ಟು ಬೆಲೆ ಇಳಿಕೆಯಾಗಿದೆ.
ಸ್ಕ್ರ್ಯಾಪ್ ರಬ್ಬರ್ : ಸ್ಕ್ರ್ಯಾಪ್ ವಿಭಾಗದಲ್ಲಿಯೂ ಬೆಲೆ ಇಳಿಕೆ ಮುಂದುವರಿದಿದ್ದು, ಪ್ರಥಮ ದರ್ಜೆ ₹145 ಹಾಗೂ ದ್ವಿತೀಯ ದರ್ಜೆ ₹135 ಕ್ಕ್ಕೆ ಇಳಿಕೆಯಾಗಿದೆ.

ಕೃಷಿಕರ ಗಮನಕ್ಕೆ : ಈ ಮೇಲಿನ ಮಾರುಕಟ್ಟೆ ಧಾರಣೆಯು ಇಂದಿನ ಮಾರುಕಟ್ಟೆ ಸ್ಥಿತಿ-ಗತಿಯನ್ನು ಆಧರಿಸಿದ್ದು, ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading