ಇಂದಿನ(ಮೇ 21) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಅಡಿಕೆ, ರಬ್ಬರ್ ಮತ್ತು ಕಾಳುಮೆಣಸು ಧಾರಣೆಯಲ್ಲಿ ಭಾರಿ ಕುಸಿತ ; ಕೊಬ್ಬರಿ ಹಾಗೂ ಕೊಕ್ಕೋ ಧಾರಣೆ ಸ್ಥಿರ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 21 ಮೇ 2026
ವಾರ : ಗುರುವಾರ
ಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮೇ 21) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.

ಅಡಿಕೆ ಧಾರಣೆ
ಹೊಸ ಅಡಿಕೆ : 415 ರಿಂದ 455
ಹಳೆ ಅಡಿಕೆ : 430 ರಿಂದ 535
ಡಬಲ್ ಚೋಲ್ : 430 ರಿಂದ 535
ಫಟೋರಾ : 345 ರಿಂದ 395
ಉಳ್ಳಿಗಡ್ಡೆ : 270 ರಿಂದ 290
ಕರಿಗೋಟು : 255 ರಿಂದ 285
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಆಧಾರದಲ್ಲಿ ದರವನ್ನು ನಿಗದಿಪಡಿಸಲಾಗುವುದು)
ಇಂದು(ಮೇ 21) ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಮತ್ತು ಹಳೆ ಅಡಿಕೆ ಸೇರಿದಂತೆ ಬಹುತೇಕ ಎಲ್ಲಾ ತಳಿಗಳ ಧಾರಣೆಯು ಕುಸಿತ ಕಂಡಿದೆ. ನಿನ್ನೆಯ(ಮೇ 20) ಬೆಲೆಗೆ ಹೋಲಿಸಿದರೆ ಮಾರುಕಟ್ಟೆಯಲ್ಲಿ ಇಳಿಮುಖ ಪ್ರವೃತ್ತಿ ಕಂಡುಬಂದಿದೆ.
ಹೊಸ ಅಡಿಕೆ ಕುಸಿತ : ನಿನ್ನೆ ಗರಿಷ್ಠ ₹460 ಇದ್ದ ಹೊಸ ಅಡಿಕೆ ಇಂದು ₹455 ಕ್ಕೆ ಕುಸಿದಿದೆ. ಆರಂಭಿಕ ಬೆಲೆಯಲ್ಲೂ ₹10 ರಷ್ಟು ಇಳಿಕೆಯಾಗಿದೆ.
ಹಳೆ ಅಡಿಕೆ ಇಳಿಕೆ : ಹಳೆ ಅಡಿಕೆ ಮತ್ತು ಡಬಲ್ ಚೋಲ್ ಧಾರಣೆಗಳು ಇಂದು ಗರಿಷ್ಠ ₹535 ಕ್ಕೆ ಕುಸಿದಿವೆ.
ಉಪ ಉತ್ಪನ್ನಗಳು : ಉಳ್ಳಿಗಡ್ಡೆ ಮತ್ತು ಕರಿಗೋಟು ಬೆಲೆಗಳಲ್ಲಿ ಕೆಜಿಗೆ ತಲಾ ₹5 ರಷ್ಟು ಇಳಿಕೆ ದಾಖಲಾಗಿದೆ. ಫಟೋರಾ ಬೆಲೆ ಮಾತ್ರ ಬದಲಾವಣೆ ಇಲ್ಲದೆ ಸ್ಥಿರವಾಗಿದೆ.

ಇತರ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ
ಕಾಳುಮೆಣಸು : 570 ರಿಂದ 670
ಹಸಿ ಕೊಕ್ಕೋ : 75 ರಿಂದ 105
ಒಣ ಕೊಕ್ಕೋ : 290 ರಿಂದ 320
ಕೊಬ್ಬರಿ : 130 ರಿಂದ 152
(ಕಾಳುಮೆಣಸಿನ ತೇವಾಂಶ ಮತ್ತು ಲೀಟರ್ ತೂಕದ ಆಧಾರದಲ್ಲಿ ದರದಲ್ಲಿ ವ್ಯತ್ಯಾಸವಾಗುವುದು)
(ಮಿಲ್ಲಿಂಗ್ ಕ್ವಾಲಿಟಿ ಕೊಬ್ಬರಿಯನ್ನು ಮಾತ್ರ ಖರೀದಿ ಮಾಡಲಾಗುವುದು)
ಇಂದು(ಮೇ 21) ಕ್ಯಾಂಪ್ಕೋ ಕೃಷಿ ಮಾರುಕಟ್ಟೆಯಲ್ಲಿ ಕಾಳುಮೆಣಸು ಧಾರಣೆಯು ಮತ್ತೆ ₹5 ರಷ್ಟು ಕುಸಿತ ಕಂಡಿದೆ. ಉಳಿದಂತೆ ಕೊಬ್ಬರಿ ಮತ್ತು ಕೊಕ್ಕೋ ಬೆಲೆಗಳು ನಿನ್ನೆಯ(ಮೇ 20) ದರದಲ್ಲೇ ಸ್ಥಿರತೆಯನ್ನು ಕಾಯ್ದುಕೊಂಡಿವೆ.
ಕಾಳುಮೆಣಸು ಕುಸಿತ : ನಿನ್ನೆ ಗರಿಷ್ಠ ₹675 ರಷ್ಟಿದ್ದ ಕಾಳುಮೆಣಸು ಇಂದು ₹670 ಕ್ಕೆ ಇಳಿಕೆಯಾಗಿದೆ. ಆರಂಭಿಕ ಬೆಲೆಯಲ್ಲೂ ₹5 ರಷ್ಟು ಇಳಿಕೆ ದಾಖಲಾಗಿದೆ.
ಕೊಬ್ಬರಿ ಸ್ಥಿರತೆ : ಕೊಬ್ಬರಿ ಧಾರಣೆಯು ಗರಿಷ್ಠ ₹152 ರ ಮಟ್ಟದಲ್ಲೇ ಮುಂದುವರಿದಿದ್ದು, ಯಾವುದೇ ಏರಿಳಿತ ಕಂಡಿಲ್ಲ.
ಕೊಕ್ಕೋ ಬೆಲೆ : ಹಸಿ ಮತ್ತು ಒಣ ಕೊಕ್ಕೋ ಧಾರಣೆಗಳು ನಿನ್ನೆಯ ದರದಲ್ಲೇ ಸ್ಥಿರತೆಯನ್ನು ಕಾಯ್ದುಕೊಂಡಿವೆ.

ರಬ್ಬರ್ ಧಾರಣೆ
ಗ್ರೇಡ್ : 249
ಲಾಟ್ : 209
ಸ್ಕ್ರ್ಯಾಪ್ ಪ್ರಥಮ ದರ್ಜೆ : 146
ಸ್ಕ್ರ್ಯಾಪ್ ದ್ವಿತೀಯ ದರ್ಜೆ : 136
ಇಂದು(ಮೇ 21) ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಪರ್ವ ಮುಂದುವರಿದಿದೆ. ನಿನ್ನೆ(ಮೇ 20) ಮತ್ತು ಇಂದು ಎರಡು ಬಾರಿಯಂತೆ ಬೆಲೆಗಳಲ್ಲಿ ಇಳಿಕೆ ಕಂಡುಬಂದಿದ್ದು, ನಿನ್ನೆ ಮಧ್ಯಾಹ್ನದ ನಂತರ ಆರಂಭವಾದ ಇಳಿಮುಖ ಪ್ರವೃತ್ತಿ ಇಂದು ಕೂಡ ಮುಂದುವರಿದಿದ್ದು, ಮಧ್ಯಾಹ್ನದ ವೇಳೆಗೆ ಬೆಲೆಗಳು ಮತ್ತಷ್ಟು ಕೆಳಕ್ಕೆ ಇಳಿದಿವೆ.
ಗ್ರೇಡ್ ರಬ್ಬರ್ ಕುಸಿತ : ನಿನ್ನೆ ಬೆಳಿಗ್ಗೆ ₹255 ರಷ್ಟಿದ್ದ ಗ್ರೇಡ್ ರಬ್ಬರ್ ಬೆಲೆ, ಇಂದು ಮಧ್ಯಾಹ್ನದ ವೇಳೆಗೆ ₹249 ಕ್ಕೆ ತಲುಪಿದೆ. ಸತತ ಕುಸಿತದಿಂದಾಗಿ ಕೆಜಿಗೆ ₹6 ರಷ್ಟು ಭಾರಿ ಇಳಿಕೆ ದಾಖಲಾಗಿದೆ.
ಲಾಟ್ ರಬ್ಬರ್: ನಿನ್ನೆ ಬೆಳಿಗ್ಗೆ ₹214 ಇದ್ದ ಲಾಟ್ ರಬ್ಬರ್ ಬೆಲೆ, ಇಂದು ಮಧ್ಯಾಹ್ನದ ಹೊತ್ತಿಗೆ ₹209 ಕ್ಕೆ ಕುಸಿದಿದೆ. ಒಟ್ಟಾರೆಯಾಗಿ ₹5 ರಷ್ಟು ಬೆಲೆ ಇಳಿಕೆಯಾಗಿದೆ.
ಸ್ಕ್ರ್ಯಾಪ್ ರಬ್ಬರ್: ಸ್ಕ್ರ್ಯಾಪ್ ವಿಭಾಗದಲ್ಲಿಯೂ ಬೆಲೆ ಇಳಿಕೆ ಮುಂದುವರಿದಿದ್ದು, ಪ್ರಥಮ ದರ್ಜೆ ₹146 ಹಾಗೂ ದ್ವಿತೀಯ ದರ್ಜೆ ₹136 ಕ್ಕೆ ಇಳಿಕೆಯಾಗಿದೆ.
ಮಾರುಕಟ್ಟೆ ಸ್ಥಿತಿ : ನಿನ್ನೆ ಮತ್ತು ಇಂದು ಎರಡು ದಿನಗಳೂ ಕೂಡ ಮಧ್ಯಾಹ್ನದ ನಂತರ ಬೆಲೆಗಳು ಮತ್ತೆ ಕುಸಿತ ಕಾಣುತ್ತಿವೆ.

ಕೃಷಿಕರ ಗಮನಕ್ಕೆ : ಈ ಮೇಲಿನ ಮಾರುಕಟ್ಟೆ ಧಾರಣೆಯು ಇಂದಿನ ಮಾರುಕಟ್ಟೆ ಸ್ಥಿತಿ-ಗತಿಯನ್ನು ಆಧರಿಸಿದ್ದು, ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading