ಭಾವ ತೀರ ಯಾನ ಚಲನಚಿತ್ರ ನಾಳೆ ಸುಳ್ಯದಲ್ಲಿ ಕೊನೆಯ ಪ್ರದರ್ಶನ – ಸುಳ್ಯದ ಪ್ರತಿಭೆಯ ಬೆಂಬಲಿಸಲು ಕೊನೆಯ ಅವಕಾಶ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ” ಸಿನಿಮಾ ಸುಳ್ಯದಲ್ಲಿ ಮರುಬಿಡುಗಡೆಗೊಂಡು ಎರಡು ವಾರಗಳಿಂದ ಉತ್ತಮ ಪ್ರದರ್ಶನ ಕಾಣುತ್ತಿದೆ. ಸುಳ್ಯ ಭಾರತ್ ಸಿನೇಮಾಸ್ ( ಸಂತೋಷ್ ಚಿತ್ರಮಂದಿರ) ನಲ್ಲಿ ಮೇ. 21 ಗುರುವಾರ ಸಂಜೆ 4.15 ಕ್ಕೆ ಕೊನೆಯ ಚಿತ್ರ ಪ್ರದರ್ಶನ ನಡೆಯಲಿದೆ. ಪುತ್ತೂರಿನಲ್ಲಿ ನಿರೀಕ್ಷೆಗೂ ಮೀರಿ ಯಶಸ್ವಿ  ಪ್ರದರ್ಶನಗೊಂಡಿದ್ದ ಭಾವ ತೀರ ಯಾನ ಸುಳ್ಯದಲ್ಲಿ ಮೇ.08 ರಿಂದ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಸುಳ್ಯದ ಯುವ ಪ್ರತಿಭೆಯ ಬೆಳವಣಿಗೆಗೆ ಸುಳ್ಯದ ಜನತೆ ಸಿನೇಮಾ ವೀಕ್ಷಿಸುವ ಮೂಲಕ ಬೆಂಬಲ ವ್ಯಕ್ತಪಡಿಸಬೇಕಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading