ಗುತ್ತಿಗಾರು : ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ವಚ್ಛತೆ ಮೂಲಕ ಮಾದರಿಯಾದ ದಂಪತಿಗಳಿಗೆ ಅಕ್ಕಿ ವಿತರಣೆ

ಜಿಲ್ಲಾ ಮಟ್ಟದ ಯೋಗಾಸನ ಮತ್ತು ರಕ್ತದಾನ ಶಿಬಿರ ಪ್ರಯುಕ್ತ ಆಯೋಜನೆ ಮಾಡಲಾಗಿದ್ದ ಸಹಾಯ ನಿಧಿ ಕೂಪನ್ ನ ಬಹುಮಾನಗಳನ್ನು ವಿತರಣೆ ಮಾಡಲಾಗಿದ್ದು, ಕೆಲವೊಂದು ಬಹುಮಾನಗಳು ಹಾಗೆ ಉಳಿಕೆ ಆಗಿದ್ದು ಇದರ ಬಾಬ್ತು ಇದ್ದ 50 ಕೆ.ಜಿ ಅಕ್ಕಿಯನ್ನು ಗುತ್ತಿಗಾರಿನಲ್ಲಿ ಸ್ವಚ್ಛತೆಯ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತ ಮಾದರಿ ಜೀವನ ನಡೆಸುತ್ತಿರುವ ಶ್ರೀಮತಿ ಲೀಲಾವತಿ ಅನಂತಕೃಷ್ಣ ಛತ್ರಪ್ಪಾಡಿ ಅವರಿಗೆ ವಿತರಣೆ ಮಾಡಲಾಯಿತು. 
ಈ ಸಂದರ್ಭದಲ್ಲಿ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ವೆಂಕಟ್ ದಂಬೆಕೋಡಿ, ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶರತ್ ಎ.ಕೆ, ಶಶಿಧರ್ ಕೊಲ್ಯ, ದುರ್ಗಾನಾಥ್ ಅಚ್ರಪ್ಪಾಡಿ, ದಿವ್ಯಾ ಲಕ್ಷ್ಮಣ್ ದೇವಶ್ಯ, ಟ್ರಸ್ಟ್ ಉಪಾಧ್ಯಕ್ಷರಾದ ಮೋಹನ್ ದಾಸ್ ಶಿರಾಜೆ ಹಾಗೂ ಅಧ್ಯಕ್ಷರಾದ ಚಂದ್ರಶೇಖರ ಕಡೋಡಿ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading