ಪ್ರಣವ ಸೌಹಾರ್ದ ಸಹಕಾರಿ ಸಂಘ‌ದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ- ಶೇ 10% ಡಿವಿಡೆಂಡ್ ಘೋಷಣೆ –  ಡಿಜಿಟಲ್ ಬ್ಯಾಂಕಿಂಗ್ ಮೊಬೈಲ್ ಆಪ್ ಬಿಡುಗಡೆ

ಮಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿ ದಕ್ಷಿಣ ಕನ್ನಡ, ಕೊಡಗು , ಮೈಸೂರು ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಿರುವ ಸಹಕಾರಿ ಕ್ಷೇತ್ರದ ಮುಂಚೂಣಿ ಸಂಸ್ಥೆಯಾದ ಪ್ರಣವ ಸೌಹಾರ್ದ ಸಹಕಾರಿ ಸಂಘ‌ ನಿಯಮಿತದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ ದಿನಾಂಕ 17.05.2026 ನೇ ಆದಿತ್ಯವಾರದಂದು ಪದವಿನಂಗಡಿಯ ಬೆನಕ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಜಿ ಆರ್ ಪ್ರಸಾದ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರು ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಹಲವಾರು ಪ್ರಥಮಗಳನ್ನು ನೀಡಿ ಮಾದರಿಯಾದ ಸಂಸ್ಥೆಯು ಪ್ರಸ್ತುತ 8 ಶಾಖೆಗಳನ್ನು ಹೊಂದಿದ್ದು 2025-26 ನೇ ಸಾಲಿನ ಆರ್ಥಿಕ ವರ್ಷದಲ್ಲಿ 100 ಕೋಟಿ ವ್ಯವಹಾರ ನಡೆಸಿದ್ದು 8,169 ಸದಸ್ಯರನ್ನು ಹೊಂದಿ 1.82 ಕೋಟಿ ಪಾಲು ಬಂಡವಾಳವನ್ನು , 45 ಕೋಟಿ ಠೇವಣಿ, 35 ಕೋಟಿ ಭದ್ರತಾ ಸಾಲ , 2 ಕೋಟಿ ಮೀಸಲು ನಿಧಿಗಳನ್ನು , 45 ಕೋಟಿ ಕಾರ್ಯನಿರತ ಬಂಡವಾಳವನ್ನು ಹೊಂದಿ ರೂ. 63.61 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರುಗಳಿಗೆ ಶೇ. 10 % ಡಿವಿಡೆಂಡ್ ಘೋಷಣೆ ಮಾಡಿದರು. ಸಂಘವು ಸ್ವಂತ ನಿವೇಶನ ಹೊಂದಿದ್ದು ಮುಂದಿನ 2 ವರ್ಷಗಳೊಳಗೆ ಸ್ವಂತ ಆಡಳಿತ ಕಛೇರಿ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು. ಸದಸ್ಯರುಗಳಿಗೆ ಹಣ ವರ್ಗಾವಣೆಗಾಗಿ NEFT/RTGS ಅನುಕೂಲಕ್ಕಾಗಿ ಡಿಜಿಟಲ್ ಆಧಾರಿತ ಮೊಬೈಲ್ ಆಪ್ ಬಿಡುಗಡೆ ಮಾಡಲಾಯಿತು. ಸದಸ್ಯರು ಸಂಸ್ಥೆಯಲ್ಲಿರುವ ತಮ್ಮ ಉಳಿತಾಯ ಖಾತೆಯಿಂದ ಅವರ ಬ್ಯಾಂಕ್ ಖಾತೆಗಳಿಗೆ, ಬ್ಯಾಂಕ್ ಖಾತೆಗಳಿಂದ ಅವರ ಉಳಿತಾಯ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಬಹುದು ಸದಸ್ಯರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ಹಲವಾರು ಸದಸ್ಯರುಗಳು ಪ್ರಣವದ ಸಾಧನೆಗಳನ್ನು ಶ್ಲಾಘಿಸಿದರು. ಉಪಾಧ್ಯಕ್ಷರಾದ ಪ್ರಶಾಂತ್ ಪೈ ಸ್ವಾಗತಿಸಿ , ನಿರ್ದೇಶಕರಾದ ಭಗವಾನ್ ದಾಸ್ ಅಡ್ಯಂತಾಯ ಧನ್ಯವಾದ ಸಲ್ಲಿಸಿದರು. ಅತಿಥಿ ಪತ್ರಿಕೆಯ ಸಂಪಾದಕ ಬಾಲಕೃಷ್ಣ ಪಚ್ಚನಾಡಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮೊದಲು ಸದಸ್ಯರುಗಳು, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

. . . . . . . . .

ಪ್ರಣವ ಸಂಸ್ಥೆಯ ಗ್ರಾಹಕ ಸದಸ್ಯರಿಗೆ ‘ ಮೊಬೈಲ್ ಬ್ಯಾಂಕಿಂಗ್’ ವ್ಯವಸ್ಥೆ ಚಾಲನೆ – ಅಧ್ಯಕ್ಷ ಜಿ ಆರ್ ಪ್ರಸಾದ್..

. . . . . . .


ಪ್ರಣವ ಸೌಹಾರ್ದ ಸಹಕಾರಿ ಸಂಘ ತನ್ನ ಗ್ರಾಹಕ ಸದಸ್ಯರಿಗೆ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜ್ಯಾರಿಗೊಳಿಸಿದೆ. ಇನ್ನು ಮುಂದೆ ಸದಸ್ಯರು ಮೊಬೈಲ್ ಆ್ಯಪ್ ಬಳಸಿ ಪ್ರಣವ ದಲ್ಲಿನ ತಮ್ಮ ಉಳಿತಾಯ ಖಾತೆಯಿಂದ ತಮ್ಮ ಬೇರೆ ಯಾವುದೇ ಬ್ಯಾಂಕಿನ ಖಾತೆಗೆ RTGS/ NEFT ಮೂಲಕ ಹಣ ವರ್ಗಾಯಿಸಲು ಯಾ ಯಾವುದೇ ಬ್ಯಾಂಕಿನ ಖಾತೆಯಿಂದ ಪ್ರಣವದ ತಮ್ಮ ಉಳಿತಾಯ ಖಾತೆಗೆ ಹಣ ವರ್ಗಾವಣೆ ಮಾಡಲು ಈ ವ್ಯವಸ್ಥೆ ಪ್ರಯೋಜನವಾಗಲಿದೆ ಎಂದು ಪ್ರಣವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಜಿ ಆರ್ ಪ್ರಸಾದ್ ರವರು ಹೇಳಿದರು. ಅವರು ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ 2025 -26 ರ ಆರ್ಥಿಕ ವರದಿಯನ್ನು ಮಂಡಿಸುತ್ತಾ ಸಂಸ್ಥೆಯ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಕುರಿತು ನೆರೆದ ಸದಸ್ಯರಿಗೆ ವಿವರಣೆ ನೀಡುತ್ತಾ ಸಂಸ್ಥೆಯು ಎಲ್ಲಾ ಸ್ತರಗಳಲ್ಲಿ ಸಾಧಾರಣ 15 ರಿಂದ 20 ಪ್ರತಿಶತ ವಾರ್ಷಿಕ ಬೆಳವಣಿಗೆ ತೋರುತ್ತಾ ಬಂದಿದೆ ಎಂದರು. ತಾಂತ್ರಿಕತೆ ಅಳವಡಿಕೆ ಮೂಲಕ ಗ್ರಾಹಕರಿಗೆ ಇನ್ನೂ ಉತ್ತಮ ರೀತಿಯ ಸೇವೆಯನ್ನು ನೀಡಲು ಪ್ರಯತ್ನಿಸಲಾಗುವುದು ಎನ್ನುತ್ತಾ ಈ ಸೌಲಭ್ಯವನ್ನು ನಿರ್ಮಿಸಿ ನಿರ್ವಹಿಸುತ್ತಿರುವ ರಾಜ್ಯದ ಪ್ರತಿಷ್ಠಿತ ಸಂಸ್ಥೆ ಆಟೋ ಮೇಷನ್ ಕ್ಲೌಡ್ ಸೊಲ್ಯೂಷನ್ಸ್ ಇವರ ತಂಡವನ್ನು ಶ್ಲಾಘಿಸಿದರು. ಸಂಸ್ಥೆಯು 2025 – 26 ರ ಆರ್ಥಿಕ ವರ್ಷದಲ್ಲಿ ರೂಪಾಯಿ 75. 80 ಲಕ್ಷ ಒಟ್ಟಾರೆ ಲಾಭ ಗಳಿಸಿದ್ದು
ರೂ 63.61 ಲಕ್ಷ ನಿವ್ವಳ ಲಾಭ ಗಳಿಸಿದೆ .ಮೈಸೂರು , ಮಡಿಕೇರಿ ಮತ್ತು ದಕ್ಷಿಣ ಕನ್ನಡ ಮೂರು ಜಿಲ್ಲೆಗಳಲ್ಲಿನ ತನ್ನ ಶಾಖೆ ಗಳಲ್ಲಿ 8000 ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದ್ದು, ಸಂಸ್ಥೆ ಈ ಬಾರಿ ಸದಸ್ಯರಿಗೆ 10 ಪ್ರತಿಶತ ಲಾಭಾಂಶವನ್ನು ನೀಡುವುದಾಗಿ ಪ್ರಕಟಿಸಿದರು.
ಸದಸ್ಯರ ಪ್ರಯೋಜನಕ್ಕಾಗಿ ಜೂನ್ 1 ರಿಂದ ಅನ್ವಯವಾಗುವ ಹಾಗೆ ಮಂಜೂರಾತಿ ಮತ್ತು ವಿತರಣೆ ಗೊಳ್ಳುವ ಎಲ್ಲಾ ರೀತಿಯ ಸಾಲದ ಮೇಲೆ .5 ಪ್ರತಿಶತ ಬಡ್ಡಿ ಕಡಿತಗೊಳಿಸಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು. ಈ ಮೂಲಕ ಅರ್ಹ ಸದಸ್ಯರಿಗೆ ಸಾಲದ ಮೇಲಿನ ಒಟ್ಟಾರೆ ಬಡ್ಡಿ ಪಾವತಿ ಕಡಿಮೆ ಯಾಗಲಿದೆ.
ಮಂಗಳೂರು ಕುಡುಪು ಸಮೀಪ ಸಂಸ್ಥೆ ಖರೀದಿಸಿದ್ದ ನಿವೇಶನದಲ್ಲಿ ಪ್ರಧಾನ ಕಛೇರಿ ನಿರ್ಮಾಣಕ್ಕೆ ಅನುಮತಿ ದೊರೆತಿದ್ದು ಮಳೆಗಾಲ ಕಳೆದ ಬಳಿಕ ಕೆಲಸ ಪ್ರಾರಂಭಿಸುವ ಬಗ್ಗೆ ತಿಳಿ ಹೇಳಿದರು.
ಪ್ರಣವದ ಉಪಾಧ್ಯಕ್ಷ ಶ್ರೀ ಪ್ರಶಾಂತ್ ಪೈ ಯವರ ಸ್ವಾಗತಿಸಿದರು. ನಿರ್ದೇಶಕ ಮತ್ತು ಪ್ರಣವ ಚಾರಿಟಬಲ್ ಟ್ರಸ್ಟ್ ಕೋಶಾಧಿಕಾರಿ ಶ್ರೀ ಸೋಮಪ್ಪ ನಾಯಕ್ ರವರು ಸಂಸ್ಥೆಯ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.ಪ್ರಣವ ಸಹಕಾರಿಯ ಎಲ್ಲ ನಿರ್ದೇಶಕರು, ಸಿಬ್ಬಂದಿಗಳು ಮತ್ತು ಉತ್ತಮ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿದ್ದರು. ನಿರ್ದೇಶಕ ಶ್ರೀ ಭಗವಾನ್ ದಾಸ್ ವಂದನೆ ಸಲ್ಲಿಸಿದರು. ಶ್ರೀ ಬಾಲಕೃಷ್ಣ ಪಚ್ಚನಾಡಿ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಶ್ವೇತಾ ರವರು ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿ ಪ್ರಾರ್ಥನೆ ನೆರವೇರಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading