ಮುದ್ದು ಮಕ್ಕಳ ನೆಚ್ಚಿನ ಶಿಕ್ಷಕಿಯರಾಗಲು ಇಲ್ಲಿದೆ ಅವಕಾಶ – ಬೆಳ್ಳಾರೆ ಜ್ಞಾನದೀಪದಲ್ಲಿ ನರ್ಸರಿ ಶಿಕ್ಷಕಿಯರ ತರಬೇತಿಗೆ ಅರ್ಜಿ ಆಹ್ವಾನ

ಜ್ಞಾನದ ಜಗತ್ತನ್ನು ಏರುವ ಮೊದಲ ಮೆಟ್ಟಿಲು ಪೂರ್ವ ಪ್ರಾಥಮಿಕ ಶಿಕ್ಷಣ, ಮನೆಗಳಿಂದ ಶಿಕ್ಷಣ ಪ್ರಪಂಚದೆಡೆ ಹೊರ ಬರುತ್ತಿರುವ ಪುಟಾಣಿಗಳಿಗೆ ಶಿಕ್ಷಣ ನೀಡುವ ಕಾಯಕವನ್ನು ಮೊಂಟೆಸ್ಸರಿ/ನರ್ಸರಿ ಶಿಕ್ಷಕೀಯರೇ ಮಾಡಬೇಕಿದೆ. ಸದ್ದಿಲ್ಲದೇ ನಡೆಯುತ್ತಿರುವ ಶಿಕ್ಷಣ ಸೇವೆಯ ಜೊತೆಗೆ ತನ್ನ ಉತ್ಕೃಷ್ಟ ತರಬೇತಿಯೊಂದಿಗೆ ಇಂತಹ ಅನೇಕ ಮೊಂಟೆಸ್ಸರಿ ಶಿಕ್ಷಕಿಯರನ್ನು ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದೆ. ಶಿಕ್ಷಕಿಯರ ತರಬೇತಿಯನ್ನು ವಿಭಿನ್ನವಾಗಿ ನಡೆಸುತ್ತಿರುವ ಜ್ಞಾನದೀಪ ಮಗುವಿಗೆ ಗುರುತಿಸಿ ಕಲಿಯಲು ಅನುವು ಮಾಡಿಕೂಡುವ ಕಲಿಕಾ ಪದ್ಧತಿಯಾದ ಮೊಂಟೆಸ್ಸರಿ ವಿಧಾನದ ವಿವಿಧ ಅಧ್ಯಯನ ಮಾದರಿಗಳನ್ನು ತಯಾರಿಸುವುದು ಅವುಗಳನ್ನು ಉಪಯೋಗಿಸಿಕೊಂಡು ಮಗುವಿಗೆ ಪರಿಣಾಮಕಾರಿಯಾಗಿ ಭೋಧಿಸುವ ವಿಧಾನಗಳನ್ನು ಕಲಿಸಿಕೊಡಲಾಗುತ್ತದೆ. ಕೇಂದ್ರ ಸರ್ಕಾರದ ನಿರುದ್ಯೋಗ ನಿರ್ಮೂಲನಾ ಏಜೆನ್ಸಿಯಾದ ಭಾರತ್ ಸೇವಕ್ ಸಮಾಜ ಮತ್ತು ವರ್ಲ್ಡ್ ಸ್ಕಿಲ್ ಕೌನ್ಸಿಲ್ ವತಿಯಿಂದ ಈ ತರಬೇತಿಯನ್ನು ನಡೆಸಲಾಗುತ್ತಿದ್ದು, ಸಂಸ್ಥೆಯ ಮೂಲಕ ತರಬೇತಿ ಪಡೆದ ತರಬೇತಿ ಶಿಕ್ಷಕಿಯರು ಒಂದು ವರ್ಷದಲ್ಲಿ ನಡೆಸಿದ ಶೈಕ್ಷಣಿಕ ಚಟುವಟಿಕೆಗಳು, ದಾಖಲೆಗಳು, ಪ್ರಾಜೆಕ್ಟ್ ಗಳು ಸೇರಿದಂತೆ ಮಗುವಿಗೆ ಕಲಿಸಲು ಸಹಕಾರಿಯಾದ ಅಧ್ಯಯನ ಪರಿಕರಗಳನ್ನು ತಾವೇ ತಯಾರಿಸಿ ಪ್ರದರ್ಶನದ ಮೂಲಕ ವಿವರಿಸುತ್ತಾರೆ. ನಲಿಕಲಿ ಮಾದರಿಯಲ್ಲಿ ಮಕ್ಕಳಿಗೆ ಕಥೆ ಹೇಳಿ ಕೊಡುವುದು, ಪದ್ಯಗಳನ್ನು ರಚಿಸಿ ಹಾಡುವುದನ್ನು ಇಲ್ಲಿ ಕಲಿಸಲಾಗುತ್ತದೆ.
ಪ್ರತಿ ವರ್ಷವು ಇಲ್ಲಿಯ ತರಬೇತಿ ಶಿಕ್ಷಕಿಯರು ಪ್ರದರ್ಶಿಸುವ ಪಾರಂಪ-ರಿಕ ವಸ್ತುಗಳು ಗಮನ ಸೆಳೆಯುತ್ತದೆ. ಅಲಂಕಾರಿಕ ವಸ್ತುಗಳ ತಯಾರಿ, ಪೇಪರ್ ಕ್ರಾಫ್ಟ್, ಚಿತ್ರಕಲೆ, ಕಸದಿಂದ ರಸ ಸೇರಿದಂತೆ ವಿವಿಧ ಕೌಶಲ್ಯ ತರಬೇತಿಗಳನ್ನು, ವಿಶೇಷ ಕಾರ್ಯಗಾರ, ವಿಚಾರಗೋಷ್ಠಿಗಳನ್ನು ನಡೆಸಲಾಗುತ್ತಿದೆ. ತರಬೇತಿ ಜೊತೆಯಲ್ಲಿ ಉಚಿತ ಇಂಗ್ಲೀಷ್ ಸಂವಹನ ಮತ್ತು ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗುತ್ತದೆ. ಸಂಸ್ಥೆಯಲ್ಲಿ 2026-27ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ತರಗತಿಗಳು ಆರಂಭಗೊಂಡಿದ್ದು, ದಾಖಲಾತಿ ಪಡೆಯಲು ಇಚ್ಛೆಸುವವರು ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಬಹುದೆಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading