ಇಂದಿನ(ಮೇ 16) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ – ಕಾಳುಮೆಣಸು ಮತ್ತು ರಬ್ಬರ್ ಧಾರಣೆಯಲ್ಲಿ ಅಲ್ಪ ಇಳಿಕೆ ; ಅಡಿಕೆ ಧಾರಣೆಯಲ್ಲಿ ಸ್ಥಿರತೆ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 16 ಮೇ 2026
ವಾರ : ಶನಿವಾರ
ಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮೇ 16) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.

ಅಡಿಕೆ ಧಾರಣೆ
ಹೊಸ ಅಡಿಕೆ :440 ರಿಂದ 470
ಹಳೆ ಅಡಿಕೆ : 445 ರಿಂದ 540
ಡಬಲ್ ಚೋಲ್ : 440 ರಿಂದ 540
ಫಟೋರಾ : 355 ರಿಂದ 405
ಉಳ್ಳಿಗಡ್ಡೆ : 250 ರಿಂದ 300
ಕರಿಗೋಟು : 265 ರಿಂದ 295
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಆಧಾರದಲ್ಲಿ ದರವನ್ನು ನಿಗದಿಪಡಿಸಲಾಗುವುದು)
ಇಂದು(ಮೇ 16) ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಸಂಪೂರ್ಣ ಸ್ಥಿರತೆ ಕಂಡುಬಂದಿದೆ. ಎಲ್ಲಾ ವಿಧದ ಅಡಿಕೆ ಧಾರಣೆಗಳು ನಿನ್ನೆಯ(ಮೇ 15) ಬೆಲೆಯಲ್ಲೇ ಮುಂದುವರಿದಿವೆ.
ಸ್ಥಿರತೆ : ನಿನ್ನೆ(ಮೇ 15) ಕುಸಿತ ಕಂಡಿದ್ದ ಹಳೆ ಅಡಿಕೆ ಮತ್ತು ಚೋಲ್ ಅಡಿಕೆ ಇಂದು(ಮೇ 16) ಅದೇ ಬೆಲೆಯಲ್ಲಿ(ಗರಿಷ್ಠ ₹540) ಮುಂದುವರಿದಿದೆ.
ಹೊಸ ಅಡಿಕೆ : ಹೊಸ ಅಡಿಕೆ ಧಾರಣೆಯು ಯಾವುದೇ ಬದಲಾವಣೆ ಇಲ್ಲದೆ ₹470 ರ ಮಟ್ಟದಲ್ಲೇ ಸ್ಥಿರವಾಗಿದೆ.
ಉಪ ಉತ್ಪನ್ನಗಳು : ಫಟೋರಾ, ಉಳ್ಳಿಗಡ್ಡೆ ಮತ್ತು ಕರಿಗೋಟು ಬೆಲೆಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.

ಇತರ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ
ಕಾಳುಮೆಣಸು : 585 ರಿಂದ 685
ಹಸಿ ಕೊಕ್ಕೋ : 75 ರಿಂದ 105
ಒಣ ಕೊಕ್ಕೋ : 290 ರಿಂದ 320
ಕೊಬ್ಬರಿ : 130 ರಿಂದ 152
(ಕಾಳುಮೆಣಸಿನ ತೇವಾಂಶ ಮತ್ತು ಲೀಟರ್ ತೂಕದ ಆಧಾರದಲ್ಲಿ ದರದಲ್ಲಿ ವ್ಯತ್ಯಾಸವಾಗುವುದು)
(ಮಿಲ್ಲಿಂಗ್ ಕ್ವಾಲಿಟಿ ಕೊಬ್ಬರಿಯನ್ನು ಮಾತ್ರ ಖರೀದಿ ಮಾಡಲಾಗುವುದು)
ಇಂದು(ಮೇ 16) ಕ್ಯಾಂಪ್ಕೋ ಕೃಷಿ ಮಾರುಕಟ್ಟೆಯಲ್ಲಿ ಕಾಳುಮೆಣಸು ಧಾರಣೆಯು ₹5 ರಷ್ಟು ಇಳಿಕೆ ಕಂಡಿದೆ. ಉಳಿದಂತೆ ಕೊಕ್ಕೋ ಮತ್ತು ಕೊಬ್ಬರಿ ಬೆಲೆಗಳು ನಿನ್ನೆಯ(ಮೇ 15) ದರದಲ್ಲೇ ಸ್ಥಿರತೆಯನ್ನು ಕಾಯ್ದುಕೊಂಡಿವೆ.
ಕಾಳುಮೆಣಸು ಕುಸಿತ : ನಿನ್ನೆ(ಮೇ 15) ಗರಿಷ್ಠ ₹690 ಇದ್ದ ಕಾಳುಮೆಣಸು ಇಂದು(ಮೇ 16) ₹685 ಕ್ಕೆ ಕುಸಿದಿದೆ. ಆರಂಭಿಕ ಬೆಲೆಯಲ್ಲೂ ₹5 ರಷ್ಟು ಇಳಿಕೆಯಾಗಿದೆ.
ಕೊಬ್ಬರಿ ಸ್ಥಿರತೆ: ಸತತ ಎರಡು ದಿನಗಳಿಂದ ಇಳಿಕೆ ಕಂಡಿದ್ದ ಕೊಬ್ಬರಿ ಇಂದು ಯಾವುದೇ ಬದಲಾವಣೆ ಇಲ್ಲದೆ ₹152 ರಲ್ಲೇ ಮುಂದುವರಿದಿದೆ.
ಕೊಕ್ಕೋ ಸ್ಥಿರತೆ: ಹಸಿ ಮತ್ತು ಒಣ ಕೊಕ್ಕೋ ಧಾರಣೆಗಳಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ.

ರಬ್ಬರ್ ಧಾರಣೆ
ಗ್ರೇಡ್ : 256.5
ಲಾಟ್ : 216
ಸ್ಕ್ರ್ಯಾಪ್ ಪ್ರಥಮ ದರ್ಜೆ : 151.5
ಸ್ಕ್ರ್ಯಾಪ್ ದ್ವಿತೀಯ ದರ್ಜೆ : 143
ಇಂದು(ಮೇ 16) ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆಯಲ್ಲಿ ಗ್ರೇಡ್ ರಬ್ಬರ್ ಮತ್ತು ಸ್ಕ್ರ್ಯಾಪ್(I ದರ್ಜೆ) ಧಾರಣೆಯಲ್ಲಿ ಇಂದು(ಮೇ 16) ಅಲ್ಪ ಇಳಿಕೆ ಕಂಡುಬಂದಿದೆ. ಉಳಿದ ರಬ್ಬರ್ ವಿಧಗಳು ನಿನ್ನೆಯ(ಮೇ 15) ಬೆಲೆಯಲ್ಲೇ ಸ್ಥಿರವಾಗಿವೆ.
ಗ್ರೇಡ್ ರಬ್ಬರ್ ಇಳಿಕೆ: ನಿನ್ನೆ(ಮೇ 15) ₹258 ರಲ್ಲಿದ್ದ ಗ್ರೇಡ್ ರಬ್ಬರ್ ಇಂದು(ಮೇ 16) ₹256.5 ಕ್ಕೆ ಕುಸಿದಿದೆ.

ಕೃಷಿಕರ ಗಮನಕ್ಕೆ : ಈ ಮೇಲಿನ ಮಾರುಕಟ್ಟೆ ಧಾರಣೆಯು ಇಂದಿನ ಮಾರುಕಟ್ಟೆ ಸ್ಥಿತಿ-ಗತಿಯನ್ನು ಆಧರಿಸಿದ್ದು, ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading