ಬೆಳ್ಳಾರೆ : ಪಳ್ಳಿಮಜಲು ಸುನ್ನೀ ಬಾಲ ಸಂಘ(ಎಸ್. ಬಿ. ಎಸ್) ಪದಾಧಿಕಾರಿಗಳ ಆಯ್ಕೆ ; ಅಧ್ಯಕ್ಷರಾಗಿ ಮುಹಮ್ಮದ್ ಜಝೀಲ್ – ಉಪಾಧ್ಯಕ್ಷರಾಗಿ ಇತ್ಬಾನ್.ಬಿ – ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ನಾಝಿಲ್

ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಸಿರಾಜುಲ್ ಹುದಾ ಸೆಕೆಂಡರಿ ಮದರಸದ ವಿದ್ಯಾರ್ಥಿ ಸಂಘವಾಗಿರುವ ಸುನ್ನೀ ಬಾಲ ಸಂಘ(ಎಸ್.ಬಿ.ಎಸ್) ಇದರ ಪದಾಧಿಕಾರಿಗಳ ಆಯ್ಕೆ ಮೇ.10ರಂದು ಬೆಳಿಗ್ಗೆ ಇದೇ ಮದರಸದಲ್ಲಿ ನಡೆಯಿತು. ಅಧ್ಯಕ್ಷರಾಗಿ ಮುಹಮ್ಮದ್ ಜಝೀಲ್, ಉಪಾಧ್ಯಕ್ಷರಾಗಿ ಇತ್ಬಾನ್.ಬಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಫಝಲ್, ಜೊತೆ ಕಾರ್ಯದರ್ಶಿಯಾಗಿ ತಮೀಮ್ ನಿಯಾಝ್, ಹಣಕಾಸು ಕಾರ್ಯದರ್ಶಿಯಾಗಿ ಮುಹಮ್ಮದ್ ನಾಝಿಲ್ ಆಯ್ಕೆಯಾದರು. ಮದರಸ ಮುಖ್ಯ ನಾಯಕನಾಗಿ ಬಿ.ಎಂ.ಮಹರೂಫ್, ಸಹಾಯಕ ನಾಯಕನಾಗಿ ಮುಹಮ್ಮದ್ ಶಫೀಖ್ ಆಯ್ಕೆಯಾದರು. ಮದರಸ ನಾಯಕಿಯಾಗಿ ಫಾತ್ವಿಮತ್ ಫಮೀಝ, ಸಹಾಯಕಿ ನಾಯಕಿಯಾಗಿ ಫಾತ್ವಿಮತ್ ಶಿಫಾ 
ಮತ್ತು ಆರೋಗ್ಯ ನಿರ್ವಹಣೆಗಾಗಿ ತಶ್ರೀಫಾ.ಬಿ ಆಯ್ಕೆಯಾದರು. ಈ ಎಲ್ಲಾ ಆಯ್ಕೆ ಪ್ರಕ್ರಿಯೆಗಳನ್ನು ಈ ಮದರಸದ ಮುಖ್ಯೋಪಾಧ್ಯಾಯ ಮುಹಮ್ಮದ್ ಸವಾದ್ ಮದನಿ ಹಾಗೂ ಅಧ್ಯಾಪಕ ಹಬೀಬುರ್ರಹ್ಮಾನ್ ಹಿಮಮಿ ನಡೆಸಿಕೊಟ್ಟರು. (ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading