ಹರಿಹರ ಪಳ್ಳತ್ತಡ್ಕ : ಕೋಚಿಂಗ್ ಸೆಂಟರ್ ಶುಭಾರಂಭ

ಹರಿಹರ ಪಳ್ಳತ್ತಡ್ಕದ ‘ವಿರಾಮಿಸು ಸಂಕೀರ್ಣ’ದ ಮೊದಲನೇ ಮಹಡಿಯಲ್ಲಿ ಮೇ.15ರಿಂದ 8, 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಕೋಚಿಂಗ್ ಸೆಂಟರ್ ಪ್ರಾರಂಭವಾಗಲಿದ್ದು, ಅದರ ಉದ್ಘಾಟನಾ ಸಮಾರಂಭವು ಇಂದು(ಮೇ.14) ನೆರವೇರಿತು. ಕಟ್ಟಡ ಮಾಲೀಕರಾದ ರಾಮಕೃಷ್ಣ ಕುದ್ಕುಳಿ ರವರು ದೀಪ ಬೆಳಗಿಸುವ ಮೂಲಕ ಕೋಚಿಂಗ್ ಸೆಂಟರ್ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಚಂದ್ರಶೇಖರ ಕಡೋಡಿ, ಸ್ಥಳೀಯರಾದ ಪದ್ಮಯ್ಯ, ಮೋನಪ್ಪ ಗೌಡ ಅಂತಿಬೆಟ್ಟು, ದೀಕ್ಷಿತ್.ಎನ್.ವಿ, ಸುಧಾಕರ, ಕಿಶನ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ನಾಳೆ(ಮೇ.15) ರಿಂದ ಪ್ರಾರಂಭಗೊಳ್ಳಲಿರುವ ಈ ಕೋಚಿಂಗ್ ಸೆಂಟರ್ ಪ್ರತೀ ಶನಿವಾರ ಹಾಗೂ ಆದಿತ್ಯವಾರದಂದು ಮದ್ಯಾಹ್ನ 3:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ನಡೆಯಲಿದ್ದು, 8,9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡಲಾಗುವುದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತರಬೇತುದಾರರಾದ ಮೋನಿಷಾ.ಜಿ.ಎಸ್ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading