- Friday
- April 24th, 2026
ಅಂತಾರಾಜ್ಯ ರಸ್ತೆಯಾಗಿರುವ ಸುಳ್ಯ ಕೋಲ್ಚಾರು-ಬಂದಡ್ಕ ರಸ್ತೆಯಲ್ಲಿರುವ ನಾಗಪಟ್ಟಣ ಸೇತುವೆ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಏ.15 ರಿಂದ ಮೇ.31 ರವರೆಗೆ ದುರಸ್ತಿ ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಸೇತುವೆ ಮೇಲೆ ಸಂಚಾರ ಬಂದ್ ಆಗಲಿದ್ದು ಪರ್ಯಾಯ ಮಾರ್ಗ ಬಳಸಲು ಇಲಾಖಾಧಿಕಾರಿಗಳು ಸೂಚನೆ ನೀಡಿದ್ದಾರೆ. ಸುಳ್ಯಕ್ಕೆ ಸಂಚರಿಸುವ ಪ್ರಯಾಣಿಕರು ನಾರ್ಕೋಡು - ಮೇನಾಲ ಕಾಂತಮಂಗಲ ಸುಳ್ಯ ರಸ್ತೆಯನ್ನು ಬಳಸಬಹುದಾಗಿದೆ.
ಸುಳ್ಯ ತಾಲೂಕು ಮತ್ತು ಇತರೆ ತಾಲೂಕುಗಳ ಪ್ರತಿಯೊಂದು ಮನೆಯಿಂದ ಕನಿಷ್ಠ ಒಬ್ಬ ಇಂಜಿನಿಯರ್ ಹೊರಬರಬೇಕು, ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಶಿಕ್ಷಣ ಕೈಗೆಟಕುವಂತಾಗಬೇಕು ಎಂಬ ಧ್ಯೇಯೋದ್ದೇಶದೊಂದಿಗೆ ಎ.ಒ.ಎಲ್.ಇ.(ರಿ.) ಇದರ ಸ್ಥಾಪಕಾಧ್ಯಕ್ಷರಾದ ಡಾ. ಕುರುಂಜಿ ವೆಂಕಟ್ರಮಣ ಗೌಡರಿಂದ ೧೯೮೬ರಲ್ಲಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಲ್ಪಟ್ಟು ಸಾರ್ಥಕ ನಾಲ್ಕು ದಶಕಗಳನ್ನು ಪೂರೈಸಿದೆ. ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ...
ಸುಳ್ಯದ ಚಂದನ ಸಾಹಿತ್ಯ ವೇದಿಕೆ ಮತ್ತು ಎಲಿಮಲೆ ಪ್ರೌಢಶಾಲೆಯ ಕನ್ನಡ ಸಂಘ ಜಂಟಿ ಆಶ್ರಯದಲ್ಲಿ ಜರುಗಿದ ಚಾಂದ್ರಮಾನ ಮತ್ತು ಸೌರಮಾನ ಯುಗಾದಿ ವಿಶೇಷತೆಯ ಪ್ರಯುಕ್ತ ಜರುಗಿದ ಕವಿಗೋಷ್ಠಿ ಸಾಹಿತ್ಯ ಕಾರ್ಯಕ್ರಮವು ಎಲಿಮಲೆ ಪ್ರೌಢಶಾಲೆಯ ಅನ್ನಪೂರ್ಣೇಶ್ವರಿ ಭೋಜನ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಚಂದನ ಸಾಹಿತ್ಯ ವೇದಿಕೆ ಅಧ್ಯಕ್ಷರು, ಸಾಹಿತಿ ಹಾಗೂ ಎಲಿಮಲೆ ಸರಕಾರಿ ಪ್ರೌಢಶಾಲೆಯ ಮುಖ್ಯ ಉಪಾಧ್ಯಾಯರಾದ...
“ಸುಳ್ಯ ತಾಲೂಕು ಸುಳ್ಯ ನಗರ ವ್ಯಾಪ್ತಿಯ ಶಾಂತಿನಗರ ಎಂಬಲ್ಲಿ ಕ್ರೀಡಾoಗಣ ನಿರ್ಮಾಣ ಕಾಮಗಾರಿ ಅನುದಾನದ ಕೊರತೆಯಿoದ ಪೂರ್ಣಗೊಂಡಿರುವುದಿಲ್ಲ. ಪ್ರಸಕ್ತ ಸಾಲಿನ ಕ್ರಿಯಾಯೋಜನೆಯಲ್ಲಿ ಪೆವಿಲಿಯನ್ ನಿರ್ಮಾಣ ಮತ್ತು ಇನ್ನಿತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಣ ಮೀಸಲಿರಿಸುವಂತೆ” ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷರಾದ ಕೆ.ಎಂ. ಮುಸ್ತಫ ರವರು ಬೆಂಗಳೂರಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ...
ದ.ಕ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ಮೂಡಬಿದಿರೆ ಸ್ವರಾಜ್ ಮೈದಾನದಲ್ಲಿ ನಡೆಯಲಿರುವ ಜಿಲ್ಲಾ ವಾಲಿಬಾಲ್ ಚಾಂಪಿಯನ್ ಶಿಪ್ ಗೆ ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ತೆರಳುವ ಸುಳ್ಯ ತಾಲೂಕಿನ ಪುರುಷರ ಮತ್ತು ಮಹಿಳೆಯರ ವಾಲಿಬಾಲ್ ತಂಡಕ್ಕೆ ಆರಂಬೂರು ಗಣೇಶ್ ಇಂಡಸ್ಟ್ರೀಸ್ ಮಾಲಕ ಜಗದೀಶ್ ಸರಳಿ ಕುಂಜ ಮತ್ತು ದುರ್ಗಾ ದೇವಿ ಸ್ಟ್ರೈಕರ್ಸ್ ಅಧ್ಯಕ್ಷ ರಕ್ಷಿತ್...
ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಏ.15 ಬುಧವಾರದಂದು “ವಿಷು ಸಮಾರಾಧನೆ ಹಾಗೂ ಬಲಿವಾಡು ಕೂಟ” ನಡೆಯಲಿದ್ದು, ಬೆಳಿಗ್ಗೆ 10:00 ಗಂಟೆಯಿಂದ “ಸಾಮೂಹಿಕ ಶನಿಪೂಜೆ” ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ವರದಿ : ಉಲ್ಲಾಸ್ ಕಜ್ಜೋಡಿ)
ದ್ವಿತೀಯ ಪಿಯುಸಿ ಫಲಿತಾಂಶವು ಏಪ್ರಿಲ್ 9 ರಂದು ಪ್ರಕಟಗೊಂಡಿದ್ದು, ಪುತ್ತೂರಿನ ಬಪ್ಪಳಿಗೆ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿ ಸುಶಾಂತ್ ಕೃಷ್ಣ ಪಿ. ಜಿ. ಅವರು ವಿಜ್ಞಾನ ವಿಭಾಗದಲ್ಲಿ 600ಕ್ಕೆ 569 (94.8%) ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ (Distinction) ತೇರ್ಗಡೆಯಾಗಿದ್ದಾರೆ. ಇವರು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಪುಚ್ಚಪ್ಪಾಡಿ ಗುರುರಾಜ್ ಪಿ. ಕೆ. ಮತ್ತು ರೂಪಶ್ರೀ ದಂಪತಿಗಳ...
ಉಜಿರೆ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಶ್ರೀಪೂರ್ಣ 588 (98%) ಅಂಕ ಪಡೆದು ರಾಜ್ಯಕ್ಕೆ 9 ನೇ ರ‌್ಯಾಂಕ್ ಪಡೆದಿದ್ದಾರೆ. ಈಕೆ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಹಾಗೂ ಅಯ್ಯಸ್ ಹೋಮ್ ಪ್ರಾಡಕ್ಟ್ಸ್ ಆಡಳಿತ ಪಾಲುದಾರೆ ಶ್ರೀಮತಿ ಕುಮುದ ದಂಪತಿಗಳ ಪುತ್ರಿ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಸುಳ್ಯದ ರೋಟರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಯಶಸ್ವಿ.ಪಿ ಭಟ್ ರವರು 579(ಶೇ.96.5) ಅಂಕ ಗಳಿಸಿ ಡಿಸ್ಟಿಂಕ್ಷನ್ ಪಡೆದಿದ್ದಾರೆ.ಇವರು ಸುಳ್ಯದ ದೇವಶ್ಯ ನಿವಾಸಿ ಎಮ್.ಪ್ರಶಾಂತ್ ಭಟ್ ಹಾಗೂ ಪ್ರೇಮಾ ಪ್ರಶಾಂತ್ ದಂಪತಿಗಳ ಪುತ್ರಿ.
Loading posts...
All posts loaded
No more posts
