ಸುಬ್ರಹ್ಮಣ್ಯಕ್ಕೆ ಆಗಮಿಸಿದ ರೋಟರಿ ಕ್ಲಬ್ ಬೇಸಿಗೆ ಸೀಸನ್ ಬೈಕ್ ರ್ಯಾಲಿ

ಸುಬ್ರಹ್ಮಣ್ಯ ಎಪ್ರಿಲ್ 22 : ರೋಟರಿ ಕ್ಲಬ್ ಮಡಿಕೇರಿ ವುಡ್ಸ್ ನ ಪೂರ್ವಾಧ್ಯಕ್ಷರು, ಅಧ್ಯಕ್ಷರು ಹಾಗೂ ಸದಸ್ಯರನ್ನು ಒಳಗೊಂಡ ಏಳು ಜನರ ತಂಡವು ಮಡಿಕೇರಿ, ಸುಳ್ಯ, ಸುಬ್ರಹ್ಮಣ್ಯ, ಬಿಸಿಲೆ, ಸೋಮವಾರಪೇಟೆಗಾಗಿ ಮತ್ತೆ ಮಡಿಕೇರಿ ತಲುಪುವ ಬೇಸಿಗೆ ಸೀಸನ್ ನ ಬೈಕ್ ರ್ಯಾಲಿಯನ್ನು ಆಯೋಜಿಸಿದ್ದರು. ಮಡಿಕೇರಿಯಿಂದ ಹೊರಟ ತಂಡವು ಬುಧವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಸುಬ್ರಹ್ಮಣ್ಯ ಕುಮಾರಧಾರ ದ್ವಾರದ ಬಳಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಜಯಪ್ರಕಾಶ್, ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ ನಾಯರ್, ಪೂರ್ವ ಅಧ್ಯಕ್ಷ ರವಿ ಕಕ್ಕೆಪದವು, ನಿಯೋಜಿತ ಅಧ್ಯಕ್ಷ ರೋಹಿತ್ ಬಿ.ಬಿ ರ್ಯಾಲಿಯನ್ನು ಬರಮಾಡಿಕೊಂಡರು. ತದನಂತರ ಸುಬ್ರಹ್ಮಣ್ಯದ ಕುಮಾರಧಾರ ದ್ವಾರದ ಬಳಿ ಎರಡು ಕ್ಲಬ್ ನವರ ಫ್ಲಾಗ್ ಗಳನ್ನ ಎಕ್ಸ್‌ಚೇಂಜ್ ಮಾಡಿಕೊಳ್ಳಲಾಯಿತು. ತದನಂತರ ಸ್ವಲ್ಪ ಹೊತ್ತು ವಿರಮಿಸಿ ಅಲ್ಲಿಂದ ರ್ಯಾಲಿ ಮುಂದುವರೆಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading