ಕುಕ್ಕೆ ಸುಬ್ರಹ್ಮಣ್ಯ : ಶ್ರೀ ದೇವರಿಗೆ ವಜ್ರಖಚಿತ ಚಿನ್ನದ ಸರ ಸಮರ್ಪಣೆ ; 12.44 ಲಕ್ಷದ ಸರ – ಹೈದರಾಬಾದ್ ಉದ್ಯಮಿಯ ಸೇವೆ

ಸುಬ್ರಹ್ಮಣ್ಯ : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಹೈದರಬಾದ್‌ನ ಉದ್ಯಮಿ ರಾಸನ್‌ ಗ್ರೂಪ್‌ನ ಚೇರ್‌ಮೆನ್‌ ಕಣ್ನಕರ್ ರವೀಂದ್ರ ರೆಡ್ಡಿ ಅವರು ವಜ್ರಖಚಿತ ಚಿನ್ನದ ಸರವನ್ನು ಬುಧವಾರ ಸಮರ್ಪಿಸಿದರು. ಸುಮಾರು ರೂ.12 ಲಕ್ಷದ 44 ಸಾವಿರ ರೂಪಾಯಿ ಮೌಲ್ಯದ ಸರವನ್ನು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್. ಎಸ್.ಇಂಜಾಡಿ ಅವರಿಗೆ ಆಡಳಿತ ಕಚೇರಿಯಲ್ಲಿ ಹಸ್ತಾಂತರಿಸಿದರು.

ಗೌರವಾರ್ಪಣೆ : ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್‌.ಎಸ್‌.ಇಂಜಾಡಿ ಅವರು ಸೇವಾರ್ಥಿ ಕಣ್ನಕರ್ ರವೀಂದ್ರ ರೆಡ್ಡಿ ಅವರನ್ನು ಗೌರವಿಸಿದರು. ರವೀಂದ್ರ ರೆಡ್ಡಿ ಅವರ ಪುತ್ರ ಕಣ್ನಕರ್ ಸಂದೀಪ್‌ ರೆಡ್ಡಿ , ಸಂಬಂಧಿಕರಾದ ಉತ್ತಮ್‌ ಕುಮಾರ್‌ ರೆಡ್ಡಿ, ರಜಿನಿ, ಹೈಮಾ, ಹೈದರಬಾದ್‌ನ ಉದ್ಯಮಿ ಮಾರಣಕಟ್ಟೆಯ ಕೃಷ್ಣಮೂರ್ತಿ ಮಂಜ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್‌ ನೆಕ್ರಾಜೆ, ಎ.ಇ.ಒ ಎಸ್‌.ಜೆ.ವೈ.ರಾಜ್‌, ಶಿಷ್ಠಾಚಾರ ವಿಭಾಗದ ಪ್ರಮೋದ್‌ ಕುಮಾರ್.ಎಸ್‌,‌ ಸೇವಾರ್ಥಿಗಳ ಆತ್ಮೀಯರಾದ ಶ್ರೀ ದೇವಳದ ಕೃಷ್ಣಪ್ರಸಾದ್‌ ಕೆ.ಜಿ.ಭಟ್, ದೇವಳದ ಸಿಬ್ಬಂದಿ ಸದಾನಂದ ಕಾರ್ಜ ಉಪಸ್ಥಿತರಿದ್ದರು.

ದೇವರಿಗೆ ಅರ್ಪಣೆ : ಬಳಿಕ ಶ್ರೀ ದೇವಳದಲ್ಲಿ ಅರ್ಚಕರಾದ ರಾಜೇಶ್‌ ನಡ್ಯಂತಿಲ್ಲಾಯ ಮತ್ತು ಸತ್ಯನಾರಾಯಣ ನೂರಿತ್ತಾಯರು ವಿವಿಧ ವೈದಿಕ ವಿದಾನಗಳನ್ನು ನೆರವೇರಿಸಿ ಚಿನ್ನದ ಸರವನ್ನು ಶ್ರೀ ದೇವರಿಗೆ ಸಮರ್ಪಿಸಿದರು.ನಂತರ ಅಚಕರು ಸೇವಾರ್ಥಿಗಳಿಗೆ ಶಾಲು ಹೊದಿಸಿ ಮಹಾಪ್ರಸಾದ ನೀಡಿದರು.

ಈ ಸಂದರ್ಭದಲ್ಲಿ “ನಾನು ಕುಕ್ಕೆ ಸುಬ್ರಹ್ಮಣ್ಯ ದೇವರ ಭಕ್ತನಾಗಿದ್ದು ಈ ಹಿಂದೆ ಬಂದು ಇಲ್ಲಿ ಸರ್ಪಸಂಸ್ಕಾರ ಮತ್ತು ಆಶ್ಲೇಷ ಬಲಿ ಸೇವೆ ಮಾಡಿದ ಬಳಿಕ ನನ್ನ ಇಷ್ಟಾರ್ಥ ಸಿದ್ಧಿಯಾಗಿದೆ. ಹಾಗಾಗಿ ಶ್ರೀ ದೇವರಿಗೆ ಚಿಕ್ಕ ಸೇವೆ ಮಾಡಿದ್ದೇನೆ. ಮುಂದೆ ಶ್ರೀ ದೇವಳದ ಸುತ್ತುಪೌಳಿ ನಿರ್ಮಾಣದ ಸಂದರ್ಭ ದೊಡ್ಡ ಮಟ್ಟದ ಸೇವೆಯನ್ನು ಮಾಡಲು ತಯಾರಿದ್ದೇನೆ. ಕುಕ್ಕೆ ಸುಬ್ರಹ್ಮಣ್ಯ ದೇವರು ನನಗೆ ಒಳಿತನ್ನು ಮಾಡಿದ್ದಾನೆ. ಆದುದರಿಂದ ಶ್ರೀ ದೇವಳದ ಆಡಳಿತ ತಿಳಿಸಿದ ಅಭಿವೃದ್ಧಿ ಕಾರ್ಯಕ್ಕೆ ಕರ ಜೋಡಿಸುತ್ತೇನೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹೇಳಿದಂತೆ ಇಲ್ಲಿ ಸುತ್ತು ಪೌಳಿ ನಿರ್ಮಾಣ ಸಂದರ್ಭ ನಿರ್ಮಿತವಾಗಬೇಕಿರುವ ಗಣಪತಿ ಗುಡಿಯನ್ನು ನಾನು ಸೇವಾ ರೂಪದಲ್ಲಿ ನಿರ್ಮಿಸಿಕೊಡಲು ತಯಾರಿದ್ದೇನೆ” ಎಂದು ಸೇವಾರ್ಥಿಗಳಾದ ಕಣ್ನಕರ್ ರವೀಂದ್ರ ರೆಡ್ಡಿ ಹೇಳಿದರು.

“ಶ್ರೀ ಕ್ಷೇತ್ರದಲ್ಲಿ ಪ್ರಾರ್ಥನೆ ಮಾಡಿ ಒಳಿತನ್ನು ಕಂಡ ಅಸಂಖ್ಯಾತ ಭಕ್ತರು ದೇಶ ವಿದೇಶದಲ್ಲಿದ್ದಾರೆ. ಬೇಡಿ ಬಂದ ಭಕ್ತರ ಇಷ್ಟಾರ್ಥ ಸಿದ್ಧಿ ಮಾಡುವ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಹಲವಾರು ಭಕ್ತರು ಸೇವಾರೂಪದಲ್ಲಿ ಕೊಡುಗೆ ನೀಡಿದ್ದಾರೆ. ಮುಂದೆ ಶ್ರೀ ದೇವಳದಲ್ಲಿ ಸುತ್ತು ಪೌಳಿ ನಿಮಾಣ ಸೇರಿದಂತೆ ಇತರ ಅಭಿವೃದ್ಧಿ ಕಾಯಗಳು ನಡೆಯಲಿದೆ. ಈ ಸಂದರ್ಭದಲ್ಲಿ ಭಕ್ತರು ಸೇವಾರೂಪದಲ್ಲಿ ನೀಡುವ ಕೊಡುಗೆಗಳನ್ನು ಕೃತಜ್ಞತಾಪೂವಕವಾಗಿ ಸ್ವೀಕರಿಸಲಾಗುವುದು. ಉದ್ಯಮಿ ರವೀಂದ್ರ ರೆಡ್ಡಿ ಅವರು ವಜ್ರ ಖಚಿತ ಚಿನ್ನದ ಸರ ನೀಡಿದ್ದು ಮುಂದೆ ಅಭಿವೃದ್ಧಿ ಕಾಯಕ್ಕೆ ಸಹಾಯಹಸ್ತ ಚಾಚುತ್ತೇನೆ ಅಂದಿರುವುದು ಸಂತಸ ತಂದಿದೆ” ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ಇಂಜಾಡಿ ಹೇಳಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading