ಕುಕ್ಕೆ ಸುಬ್ರಹ್ಮಣ್ಯಕ್ಕೆ ಗಾಲಿ ಜನಾರ್ದನ್ ರೆಡ್ಡಿ ಹಾಗೂ ಸುರೇಶ್ ಕುಮಾರ್ ಭೇಟಿ

ಸುಬ್ರಹ್ಮಣ್ಯ ಏಪ್ರಿಲ್ 22 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಗಳವಾರ ರಾಜ್ಯದ ಮಾಜಿ ಪ್ರವಾಸೋದ್ಯಮ ಸಚಿವ ಹಾಗೂ ಹಾಲಿ ಗಂಗಾವತಿ ಶಾಸಕ ಗಾಲಿ ಜನಾರ್ದನ್ ರೆಡ್ಡಿ ಆಗಮಿಸಿ ರಾತ್ರಿ ತಂಗಿದ್ದು, ಮರುದಿನ ಬೆಳಿಗ್ಗೆ ಶ್ರೀ ದೇವರಿಗೆ ಅರ್ಚನೆ ಸೇವೆಯೊಂದಿಗೆ ದರ್ಶನವನ್ನು ಪಡೆದರು. ತದನಂತರ ಆದಿ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅವರೊಂದಿಗೆ ಅವರ ಪತ್ನಿ ಇಬ್ಬರು ಪುತ್ರಿ ಯರು ಹಾಗೂ ಮಗ ಜೊತೆಗಿದ್ದರು. ಓರ್ವ ಪುತ್ರ ಬೇಕೆಂದು ತಮಿಳುನಾಡಿನ ತಿರುಚಂದೂರು ಸುಬ್ರಹ್ಮಣ್ಯ ದೇವಳದಲ್ಲಿ ಹರಕೆ ಹೊತ್ತು ಮಗ ಹುಟ್ಟಿ ಅವನಿಗೆ ಕಾರ್ತಿಕೇಯ ಎಂಬ ಹೆಸರಿಟ್ಟಿದ್ದರು. ಆ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರತಿಸಲ ಬಂದು ಪೂಜೆ ಸಲ್ಲಿಸಿ ಹೋಗುತ್ತಿದ್ದಾರೆ. ರಾಜ್ಯ ಸರಕಾರದ ಮಾಜಿ ಶಿಕ್ಷಣ ಸಚಿವ ಹಾಗೂ ಹಾಲಿ ಶಾಸಕ ಸುರೇಶ್ ಕುಮಾರ್ ಅವರು ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಅದೇ ಹೊತ್ತಿಗೆ ಜನಾರ್ದ ರೆಡ್ಡಿ ಅವರು ಮುಖಾಮುಖಿಯಾಗಿ ಪರಸ್ಪರ ಆಲಂಗಿಸಿಕೊಂಡರು. ತದನಂತರ ಇಬ್ಬರು ಮಾಜಿ ಸಚಿವರು ಸಂಜೆ ನಡೆದ ಚಿಕ್ಕ ರಥೋತ್ಸವದಲ್ಲಿ ಪಾಲ್ಗೊಂಡರು. ಸ್ಥಳೀಯ ಗುರುಪ್ರಸಾದ್ ಮೆಲ್ನಾಡ್ ಹಾಗೂ ಶ್ರೀ ದೇವಳದ ಪರವಾಗಿ ಶಿಷ್ಟಾಚಾರ ವಿಭಾಗದ ಜಯರಾಮರಾವ್, ಪ್ರಮೋದ್ ಕುಮಾರ್ ಹಾಗೂ ನೇಮಿಚಂದ್ರ ಬರಮಾಡಿಕೊಂಡರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading