ಆರಂತೋಡು ಕುಲ್ಚಾರ್ ಸೇತುವೆಯಿಂದ ನದಿಗೆ ತಾಜ್ಯ ಎಸೆತ ; ಅಟೋರಿಕ್ಷಾ ಚಾಲಕರು ಹಾಗೂ ಸ್ಥಳೀಯರಿಂದ ತಡೆ – ಆರಂತೋಡು ಗ್ರಾ.ಪಂ.ನಿಂದ ತ್ಯಾಜ ಎಸೆದವರಿಗೆ ಐದು ಸಾವಿರ ದಂಡ

ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕುಲ್ಚಾರು ಸೇತುವೆಯಿಂದ ನದಿಗೆ ಪ್ರಯಾಣಿಕರು ತ್ಯಾಜ ಎಸೆಯುತ್ತಿರುವುದನ್ನು ಸ್ಥಳೀಯ ಅಟೋರಿಕ್ಷಾ ಚಾಲಕರು ಹಾಗೂ ಸ್ಥಳೀಯ ನಿವಾಸಿಗಳು ಗಮನಿಸಿ, ಅವರನ್ನು ಪ್ರಶ್ನಿಸಿದರಲ್ಲದೆ, ಅರಂತೋಡು ಗ್ರಾ.ಪಂ.ಗೆ ವಿಷಯ ತಿಳಿಸಿದ್ದು, ತ್ಯಾಜ್ಯ ಎಸೆದ ವಾಹನ ಪ್ರಯಾಣಿಕರಿಗೆ ಗ್ರಾಮ ಪಂಚಾಯತ್ ವತಿಯಿಂದ ಪೊಲೀಸರ ಸಹಕಾರದಿಂದ ರೂ. ಐದು ಸಾವಿರ ದಂಡ ವಿಧಿಸಿದ ಘಟನೆ ಎ.21ರಂದು ವರದಿಯಾಗಿದೆ.
ಅರಂತೋಡು ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನ ಸಂಖ್ಯೆ KA.05 – MS 6793 ವಾಹನದಲ್ಲಿದ್ದ ಪ್ರಯಾಣಿಕರು ಕುಲ್ಚಾರು ಸೇತುವೆಯ ಬಳಿ ಕಾರು ನಿಲ್ಲಿಸಿ, ಕುಲ್ಚಾರ್ ಸೇತುವೆಯ ಮೇಲಿನಿಂದ ಬಲ್ನಾಡ್ ಹೊಳೆಗೆ ತ್ಯಾಜ್ಯ ಎಸೆಯುತ್ತಿದ್ದನ್ನು ಗಮಸಿದ ಕಲ್ಲುಗುಂಡಿ ರಿಕ್ಷಾ ಚಾಲಕರಾದ ಸದಾನಂದ ರೈ ಆರಂತೋಡಿನ ರಿಕ್ಷಾ ಚಾಲಕರಾದ ಹರಿಶ್ಚಂದ್ರ ನೆಕ್ಕಿಲ ಮತ್ತು ಆದರ್ಶ ದೇರಾಜೆಯವರು ತಡೆದು ನಿಲ್ಲಿಸಿ, ಅವರನ್ನು ಪ್ರಶ್ನಿಸಿದರೆನ್ನಲಾಗಿದೆ. ಅಲ್ಲದೇ, ಕೂಡಲೇ ಆರಂತೋಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್. ಎಂ.ಆರ್. ಅವರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಬಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅವರು ತ್ಯಾಜ್ಯ ಎಸೆದವರಲ್ಲಿ ವಿಚಾರಿಸಿದಾಗ ಅವರು ಉಡಾಫೆಯಿಂದ ಮಾತಾಡಿದರೆನ್ನಲಾಗಿದೆ. ಅವರು ಕೂಡಲೇ 112ಕ್ಕೆ ತುರ್ತು ಕರೆ ಮಾಡಿ ಪೊಲೀಸ್ ರನ್ನು ಸ್ಥಳಕ್ಕೆ ಕರೆಯಿಸಿದರೆನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಬಂದ ಬಳಿಕ ಅವರ ಸಹಕಾರದಿಂದ ತ್ಯಾಜ್ಯ ಎಸೆದವರಿಗೆ ಐದು ಸಾವಿರ ದಂಡನೆ ವಿಧಿಸಲಾಯಯಿತು. ಈ ಸಂದರ್ಭದಲ್ಲಿ ಅರಂತೋಡು ಗ್ರಾಮ ಪಂಚಾಯತ್ ನ ನಿಕಟಪೂರ್ವ ಉಪಾಧ್ಯಕ್ಷೆ ಶ್ರೀಮತಿ ಭವಾನಿ ಚಿಟ್ಟನೂರು ಮತ್ತು ಸ್ಥಳೀಯರು ಸಹಕಾರ ನೀಡಿದರು. ಆರಂತೋಡು ಗ್ರಾಮ ಪಂಚಾಯತ್ ನ ಸ್ವಚ್ಛತಾ ಅಭಿಯಾನಕ್ಕೆ ಸ್ಥಳೀಯರ ಜಾಗೃತಿ ಮತ್ತು ಸಹಕಾರ ಗಮನಿಸಬೇಕಾದ ವಿಷಯವಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading