ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆ

ಸುಬ್ರಹ್ಮಣ್ಯ ಏಪ್ರಿಲ್ 20 : ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಏ.20 ರಂದು ಸಂಜೆ ಗುಡುಗು ಸಿಡಿಲಿನೊಂದಿಗೆ ಜೋರಾದ ಮಳೆ ಬಂದು ಕಾದ ಭೂಮಿಯನ್ನು ತಂಪುಗೊಳಿಸಿರುತ್ತದೆ. ಸೋಮವಾರ ಧರ್ಮಸ್ಥಳಕ್ಕೆ ಬಂದ ಭಕ್ತರು ಮಂಗಳವಾರ ಕುಕ್ಕೆಗೆ ಬರುವ ರೂಡಿಯಿದ್ದು, ಸಾಲು ಸಾಲಾಗಿ ಭಕ್ತರ ವಾಹನಗಳು ಮಳೆಯನ್ನು ಲೆಕ್ಕಿಸದೆ ಬರುತ್ತಿರುವುದು ಕಂಡುಬಂತು. ಸರಣಿ ರಜೆ ಇದ್ದುದರಿಂದ ಕುಕ್ಕೆ ದೇವಳಕ್ಕೆ ನಿರಂತರವಾಗಿ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಶ್ರೀ ದೇವಳದ ವಸತಿ ಗ್ರಹಗಳು ಪೂರ್ತಿಗೊಂಡಲ್ಲಿ ಖಾಸಗಿ ವಸತಿ ಗೃಹಗಳ ಮಾಲಕರು ಹಾಗೂ ನಿರ್ವಾಹಕರು ಭಕ್ತರ ಸೇವೆಗಾಗಿ ಮಳೆಯನ್ನು ಲೆಕ್ಕಿಸದೆ ಅಲ್ಲಲ್ಲಿ ಮಾಹಿತಿ ಹಾಗೂ ಸೇವೆಯನ್ನು ನೀಡಲು ತಯಾರಾಗಿದ್ದರು. ಶ್ರೀ ದೇವಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಕ್ತರ ಸುಗಮ ದೇವರ ದರ್ಶನ, ತೀರ್ಥ ಪ್ರಸಾದ ಹಾಗೂ ಭೋಜನಕ್ಕಾಗಿ ಸ್ಕಂದ ಭೋಜನ ಶಾಲೆ ಹಾಗೂ ಆದಿ ಸುಬ್ರಹ್ಮಣ್ಯದ ಭೋಜನ ಶಾಲೆಯಲ್ಲಿ ಕೂಡ ವ್ಯವಸ್ಥೆಯನ್ನು ಕೈಗೊಂಡಿದ್ದರು. ಹಾಗೆಯೇ ಮಳೆಯಿಂದ ಸಂದರ್ಭದಲ್ಲಿ ಭಕ್ತರಿಗೆ ಕೊಠಡಿ ಸಿಗದೇ ಇರುವ ಸಂದರ್ಭ ಶ್ರೀ ದೇವಳದ ರಥಬೀದಿಯ ಸಭಾಂಗಣ ಹಾಗೂ ಛತ್ರದ ಸಭಾಂಗಣವನ್ನು ರಾತ್ರಿಯ ವಾಸ್ತವ್ಯಕ್ಕಾಗಿ ಸಜ್ಜುಗೊಳಿಸಿದ್ದರು. ಭಕ್ತರ ವಾಹನಗಳ ಪಾರ್ಕಿಂಗ್ ಪ್ರದೇಶದಲ್ಲಿ ಕೆಲವೊಂದು ಕಡೆ ಇಂಟರ್‌ಲಾಕ್ ಅನ್ನು ಕೂಡ ಅಳವಡಿಸಿ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading