ಪ್ರಿಯಾ.ಎಂ ಸುಳ್ಯರವರ ತೃತೀಯ ನುಡಿ ಮುತ್ತುಗಳ ಹಾರ ಅಹನಿ ಪ್ರಿಯಾ ಬಿಡುಗಡೆ

ಚಿಗುರೆಲೆ ಸಾಹಿತ್ಯ ಬಳಗದ ವಾರ್ಷಿಕೋತ್ಸವ ಪಂಚ ಕೃತಿ ಲೋಕಾರ್ಪಣೆ ಸದ್ಭಾವ ಚಿಗುರು ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ವೈವಿಧ್ಯ ಚಿಗುರೆಲೆ ಸಾಹಿತ್ಯ ಬಳಗದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಸಹಕಾರದಲ್ಲಿ, ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಆಶ್ರಯದಲ್ಲಿ ಏ.12 ರಂದು ಜರಗಿತು. ಈ ಕಾರ್ಯಕ್ರಮದಲ್ಲಿ ಯುವ ಕವಯತ್ರಿ ಪ್ರಿಯಾ ಎಂ ಸುಳ್ಯ ರವರ “ಅಹನಿ ಪ್ರಿಯಾ” ನುಡಿ ಮುತ್ತುಗಳ ಹಾರ ಕೃತಿಯನ್ನು ಕರ್ನಾಟಕ ಸಾಹಿತ್ಯ ಸಂಭ್ರಮವೇದಿಕೆ ಮೂಡಿಗೆರೆ ರಾಜ್ಯಾಧ್ಯಕ್ಷರಾದ ಶ್ರೀ ಎಂ.ಎಸ್ ನಾಗರಾಜ್ ಮೂಡಿಗೆರೆ ಲೋಕಾರ್ಪಣೆಗೊಳಿಸಿದರು. 
ಸಮಾರಂಭದಲ್ಲಿ ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಸಂಚಾಲಕರಾದ ಶ್ರೀ ಗೋಕುಲ್ ನಾಥ್ ಪಿ.ವಿ, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್, ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಬಾಲಕೃಷ್ಣ ಕಾರಂತ್ ಅಳಿಕೆ, ಮಹಾಲಿಂಗೇಶ್ವರ ಭಟ್ ಮಧುವನ, ಶಶಿಕಲಾ ವರ್ಕಾಡಿ, ಸುಲೋಚನಾ ಪಿ ಕೆ, ರಮೇಶ್ ಉಳಯ, ಪತ್ರಕರ್ತರಾದ ಉದಯ್ ಕುಮಾರ್ ಯು.ಎಲ್, ಮಂಜು ಬೆಂಗಳೂರು, ರಾಜಮ್ಮ ಬೆಂಗಳೂರು ಮತ್ತಿತರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading