ಇಂದಿನ(ಏಪ್ರಿಲ್ 18) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ ; ಕಾಳುಮೆಣಸು ಧಾರಣೆಯಲ್ಲಿ ಮತ್ತೆ ಇಳಿಕೆ..! – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 18 ಏಪ್ರಿಲ್ 2026
ವಾರ : ಶನಿವಾರ
ಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಏಪ್ರಿಲ್ 18) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.

ಅಡಿಕೆ ಧಾರಣೆ
ಹೊಸ ಅಡಿಕೆ : 290-445-477/480
ಹಳೆ ಅಡಿಕೆ : 420-450-547/550
ಡಬಲ್ ಚೋಲ್ : 420-450-547/550
ಫಟೋರ : 280-400 ರಿಂದ 405
ಉಳ್ಳಿಗಡ್ಡೆ : 165-290
ಕರಿಗೋಟು : 230-265
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ)
ಇಂದು(ಏಪ್ರಿಲ್ 18) ಮಾರುಕಟ್ಟೆಯಲ್ಲಿ ಅಡಿಕೆ ದರವು ಯಾವುದೇ ಏರಿಳಿತವಿಲ್ಲದೆ ಸ್ಥಿರವಾಗಿ ಮುಂದುವರಿದಿದೆ. ಹೊಸ ಅಡಿಕೆ, ಹಳೆ ಅಡಿಕೆ ಹಾಗೂ ಡಬಲ್ ಚೋಲ್ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಇತರ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ
ಕಾಳುಮೆಣಸು : 575-675
ಹಸಿ ಕೊಕ್ಕೋ : 70-100
ಒಣ ಕೊಕ್ಕೋ : 270-310
ಕೊಬ್ಬರಿ : 150-190
ವಾರಾಂತ್ಯದ ಮಾರುಕಟ್ಟೆಯಲ್ಲಿ ಕಾಳುಮೆಣಸಿನ ದರವು ಪ್ರತಿ ಕೆಜಿಗೆ ಮತ್ತೆ 5 ರೂಪಾಯಿಗಳಷ್ಟು ಇಳಿಕೆ ಕಂಡಿದೆ. ಉಳಿದಂತೆ ಕೊಕ್ಕೋ ಹಾಗೂ ಕೊಬ್ಬರಿ ಧಾರಣೆಯು ಯಾವುದೇ ಬದಲಾವಣೆ ಇಲ್ಲದೆ ಸ್ಥಿರತೆಯನ್ನು ಕಾಯ್ದುಕೊಂಡಿವೆ.

ರಬ್ಬರ್ ಧಾರಣೆ
ಗ್ರೇಡ್ : 227.50
ಲಾಟ್ : 199.00
ಸ್ಕ್ರ್ಯಾಪ್ ಪ್ರಥಮ ದರ್ಜೆ : 138.50
ಸ್ಕ್ರ್ಯಾಪ್ ದ್ವಿತೀಯ ದರ್ಜೆ : 129.50
ಇಂದು(ಏಪ್ರಿಲ್ 18) ಮಾರುಕಟ್ಟೆಯಲ್ಲಿ ಅಡಿಕೆಯಂತೆ ರಬ್ಬರ್ ಧಾರಣೆಯೂ ಸಹ ಸಂಪೂರ್ಣ ಸ್ಥಿರತೆಯನ್ನು ಕಾಯ್ದುಕೊಂಡಿದೆ.

ಕೃಷಿಕರ ಗಮನಕ್ಕೆ : ಈ ಮೇಲಿನ ಮಾರುಕಟ್ಟೆ ಧಾರಣೆಯು ಇಂದಿನ ಮಾರುಕಟ್ಟೆ ಸ್ಥಿತಿ-ಗತಿಯನ್ನು ಆಧರಿಸಿದ್ದು, ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading