ಸುಳ್ಯ : ಗಣತಿದಾರರಿಗೆ ಸಹಕಾರ ನೀಡಿ ಜನಗಣತಿ ಕಾರ್ಯವನ್ನು ಯಶಸ್ವಿಗೊಳಿಸುವಂತೆ ತಹಶೀಲ್ದಾರ್ ಮನವಿ

ಜನಗಣತಿ 2027 ಅಂಗವಾಗಿ ಏ.16 ರಿಂದ ಮೇ. 15 ರವರೆಗೆ ಸುಳ್ಯ ತಾಲೂಕಿನಾದ್ಯಂತ ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ಮನೆ ಗಣತಿ ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ನಡೆಯಲಿದ್ದು, ಈ ಸಮಯದಲ್ಲಿ ಗಣತಿದಾರರು ಪ್ರತೀ ಮನೆಗಳಿಗೆ ಭೇಟಿ ನೀಡಿ ಮೊಬೈಲ್ ಆಪ್ ಮೂಲಕ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸುತ್ತಾರೆ. ಆದ್ದರಿಂದ ಸುಳ್ಯ ತಾಲೂಕಿನ ಸಾರ್ವಜನಿಕರು ಗಣತಿ ಕಾರ್ಯಕ್ಕೆ ಆಗಮಿಸುವ ಗಣತಿದಾರರಿಗೆ ಜನಗಣತಿ ಸಂಬಂಧ ಕೋರುವ ಮಾಹಿತಿಯನ್ನು ನೀಡುವಂತೆ ಹಾಗೂ ಈಗಾಗಲೇ ಸ್ವಯಂ ಗಣತಿ SE (Self Enumeration) ಮಾಡಿದ್ದಲ್ಲಿ ಅದರ ಗುರುತಿನ ನಂಬ್ರವನ್ನು (SE-ID) ಗಣತಿದಾರರಿಗೆ ನೀಡಿ ಸಹಕರಿಸುವಂತೆ ಸುಳ್ಯ ತಹಶೀಲ್ದಾರ್ ಮಂಜುಳಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading