“ನಾರಿಶಕ್ತಿ ವಂದನ ಕಾಯ್ದೆಯನ್ವಯ ಮಹಿಳೆಯರಿಗೆ ಮೀಸಲಾತಿಯಲ್ಲಿ 33% ಹೆಚ್ಚಳಕ್ಕೆ ನಿರ್ಧಾರ – ಕೇಂದ್ರ ಸರ್ಕಾರದ ಈ ನಿರ್ಧಾರ ಹೊಸ ಯುಗದ ಉದಯ” : ಶಾಸಕಿ ಭಾಗೀರಥಿ ಮುರುಳ್ಯ ; ಪತ್ರಿಕಾಗೋಷ್ಠಿ ನಡೆಸಿ ಕಾಯ್ದೆ ಸ್ವಾಗತಿಸಿದ ಸುಳ್ಯದ ಬಿಜೆಪಿ ಮಹಿಳಾ ಮೋರ್ಚಾ

“ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು(33%) ಮೀಸಲಾತಿ ನೀಡುವ ನಾರಿಶಕ್ತಿ ವಂದನಾ ಕಾಯ್ದೆಯು ಲೋಕಸಭೆಯಲ್ಲಿ ಮಂಡನೆಗೊಳ್ಳಲಿದ್ದು, ಇದು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಹೊಸ ಯುಗದ ಉದಯ” ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಎ.16ರಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಸುಳ್ಯ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕರು ಮಾತನಾಡಿದರು. “ನಾರಿಶಕ್ತಿ ವಂದನಾ ಕಾಯ್ದೆಯು ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುವುದಕ್ಕೆ ಮಾತ್ರ ಸೀಮಿತವಾಗಿರದೆ ಮಹಿಳೆಯರನ್ನು ದೇಶದ ನೀತಿ ರೂಪಿಸುವವರಿಗಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ” ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರು ಹೇಳಿದರು. “2011ರ ಜನಗಣತಿಯ ಆಧಾರದ ಮೇಲೆ ಈ ಕಾಯ್ದೆಯನ್ವಯ ಲೋಕಸಭೆಯಲ್ಲಿ ಈಗಿರುವ 543 ಸಂಸತ್ ಸದಸ್ಯ ಸ್ಥಾನಗಳ ಸಂಖ್ಯೆ ಸುಮಾರು 850ಕ್ಕೆ ಹೆಚ್ಚಾಗಲಿದೆ ಎಂದ ಶಾಸಕರು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯ ಅನುಭವವು ಮಹಿಳಾ ಪ್ರಾತಿನಿಧ್ಯವು ನೀತಿಗಳನ್ನು ಹೆಚ್ಚು ಸಾರ್ವಜನಿಕ ಸ್ನೇಹಿ ಮತ್ತು ಪರಿಣಾಮಕಾರಿಯಾಗಿ ಮಾಡುತ್ತದೆ” ಎಂದು ಹೇಳಿದರು. “ಸುಖನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ 46 ಮಿಲಿಯನ್ ಗಿಂತಲೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದ್ದು, ಹೆಣ್ಣುಮಕ್ಕಳ ಭವಿಷ್ಯಕ್ಕೆ ಈ ಕಾಯ್ದೆ ಆರ್ಥಿಕ ಭದ್ರತೆಯನ್ನು ಒದಗಿಸಲಿದೆ” ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. “ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯಲ್ಲಿ ಸ್ಥಿರವಾದ ಹೆಚ್ಚಳವು ನಾರಿಶಕ್ತಿ ವಂದನಾ ಕಾಯ್ದೆ 2023ರಿಂದ ಸಾಧ್ಯವಾಗಲಿದೆ. ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಮೂಲಕ 427 ಮಿಲಿಯನ್ ಗಿಂತಲೂ ಹೆಚ್ಚು ಮಹಿಳೆಯರು ಪೌಷ್ಠಿಕಾಂಶ ಬೆಂಬಲವನ್ನು ಪಡೆದುಕೊಂಡಿದ್ದಾರೆ‌” ಎಂದು ಹೇಳಿದರು. “ಪೋಷಣ್ 2.0 ಅಡಿಯಲ್ಲಿ 1.4 ‌ಮಿಲಿಯನಿಗಿಂತಲೂ ಹೆಚ್ಚು ಅಂಗನವಾಡಿ ಕೇಂದ್ರಗಳ ಮೂಲಕ ಸೇವೆಗಳು 89.7 ಮಿಲಿಯನ್ ಫಲಾನುಭವಿಗಳನ್ನು ತಲುಪುತ್ತಿದೆ. ಈ ಪ್ರಯತ್ನದಿಂದಾಗಿ ತಾಯಂದಿರ ಮರಣ ಅನುಪಾತದಲ್ಲಿ ಗಮನಾರ್ಹ ಇಳಿಕೆಗೆ ಸಾಧ್ಯವಾಗುತ್ತದೆ” ಎಂದು ಹೇಳಿದ ಭಾಗೀರಥಿ ಅವರು “ಇದರಿಂದ ಮಹಿಳೆಯರ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು. “ಪ್ರಧಾನಮಂತ್ರಿ ಜನಧನ್ ಯೋಜನೆಯಡಿಯಲ್ಲಿ 322.9 ‌ಮಿಲಿಯನ್ ಮಹಿಳೆಯರು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕ ಹೊಂದಿದ್ದು, ಮಹಿಳೆಯರ ಆರ್ಥಿಕ ಸೇರ್ಪಡೆಗೆ ಇದು ಹೊಸ ಪ್ರಚೋದನೆಯನ್ನು ನೀಡುತ್ತಿದೆ” ಎಂದು ಹೇಳಿದ ಶಾಸಕರು “ಸ್ವಚ್ಛ ಭಾರತ ಮಿಷನ್ ಮತ್ತು ಜಲಜೀವನ್ ಮಿಷನ್ ದೈನಂದಿನ ಜೀವನದ ಸಂಕಷ್ಟಗಳನ್ನು ದೂರ ಮಾಡಿ ಮಹಿಳೆಯರ ಸಬಲೀಕರಣಕ್ಕೆ ದಾರಿಮಾಡಿಕೊಟ್ಟಿದೆ” ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. “ನಾರಿಶಕ್ತಿ ವಂದನಾ ಕಾಯ್ದೆಯು ಲೋಕಸಭೆಯಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಲಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ವಿಧಾನಸಭೆ ಮತ್ತು ಸಂಸತ್ ನಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಲಿದ್ದು 2047ರ ಭಾರತದ ದೃಷ್ಟಿಕೋನವನ್ನು ಸಾಧಿಸುವತ್ತ ನಿರ್ಣಾಯಕ ಹೆಜ್ಜೆಯಾಗಲಿದೆ. ನಾರಿಶಕ್ತಿ ವಂದನಾ ಕಾಯ್ದೆಯ ತಿದ್ದುಪಡಿಯ ಬಳಿಕ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಭಾರತ ಮುನ್ನುಡಿ ಇಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಘೋಷಿಸಿದ್ದಾರೆ” ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದ.ಕ. ಜಿಲ್ಲಾ ಬಿಜೆಪಿಯ ಶ್ರೀಮತಿ ಗುಣವತಿ ಕೊಲ್ಲಂತ್ತಡ್ಕ, ಸುಳ್ಯ ಬಿಜೆಪಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಇಂದಿರಾ ಬಿ.ಕೆ., ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಶಶಿಕಲಾ ನೀರಬಿದಿರೆ, ಶ್ರೀಮತಿ ಲೋಲಾಕ್ಷಿ ಉಪಸ್ಥಿತರಿದ್ದರು.

“ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹಿಳಾ ಸಬಲೀಕರಣ” : ಶಾಸಕಿ ಭಾಗೀರಥಿ ಮುರುಳ್ಯ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕಿ ಭಾಗೀರಥಿ “ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯ ಅನುಭವವು ಮಹಿಳಾ ಪ್ರಾತಿನಿಧ್ಯವು ನೀತಿಗಳನ್ನು ಹೆಚ್ಚು ಸಾರ್ವಜನಿಕ ಸ್ನೇಹಿ ಮತ್ತು ಪರಿಣಾಮಕಾರಿ ಮಾಡುತ್ತದೆ. ಈಗ ಸಂಸತ್ ಮತ್ತು ಶಾಸಕಾಂಗ ಸಭೆಗಳ ಮಟ್ಟದಲ್ಲಿ ಗೋಚರಿಸುತ್ತಿದೆ‌. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮಹಿಳಾ ಸಬಲೀಕರಣವನ್ನು ಸಮಗ್ರ ಮತ್ತು ಜೀವನಚಕ್ರ ದೃಷ್ಟಿಕೋನದಿಂದ ಸಮೀಪಿಸಲಾಗುತ್ತಿದೆ. ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನವು ಸಾಮಾಜಿಕ ಗ್ರಹಿಕೆಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದಿದೆ ಮತ್ತು ಮಾದ್ಯಮಿಕ ಹಂತದಲ್ಲಿ ಹೆಣ್ಣುಮಕ್ಕಳ ದಾಖಲಾತಿ ಪ್ರಮಾಣವು ಶೇಕಡಾ 80.2ಕ್ಕೆ ತಲುಪಿದೆ” ಎಂದು ಹೇಳಿದರು.

“ನಾರಿಶಕ್ತಿ ವಂದನಾ ಕಾಯ್ದೆ 2023ರಿಂದ ಪ್ರಜಾಪ್ರಭುತ್ವಕ್ಕೆ ಶಕ್ತಿ ಬರಲಿದೆ” : ಶ್ರೀಮತಿ ಯಶೋದಾ ರಾಮಚಂದ್ರ 
“ನಾರಿಶಕ್ತಿ ವಂದನಾ 2023 ಶೀರ್ಷಿಕೆಯಡಿಯಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುವ ಈ ಮಸೂದೆಯು ಪಕ್ಷಾತೀತವಾಗಿರಲಿದ್ದು, ಈ ಮಸೂದೆಯಲ್ಲಿ ಯಾವುದೇ ರಾಜಕೀಯವಿಲ್ಲ. ಈ ಕಾಯ್ದೆಯನ್ವಯ ದೇಶದ ಅಭಿವೃದ್ಧಿ ದೃಷ್ಟಿಯಿಂದ ಪ್ರಜಾಪ್ರಭುತ್ವಕ್ಕೆ ಶಕ್ತಿ ಬರಲಿದೆ” ಎಂದು ಪ್ರಾಂಶುಪಾಲೆ ಶ್ರೀಮತಿ ಯಶೋದಾ ರಾಮಚಂದ್ರ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ಕಳೆದ 20 ವರ್ಷಗಳಿಂದ ಈ ಕಾಯ್ದೆ ತಿದ್ದುಪಡಿಗೆ ಚರ್ಚಿತ ವಿಷಯವಾಗುತ್ತಿತ್ತು. ಆದರೆ ಪ್ರತೀ ಬಾರಿಯೂ ಒಂದಲ್ಲ ಒಂದು ಕಾರಣದಿಂದಾಗಿ ಮಸೂದೆಯಾಗಿ ಪರಿವರ್ತನೆಗೊಂಡಿಲ್ಲ. ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷ ಕಳೆದರೂ ಈ ಕಾಯ್ದೆ ಬರದಿದ್ದರೆ ಇನ್ನು ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಈ ಕಾಯ್ದೆಯನ್ವಯ ಸ್ವತಂತ್ರ ಭಾರತದಲ್ಲಿ ಪಕ್ಷಾತೀತವಾಗಿ ಎಲ್ಲರ ಪಾಲ್ಗೊಳ್ಳುವಿಕೆ ಬೇಕು ಎಂಬ ಅಪೇಕ್ಷೆ ನಮ್ಮದು” ಎಂದ ಶ್ರೀಮತಿ ಯಶೋದಾ ರಾಮಚಂದ್ರ ಅವರು “ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಲೋಕಸಭೆಯಲ್ಲಿ ಮೂರು ದಿನಗಳ ಚರ್ಚೆಯಾಗಿ ಮಸೂದೆಯು ಮಂಡನೆಗೊಳ್ಳಲಿದೆ” ಎಂದು ಹೇಳಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading