ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಕ್ಷಣಗಣನೆ – ಭರದಿಂದ ನಡೆಯುತ್ತಿರುವ ಅಭಿವೃದ್ಧಿ ಕಾರ್ಯ – ಏ.29 ರಂದು ಪುನಃ ಪ್ರತಿಷ್ಠೆ – ಮೇ.2 ರಂದು ಬ್ರಹ್ಮಕಲಶಾಭಿಷೇಕ

ಕರಿಕ್ಕಳ ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಏ.24 ರಿಂದ ಮೇ.03 ರ ತನಕ ನಡೆಯಲಿದ್ದು, ಭರದಿಂದ ಅಭಿವೃದ್ದಿ ಕಾರ್ಯ ನಡೆಯುತ್ತಿದೆ. ಏ.29 ರಂದು ಪುನಃ ಪ್ರತಿಷ್ಠೆ ಹಾಗೂ ಮೇ.2 ರಂದು ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ಅಂದಾಜು 4 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ : ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಸಂಬಂಧಿಸಿದಂತೆ ಚಾಮುಂಡಿಮೂಲೆಯಲ್ಲಿ ನಿರ್ಮಾಣಗೊಂಡಿರುವ ಚಾಮುಂಡಿ ದೈವಸ್ಥಾನ, ಗುಳಿಗನ ಕಟ್ಟೆ, ಪಂಜುರ್ಲಿ ಕಟ್ಟೆ ಪ್ರತಿಷ್ಡೆ ನೆರವೇರಿದೆ. ಇದೀಗ ದೇವಸ್ಥಾನ ಗರ್ಭಗುಡಿ, ತೀರ್ಥಮಂಟಪ, ಗಣಪತಿ ಗುಡಿ, ಬಲಿಪೀಠ, ವಸಂತ ಕಟ್ಟೆ, ಕಂಪೌಂಡ್, ಬಾವಿ ನಿರ್ಮಾಣಗೊಂಡಿದೆ. ಹೊರಾಂಗಣ ಕಲ್ಲು ಹಾಸುವಿಕೆ, ಶೌಚಾಲಯ ಕಾಮಗಾರಿ ಹಾಗೂ ಕೊನೆಯ ಹಂತದ ಕೆಲಸ ಕಾರ್ಯ, ಅಮಂತ್ರಣ ವಿತರಣೆ ಕಾರ್ಯ ಭರದಿಂದ ನಡೆಯುತ್ತಿದೆ. ಶಾಸಕಿ ಭಾಗೀರಥಿ ಮುರುಳ್ಯ ಅವರ 10 ಲಕ್ಷ ಅನುದಾನದಲ್ಲಿ ದೇವಸ್ಥಾನ ರಸ್ತೆ ಕಾಂಕ್ರೀಟೀಕರಣಗೊಂಡಿದೆ. ಮುಂದಿನ ಹಂತದಲ್ಲಿ ಅರ್ಚಕರ ಮನೆ ಹಾಗೂ ಸಭಾಭವನ ನಿರ್ಮಾಣಗೊಳ್ಳಬೇಕಿದೆ.
ಒಟ್ಟು ಸುಮಾರು 4 ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಧನ ಸಂಗ್ರಹ ಕಾರ್ಯ ಪ್ರಗತಿಯಲ್ಲಿದ್ದು, ಇನ್ನೂ ಹೆಚ್ಚಿನ ಹಣದ ಅವಶ್ಯಕತೆಯಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಸಹಕಾರ ನೀಡುವಂತೆ ಆಡಳಿತ ಮಂಡಳಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಮನವಿ ಮಾಡಿದೆ.  
Account Name :- NIDWALA SHRI MAHAVISHNU TEMPLE ADMINISTRATION TRUST
Branch :- Karnataka Bank Ninthikal
Account No :- 9912000100005801
IFSC Code :- KARB0000991
ಆಡಳಿತ ಮಂಡಳಿ ಅಧ್ಯಕ್ಷರಾಗಿ ಚಂದ್ರಪ್ರಕಾಶ್ ಕಂಬಳ, ಪುನರ್ ನಿರ್ಮಾಣ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ನೇಮಿರಾಜ್ ಪಲ್ಲೋಡಿ, ಆಡಳಿತ ಸಮಿತಿ ಕಾರ್ಯದರ್ಶಿಯಾಗಿ ಗುರುಪ್ರಸಾದ್ ತೋಟ, ಬ್ರಹ್ಮಕಲಶೋತ್ಸವ ಸಮಿತಿ ಪ್ರ.ಕಾರ್ಯದರ್ಶಿಯಾಗಿ ಕುಸುಮಾಧರ ಕರಿಮಜಲು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿಯಾಗಿ ಅಶೋಕ್ ಮೇಲ್ಪಾಡಿ, ಕೋಶಾಧಿಕಾರಿಯಾಗಿ ಕುಶಾಲಪ್ಪ ದೊಡ್ಡಮನೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕರಾಗಿ ರಾಮಕೃಷ್ಣ ಪುರಿಯಮನೆ , ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿಯಾಗಿ ಕುಶಾಲಪ್ಪ ಮೇಲ್ಪಾಡಿ, ಅರ್ಚಕ ಅಕ್ಷಯ ಭಟ್ ಬರ್ಲಾಯಬೆಟ್ಟು,ಹಾಗೂ ಬೈಲುವಾರು ಸಮಿತಿ ಮತ್ತು ವಿವಿಧ ಸಮಿತಿಗಳ ನೇತೃತ್ವದಲ್ಲಿ ನಿರಂತರ ಶ್ರಮಿಸುತ್ತಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading