ಬೆಳ್ಳಾರೆ : ಪಳ್ಳಿಮಜಲು ಮಸೀದಿಯಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ಅಧ್ಯಯನ ತರಗತಿ

ಬೆಳ್ಳಾರೆ ಗ್ರಾಮದ ಪಳ್ಳಿಮಜಲಿನ ಅಬೂಬಖರ್ ಸ್ವಿದ್ದೀಖ್(ರ)ಮಸೀದಿಯಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್ ಮತ್ತು ಅಧ್ಯಯನ ತರಗತಿ ಎ 12ರಂದು ನಡೆಯಿತು.ಮುಸ್ಸಂಜೆ ನಮಾಝಿನ ನಂತರ ಸ್ವಲಾತ್ ಮಜ್ಲಿಸ್ ಪ್ರವಾದಿ ಪ್ರೇಮಿಗಳ ಮನ ಪುಳಕಗೊಳ್ಳುವಂತೆ ಮಾಡಿತು.ಪಳ್ಳಿಮಜಲಿನ ಅಬೂಬಖರ್ ಸ್ವಿದ್ದೀಖ್(ರ)ಮಸೀದಿಯ ಖತೀಬ್ ಹಾಗೂ ಪಳ್ಳಿಮಜಲು ಸಿರಾಜುಲ್ ಹುದಾ ಸೆಕೆಂಡರಿ ಮದರಸದ ಅಧ್ಯಾಪಕ ಮುಹಮ್ಮದ್ ಸವಾದ್ ಮದನಿ ಅಜ್ಜಾವರ ಸ್ವಲಾತ್ ಕಾರ್ಯ ವಿಧಾನಗಳಿಗೆ ನೇತೃತ್ವ ನೀಡಿದರು.ಮಜ್ಲಿಸಿನಲ್ಲಿ ಪಳ್ಳಿಮಜಲು ಮದರಸ ಅಧ್ಯಾಪಕ ಹಾಗೂ ಮುಅದ್ಸಿನ್ ಹಬೀಬ್ ಹಿಮಮಿ ಉಪ್ಪಿನಂಗಡಿ, ಪಳ್ಳಿಮಜಲು ಸಿರಾಜುಲ್ ಇಸ್ಲಾಂ ಕಮಿಟಿ ಮಾಜಿ ಅಧ್ಯಕ್ಷ ಹಾಗೂ ಪಳ್ಳಿಮಜಲು ಮಸೀದಿಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಬೀಡು,ಪಳ್ಳಿಮಜಲು ಸಿರಾಜುಲ್ ಇಸ್ಲಾಂ ಕಮಿಟಿ(ರಿ)ಅಧ್ಯಕ್ಷ ಹನೀಫ್ ಸಲಾಲಹ್,ಸದಸ್ಯ ಇಬ್ರಾಹಿಂ ಎಂ.ಹೆಚ್,ಪಳ್ಳಿಮಜಲು ಸ್ವಲಾತ್ ಕಮಿಟಿ ಅಧ್ಯಕ್ಷ ಮೂಸಾ ಬೀಡು, ಜಮಾಅತರು ಉಪಸ್ಥಿತರಿದ್ದು,ಸ್ತ್ರೀಯರಿಗಿದ್ದ ಪ್ರತ್ಯೇಕ ಸ್ಥಳಾವಕಾಶದಲ್ಲಿ ಸ್ತ್ರೀಯರು ಸೇರಿದ್ದರು.ಪಳ್ಳಿಮಜಲು ಮಸೀದಿಯ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಇಬ್ರಾಹಿಂ ಬೀಡು ಸ್ವಾಗತಿಸಿ, ವಂದಿಸಿದರು.ಕೊನೆಯಲ್ಲಿ ತಬರ್ರುಖ್ ವಿತರಣೆ ನಡೆಯಿತು. (ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading