ಕುಲ್ಕುಂದ : ಶ್ರೀ ಕ್ಷೇತ್ರ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಗೊನೆ ಮುಹೂರ್ತ ; ಏ.19 ಹಾಗೂ 20 ರಂದು “ವಾರ್ಷಿಕ ಜಾತ್ರಾ ಮಹೋತ್ಸವ”

ಕುಲ್ಕುಂದ ಶ್ರೀ ಕ್ಷೇತ್ರ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಏ.19 ಆದಿತ್ಯವಾರದಿಂದ ಏ.20 ಸೋಮವಾರದವರೆಗೆ “ವಾರ್ಷಿಕ ಜಾತ್ರಾ ಮಹೋತ್ಸವ”ವು ವಿವಿಧ ಧಾರ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಏ.13ರಂದು ಗೊನೆ ಮುಹೂರ್ತ ನೆರವೇರಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರು, ಆಡಳಿತ ಸಮಿತಿ, ಅಭಿವೃದ್ಧಿ ಸಮಿತಿ, ಜಾತ್ರೋತ್ಸವ ಸಮಿತಿ ಹಾಗೂ ಎಲ್ಲಾ ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಭಕ್ತಾದಿಗಳು ಹಾಗೂ ಊರಿನವರು ಉಪಸ್ಥಿತರಿದ್ದರು.

ಏ.19 ಹಾಗೂ 20 ರಂದು ಶ್ರೀ ಬಸವೇಶ್ವರ ದೇವರ “ವಾರ್ಷಿಕ ಜಾತ್ರಾ ಮಹೋತ್ಸವ”ವು ನೆರವೇರಲಿದ್ದು, ಏ.19ರಂದು ಬೆಳಿಗ್ಗೆ 9:00 ಗಂಟೆಯಿಂದ ಭಕ್ತಾದಿಗಳಿಂದ ಹಸಿರು ಕಾಣಿಕೆ ಸಮರ್ಪಣೆ, ಮದ್ಯಾಹ್ನ 12:30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆದು ಸಂಜೆ 5:00 ಗಂಟೆಗೆ ತಂತ್ರಿಗಳ ಆಗಮನ, ಸಂಜೆ 6:30ರಿಂದ ಪ್ರಾಸಾದ ಶುದ್ಧಿ, ವಾಸ್ತು ಹೋಮ, ವಾಸ್ತು ಬಲಿ ಹಾಗೂ ಪುಣ್ಯಾಹವಾಚನ ನಡೆದು ರಾತ್ರಿ 7:00 ಗಂಟೆಯಿಂದ ಸ್ಥಳೀಯರಿಂದ ವಿವಿಧ ಸಾಂಸ್ಕೃತಿಕ ವೈಭವ ಹಾಗೂ ರಾತ್ರಿ 8:00 ಗಂಟೆಯಿಂದ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆದು ರಾತ್ರಿ 9:00 ಗಂಟೆಯಿಂದ ಶ್ರೀ ವಾಸುಕಿ ಯಕ್ಷಗಾನ ಮಂಡಳಿ ಸುಬ್ರಹ್ಮಣ್ಯ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ‘ಯಕ್ಷಗಾನ ಬಯಲಾಟ’ ನಡೆಯಲಿದೆ.
ಏ.20 ರಂದು ಬೆಳಿಗ್ಗೆ 7:30ಕ್ಕೆ ಗಣಪತಿ ಹವನ, ಕಲಶಪೂಜೆ ಹಾಗೂ ಶ್ರೀ ದೇವರಿಗೆ ಬೆಳಗ್ಗಿನ ಮಹಾಪೂಜೆ ನಡೆದು ಬೆಳಿಗ್ಗೆ 9:00 ಗಂಟೆಯಿಂದ ಶತರುದ್ರಾಭಿಷೇಕ ಪ್ರಾರಂಭ ನಂತರ ಪರಿವಾರ ದೇವರುಗಳಿಗೆ ಕಲಶಾಭಿಷೇಕ ಹಾಗೂ ತಂಬಿಲ ಸೇವೆ ನಡೆದು ಬೆಳಿಗ್ಗೆ 11:30ಕ್ಕೆ ಶ್ರೀ ಬಸವೇಶ್ವರ ದೇವರಿಗೆ ಕಲಶಾಭಿಷೇಕ ಹಾಗೂ ಮದ್ಯಾಹ್ನ 12:30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆದು ಸಂಜೆ 6:00 ಗಂಟೆಯಿಂದ ದೀಪಾರಾಧನೆ, ತಾಯಂಬಕ, ಶ್ರೀ ರಂಗಪೂಜೆ ಹಾಗೂ ಮಹಾಪೂಜೆ ನಡೆದು ರಾತ್ರಿ 8:00 ಗಂಟೆಯಿಂದ ಶ್ರೀ ಭೂತಬಲಿ, ಪಲ್ಲಕ್ಕಿ ಉತ್ಸವ, ವಸಂತ ಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ಹಾಗೂ ಅನ್ನಸಂತರ್ಪಣೆ ನಡೆಯುವುದರೊಂದಿಗೆ ಶ್ರೀ ಬಸವೇಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವವು ಸಂಪನ್ನಗೊಳ್ಳಲಿದೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading