ಕೆ.ಎಫ್.ಡಿ.ಸಿ ಫ್ರೆಂಡ್ಸ್ ನಾಗಪಟ್ಟಣ ವತಿಯಿಂದ ಅಂತರ್ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ

ಸುಳ್ಯ ನಾಗಪಟ್ಟಣ ಶಾಲಾ ಮೈದಾನದಲ್ಲಿ ದಿವಂಗತ ಜಯರಾಮ್ ಎ.ಎಸ್.ಐ ಇವರ ಸ್ಮರಣಾರ್ಥ ಅಂತರ್ ರಾಜ್ಯ ಮಟ್ಟದ ಹಗಲು ರಾತ್ರಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು. ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ದೊಡ್ಡಣ್ಣ ಬರಮೇಲು ತೆಂಗಿನ ಕಾಯಿ ಒಡೆದು ಕ್ರೀಡಾಗಣ ಭೂಮಿ ಪೂಜೆ ನೆರವೇರಿಸಿದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮತ್ತು ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ. ಮುಸ್ತಫ ಕ್ರೀಡಾoಗಣ ವನ್ನು ಉದ್ಘಾಟಿಸಿದರು. ದ. ಕ. ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಎಸ್. ಸಂಶುದ್ದೀನ್ ಆಟಗಾರರ ಪರಿಚಯ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಸಂಯೋಜಕ ಎನ್. ಜಯಪ್ರಕಾಶ್ ರೈ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಭವಾನಿ ಶಂಕರ್ ಕಲ್ಮಡ್ಕ, ಕೆ.ಗೋಕುಲ್ ದಾಸ್, ರಕ್ಷಿತ್ ದೊಡ್ಡಡ್ಕ, ಮಂಜುನಾಥ್ ಕಂಡಡ್ಕ ಮತ್ತು ಪಂದ್ಯಾಟದ ವ್ಯವಸ್ಥಾಪಕ ಸುಧಾಕರ್ ನಾಗಪಟ್ಟಣ, ಸಂಘಟಕರಾದ ಚಿತ್ರವೇಲು ನಾಗಪಟ್ಟಣ, ಆನಂದ ನಾಗಪಟ್ಟಣ, ಸುರೇಶ್ ನಾಗಪಟ್ಟಣ ಮೊದಲಾದವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading