ನಾಗತೀರ್ಥ : ಕ್ರಿಕೆಟ್ ಪಂದ್ಯಾಟ – ಅಟಲ್ ಜೀ ಕ್ರಿಕೆಟರ್ಸ್ ಕೂತ್ಕುಂಜ ಪ್ರಥಮ , ಗರಡಿ ಕ್ರಿಕೆಟರ್ಸ್ ನಾಗತೀರ್ಥ ದ್ವಿತೀಯ

ಮಿತ್ರ ಮಂಡಲ ನಾಗತೀರ್ಥ ಇದರ ಆಶ್ರಯದಲ್ಲಿ 14 ವರ್ಷಕ್ಕಿಂತ ಒಳಗಿನ ಮಕ್ಕಳ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಕೋಟಿ ಚೆನ್ನಯ ಗರಡಿಯ ಮುಂಭಾಗದ ಮೈದಾನದಲ್ಲಿ ಜರುಗಿತು.

. . . . . . . . .


ಪೊಳೆಂಜ ಕ್ರಿಕೆಟರ್ಸ್ ,ಅಟಲ್ ಜೀ ಕ್ರಿಕೆಟರ್ಸ್ ಕೂತ್ಕುಂಜ,ಗರಡಿ ಕ್ರಿಕೆಟರ್ಸ್ ನಾಗತೀರ್ಥ ಮೂರು ತಂಡಗಳ ಲೀಗ್ ಮಾದರಿಯ ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ಅಟಲ್ ಜೀ ಕ್ರಿಕೆಟರ್ಸ್ ಕೂತ್ಕುಂಜ ,ದ್ವೀತಿಯ ಬಹುಮಾನವನ್ನು ಗರಡಿ ಕ್ರಿಕೆಟರ್ಸ್ ನಾಗತೀರ್ಥ ಗೆದ್ದುಕೊಂಡಿತು .
ಉತ್ತಮ ಎಸೆತಗಾರ ಪುನಿತ್ ,ಉತ್ತಮ ದಾಂಡಿಗ ವಿನಿತ್ , ಪಂದ್ಯ ಪಂದ್ಯಶ್ರೇಷ್ಠ ಮೋಕ್ಷಿತ್, ಸರಣಿಶ್ರೇಷ್ಠ ದಿಶಾಂತ್ ಜಲಕದಹೊಳೆ, ಉತ್ತಮ ವಿಕೆಟ್ ಕೀಪರ್ ಪ್ರಶಾಂತ್ ಸಂಪ, ಉತ್ತಮ ಕ್ಷೇತ್ರರಕ್ಷಕ ರಂಜಿತ್ ಜಲಕದಹೊಳೆ ಪಡೆದುಕೊಂಡರು ‌.
ಮಿತ್ರ ಮಂಡಲ ನಾಗತೀರ್ಥ ಇದರ‌ ಅಧ್ಯಕ್ಷರಾದ ಕಾರ್ತಿಕ್ ನಾಗತೀರ್ಥ ,ಯುವಜನ ಸಂಯುಕ್ತ ಮಂಡಳಿ ರಿ ಸುಳ್ಯ ಇದರ ಅಧ್ಯಕ್ಷರಾದ ಪವನ್ ಪಲ್ಲತ್ತಡ್ಕ, ಹಿರಿಯ ಆಟಗಾರ ಪುರುಷೋತ್ತಮ ನಾಗತೀರ್ಥ, ದೇವಿಪ್ರಸಾದ್ ಗುಂಡಡ್ಕ, ಸಿದ್ಧಿಕ್ ಪೊಳೆಂಜ ,ನಿಖಿಲ್ ಕಕ್ಯಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುರಂದರ ಶೆಟ್ಟಿ ನಾಗತೀರ್ಥ ಕಾರ್ಯಕ್ರಮವನ್ನು ನಿರೂಪಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading