ಮನೋಜ್ ಕುಮಾರ್.ಕೆ ಅವರಿಗೆ ಪಿಎಚ್.ಡಿ ಪದವಿ ಪ್ರದಾನ

ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾದ ಮನೋಜ್ ಕುಮಾರ್.ಕೆ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಇವರು ಮಂಡಿಸಿದ “ಏ ಸ್ಟಡಿ ಆನ್ ಎಜುಕೇಶನಲ್ ಲರ್ನಿಂಗ್ ಔಟ್ಕಮ್ ಅಲೈನಿಂಗ್ ಟವಾರ್ಡ್ಸ್ ದಿ ಕಾರ್ಪೊರೇಟ್ ಸೆಕ್ಸರಸ್ ಪ್ರೊಸ್ಪೆಕ್ಸ್ ವಿದ್ ಸ್ಪೆಷಲ್ ರಿಫರ್ನ್ಸ್ ಟು ಕರ್ನಾಟಕ” ಎಂಬ ಪ್ರೌಢ ಪ್ರಬಂಧಕ್ಕೆ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಡಾಕ್ಟರ್‌ಆಫ್ ಫಿಲಾಸಫಿ(ಪಿ.ಎಚ್.ಡಿ) ಪದವಿ ಪ್ರದಾನ ಮಾಡಿದೆ. ಇವರು ಸುಳ್ಯ ತಾಲೂಕಿನ ಕಾಯರ್ತೋಡಿ ಮನೆ ದಾಮೋದರ ಮಣಿಯಾಣಿ ಮತ್ತು ಶ್ರೀಮತಿ ಮೀನಾಕ್ಷಿ ಮಣಿಯಾಣಿ ಅವರ ಪುತ್ರ. 
ವಿಶ್ವವಿದ್ಯಾಲಯದ ೫ನೇ ಘಟಿಕೋತ್ಸವ ಸಮಾರಂಭದಲ್ಲಿ ಗೌರವಾನ್ವಿತ ರಾಜ್ಯಪಾಲದ ಶ್ರೀ ಥಾವರ್‌ಚಂದ್ ಗೆಹ್ಲೋಟ್ ಅವರು ಮನೋಜ್ ಕುಮಾರ್.ಕೆ ಅವರಿಗೆ ಪದವಿ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರಾದ ವೆಂಕಟೇಶ ಪ್ರಸಾದ್ (ಕ್ರೀಡೆ), ಅರ್ಜುನ್ ಜನ್ಯ(ಸಂಗೀತ ನಿರ್ದೇಶಕ), ಟಿ.ಕೆ. ನಾರಾಯಣಪ್ಪ (ಶಿಕ್ಷಣ ತಜ್ಞ), ಕೆ.ಗೋವಿಂದರಾಜು(ಕ್ರೀಡಾ ಆಡಳಿತ), ಮೋಹನ್ ಆಳ್ವ(ಶಿಕ್ಷಣ), ಹಾಗೂ ಬಿ.ಎಂ. ಫಾರೂಕ್ (ಕೈಗಾರಿಕೋದ್ಯಮಿ) ಅವರಿಗೆ ಗೌರವ ಡಾಕ್ಟರೆಟ್ ನೀಡಿ ಗೌರವಿಸಲಾಯಿತು. ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ(ಡಿ.ಆರ್‌.ಡಿ.ಒ) ಮಹಾನಿರ್ದೇಶಕ ಡಾ. ಬಿನಯ್ ಕುಮಾರ್ ದಾಸ್, ವಿ.ವಿ ಕುಲಪತಿ ಪ್ರೊ. ಬಿ.ರಮೇಶ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading