ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜ್ಜೀವನ್ ರಾಂ ರವರ 119ನೇ ಜನ್ಮ ದಿನಾಚರಣೆ ; “ಬಾಬೂಜಿಯವರು ಕೃಷಿ ಸಚಿವರಾಗಿದ್ದಾಗ ಮಾಡಿದ ಹಸಿರು ಕ್ರಾಂತಿಯಿಂದ ಇಂದು ದೇಶ ಆಹಾರದಲ್ಲಿ ಸ್ವಾವಲಂಬನೆ ಸಾದಿಸಿದೆ” : ಕೆ. ಎಂ. ಮುಸ್ತಫ

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸುಳ್ಯ ತಾಲೂಕು ಆಡಳಿತದ ವತಿಯಿಂದ ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜ್ಜೀವನ್ ರಾಂ ರವರ 119ನೇ ಜನ್ಮ ದಿನಾಚರಣೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರಗಿತು. ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ತಹಶೀಲ್ದಾರ್ ಶ್ರೀಮತಿ ಮಂಜುಳಾ ಕೆ.ಎ.ಎಸ್ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ “ಡಾ.ಬಾಬು ಜಗಜ್ಜೀವನ್ ರಾಂ ರವರು ರಕ್ಷಣಾ ಸಚಿವರಾಗಿ ದೇಶದ ಭದ್ರತೆಗೆ ದೃಢ ನೀತಿಯನ್ನು ತಂದರು 1971ರಲ್ಲಿ ಯುದ್ಧವನ್ನು ಯಶಸ್ವಿಯಾಗಿ ನಿಭಾಯಿಸಿ ಜಯಶಾಲಿಯಾದರು. ಕೃಷಿ ಸಚಿವರಾಗಿ ದೇಶವನ್ನು ಹಸಿರು ಕ್ರಾಂತಿಯ ಮೂಲಕ ಆಹಾರ ಧಾನ್ಯ ಸ್ವಾವಲಂಬನೆ ಸಾದಿಸಿದರು. ದೇಶ ಕಠಿಣ ಪರಿಸ್ಥಿತಿಯಲ್ಲೂ ನಿಭಾಯಿಸುವ ಶಕ್ತಿ ಹೊಂದಿದೆ ಎಂದರು. ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ತಾಲೂಕು ಪಂಚಾಯತ್ ಕಾರ್ಯ ನಿರ್ವಣಾಧಿಕಾರಿ ರಾಜಣ್ಣ, ಸಂದರ್ಬೊಚಿತವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದ ಶಿಕ್ಷಣ ಇಲಾಖೆಯ ಶ್ರೀಮತಿ ಮಮತಾ ಡಾ. ಜಗಜ್ಜೀವನ್ ರಾಂ ರವರ ಜೀವನ ಚರಿತ್ರೆ ಹೇಳಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಕೃಷ್ಣ.ಬಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ್ ಮೇಲ್ವಿಚಾರಕರು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಇವರು ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading