ದ್ವಾದಶ ರಾಶಿಗಳ ದಿನ ಭವಿಷ್ಯ

ದ್ವಾದಶ ರಾಶಿಗಳ ದಿನ ಭವಿಷ್ಯ
ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197

01)🐏ಮೇಷ ರಾಶಿ🐏
📃ದೂರ ಪ್ರಯಾಣದಲ್ಲಿ ಎಚ್ಚರಿಕೆ ವಹಿಸಬೇಕು. ಹಿರಿಯರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ. ಮನೆಯ ಹೊರಗೆ ಗೊಂದಲಮಯ, ವಾತಾವರಣ ವಿರುತ್ತದೆ. ಉದ್ಯೋಗಿಗಳು ಹೆಚ್ಚುವರಿ ಜವಾಬ್ದಾರಿಗಳನ್ನು ಹೊಂದಿರುತ್ತಾರೆ, ಮತ್ತು ಸ್ಥಿರ ಆಸ್ತಿ ಮಾರಾಟದಲ್ಲಿ ನಿರೀಕ್ಷಿತ ಲಾಭವನ್ನು ಹೊಂದಿರುವುದಿಲ್ಲ. ಆರ್ಥಿಕವಾಗಿ ಗೊಂದಲಮಯ ಪರಿಸ್ಥಿತಿಗಳಿರುತ್ತದೆ, ಕೆಮ್ಮು, ಕಫ, ಶೀತದಂಥ ಆರೋಗ್ಯ ಸಮಸ್ಯೆಗೆ ತುತ್ತಾಗಬಹುದು. ಅಪರಿಚಿತರ ಜತೆಗೆ ಸಲುಗೆ ಬೇಡ.
ಗಮನಿಸಿ:-ಇಂದು ಅರೋಗ್ಯ ವೃದ್ಧಿಗಾಗಿ ವ್ಯಾಯಾಮ ಮಾಡಿ,
ಪರಿಹಾರ:- ಶನಿ ಮಂತ್ರವನ್ನು ಪಠಿಸಿ.

02)🐂ವೃಷಭ ರಾಶಿ🐂
📃ಮನೆಯಲ್ಲಿ ಮದುವೆ ಶುಭ ಕಾರ್ಯಗಳು ನಡೆಯುತ್ತವೆ. ವ್ಯಾಪಾರ ಉದ್ಯೋಗಗಳು ಅಭಿವೃದ್ಧಿಹಾದಿಯಲ್ಲಿಸಾಗುತ್ತವೆ. ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ಹೊಸ ಪರಿಚಯಗಳು ಹೆಚ್ಚಾಗುತ್ತವೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತವೆ ಮತ್ತು ರಾಜಕೀಯ ಸಭೆಗಳಿಗೆ ಆಹ್ವಾನಗಳು ಬರುತ್ತವೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಹೂಡಿಕೆಗಳನ್ನು ಸಂಗ್ರಹಿಸಲಾಗುತ್ತದೆ, ಕೆಲಸದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು.
ಗಮನಿಸಿ:- ನಿಮ್ಮಕಣ್ತಪ್ಪಿನಿಂದ ದೊಡ್ಡಅನಾಹುತ ಆಗಬಹುದು.
ಪರಿಹಾರ:- ತಾಯಿ ದುರ್ಗಿಯನ್ನು ಪ್ರಾರ್ಥಿಸಿ.

. . . . . . . . .

03)👥ಮಿಥುನ ರಾಶಿ👥
📃ಹಳೆಯ ಸ್ನೇಹಿತರೊಂದಿಗೆ ಭೋಜನ ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ.ಸ್ಥಿರಾಸ್ತಿ ಖರೀದಿಯ ಪ್ರಯತ್ನಗಳು ಫಲ ನೀಡುತ್ತವೆ. ಪ್ರಮುಖ ವಿಷಯಗಳಲ್ಲಿ ಕುಟುಂಬದ ಹಿರಿಯರ ಸಲಹೆಯನ್ನುತೆಗೆದು ಕೊಳ್ಳುವುದು, ಉತ್ತಮ. ವೃತ್ತಿಪರ ಉದ್ಯೋಗಳಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಸಾಮರಸ್ಯ ಉಂಟಾಗುತ್ತದೆ. ವ್ಯಾಪಾರಗಳು ನಿರೀಕ್ಷಿತ ಲಾಭವನ್ನು ಪಡೆಯುತ್ತೀರಿ.
ಗಮನಿಸಿ:-ನಿರುದ್ಯೋಗಿ ಗಳಿಗೆ ಪ್ರಯತ್ನಗಳು ಫಲಿಸುತ್ತವೆ.
ಪರಿಹಾರ:- ಯಡಿಯೂರು ಶ್ರೀ ಸಿದ್ದಲಿಂಗೇಶ್ವರರ ಪ್ರಾರ್ಥನೆ ಮಾಡಿ.

. . . . . . .

04)🦀ಕರ್ಕಾಟಕ ರಾಶಿ🦀
📃ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಮನೆಯ ಹೊರಗೆ ಸಮಸ್ಯೆಗಳು ಹೆಚ್ಚಾಗುತ್ತವೆ. ಆಧ್ಯಾತ್ಮಿಕ ಸೇವೆಗಳತ್ತ, ಗಮನ ಹರಿಸುತ್ತೀರಿ. ವೃತ್ತಿಪರ ವ್ಯವಹಾರಗಳಲ್ಲಿ ಹೆಚ್ಚು ಶ್ರಮಿಸುತ್ತೀರಿ. ಹಳೆಯ ಸಾಲಗಳ ಒತ್ತಡದಿಂದಾಗಿ ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ಉದ್ಯೋಗಿಗಳಿಗೆ ಹೆಚ್ಚುವರಿ ಕೆಲಸದ ಹೊರೆ ಇರುತ್ತದೆ.
ಯಾವುದೇ ನಿರ್ಧಾರಗಳನ್ನು ತಿಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದತೀರ್ಮಾನವನ್ನು ತೆಗೆದುಕೊಳ್ಳಿ.
ಗಮನಿಸಿ:-ಹೊಸಬರ ಜತೆಗೆ ರಹಸ್ಯ ವಿಚಾರವನ್ನು ಹಂಚಿಕೊಳ್ಳಬೇಡಿ.
ಪರಿಹಾರ:-ಬಡವರಿಗೆ ಅನ್ನದಾನ ಮಾಡಿ.

05)🦁ಸಿಂಹ ರಾಶಿ🦁
📃ಕುಟುಂಬ ವ್ಯವಹಾರಗಳಲ್ಲಿ ಹಠಾತ್ ನಿರ್ಧಾರಗಳನ್ನು ಬದಲಾಯಿ ಸುತ್ತೀರಿ. ದೈವಿಕ ಸೇವಾ ಕಾರ್ಯಗಳಲ್ಲಿಭಾಗವಹಿಸುತ್ತೀರಿ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬವಾದರೂನಿಧಾನಗತಿಯಲ್ಲಿ ಪೂರ್ಣಗೊಳಿಸುತ್ತೀರಿ. ವೃತ್ತಿ ವ್ಯವಹಾರಗಳು ಮಂದಗತಿಯಲ್ಲಿ ಸಾಗುತ್ತವೆ. ಉದ್ಯೋಗಿಗಳಿಗೆ ಕೆಲಸದ ಹೊರೆ ಹೆಚ್ಚಾಗುತ್ತದೆ.
ದೀರ್ಘಾವಧಿಯೋಜನೆಗಳನ್ನು ಸ್ವಲ್ಪ ಕಾಲ ಮುಂದೂಡುವುದು ಉತ್ತಮ, ಗಮನಿಸಿ:-ಸಹೋದ್ಯೋಗಿಗಳನ್ನು ಸಮಾನವಾಗಿ ಕಾಣಿರಿ.
ಪರಿಹಾರ:-ತಾಯಿ ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ.

06)👩‍🦳ಕನ್ಯಾ ರಾಶಿ👩‍🦳
📃ಮನೆಯಲ್ಲಿ ಭೋಜನ ಮನರಂಜನಾ,ಕಾರ್ಯಕ್ರಮಗಳನ್ನು ನಿರ್ವಹಿಸುತ್ತೀರಿ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ, ಮುಕ್ತಿ ಸಿಗುತ್ತದೆ. ಕುಟುಂಬದ ಸದಸ್ಯರ ನೆರವಿನಿಂದ ಕೆಲವು ಕೆಲಸಗಳು ಪೂರ್ಣಗೊಳ್ಳುತ್ತವೆ.ವ್ಯಾಪಾರದ ವಾತಾವರಣವು ಅನುಕೂಲಕರವಾಗಿರುತ್ತದೆ. ಉದ್ಯೋಗದಲ್ಲಿ ಉನ್ನತ ಹುದ್ದೆ ದೊರೆಯುತ್ತದೆ,ಹಿರಿಯರಿಗೆ ವಯೋ ಸಹಜ ಆರೋಗ್ಯ ಸಮಸ್ಯೆಗಳು ಕಾಡಬಹುದು.
ಗಮನಿಸಿ:- ಇಂದು ಕಡ್ಡಾಯವಾಗಿ ವೈದ್ಯರನ್ನು ಭೇಟಿಯಾಗಿ.
ಪರಿಹಾರ:-ಗುರುವೀರಬ್ರಹ್ಮೇಂದ್ರ ಸ್ವಾಮಿಗಳ ನಾಮಸ್ಮರಣೆ ಮಾಡಿ.

07)⚖️ತುಲಾ ರಾಶಿ⚖️
📃ನಿರುದ್ಯೋಗಿಗಳ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ನಿರೀಕ್ಷೆಗಳು ಈಡೇರುತ್ತವೆ. ಹೊಸಗೃಹವಾಹನಯೋಗವಿದೆ. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ, ಪ್ರಮುಖ ವಿಷಯಗಳನ್ನು,ಚರ್ಚಿಸುತ್ತೀರಿಉದ್ಯೋಗದಲ್ಲಿ,ಆರ್ಥಿಕಪ್ರಗತಿ ಉಂಟಾಗುತ್ತದೆ.
ಗಮನಿಸಿ:-ಆಪತ್ಕಾಲಕ್ಕಾಗಿ ಕೂಡಿಟ್ಟಿದ್ದ ಹಣವನ್ನು ಖರ್ಚು ಮಾಡಬೇಕಾದ ಸನ್ನಿವೇಶ ಎದುರಾಗುತ್ತದೆ.
ಪರಿಹಾರ:-ನಾಯಿಗಳಿಗೆ ಆಹಾರ ನೀಡಿ.

08)🦂ವೃಶ್ಚಿಕ ರಾಶಿ🦂
📃ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ ಸಕಾಲಕ್ಕೆ ಹಣ ಸಿಗದೆ ನಿರಾಸೆಉಂಟಾಗುತ್ತದೆ. ಹಠಾತ್ಪ್ರಯಾಣದಸೂಚನೆಗಳಿವೆ.ಕೈಗೊಳ್ಳುವವ್ಯವಹಾರಗಳಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಂಡುತೊಂದರೆಗಳನ್ನು. ಎದುರಿಸುತ್ತೀರಿ ವ್ಯಾಪಾರ ಉದ್ಯೋಗಗಳುಕೆಲವುಋಣಾತ್ಮಕ ವಾತಾವರಣವನ್ನು, ಒಳಗೊಂಡಿರುತ್ತವೆ, ಹಳೆ ವಾಹನವನ್ನು ಮಾರಾಟಕ್ಕೆ ಇಟ್ಟವರಿಗೆ ಸೂಕ್ತ ಖರೀದಿದಾರರು ಬರುವ ಸಾಧ್ಯತೆ ಇದೆ.
ಗಮನಿಸಿ:-ನಿಮ್ಮ ಸಂದೇಹ ಪ್ರವೃತ್ತಿಯಿಂದ ಸಂಗಾತಿ, ಮಕ್ಕಳ ಜತೆಗೆ ಭಿನ್ನಾಭಿಪ್ರಾಯ ಉದ್ಭವಿಸುತ್ತದೆ.
ಪರಿಹಾರ:-ಆಂಜನೇಯನ ಪ್ರಾರ್ಥನೆ ಮಾಡಿ.

09)🏹ಧನುಸ್ಸು ರಾಶಿ🏹
📃ಹೊಸ ಉದ್ಯಮ ಆರಂಭಿಸಲು ಅಡೆತಡೆಗಳು ಎದುರಾಗುತ್ತವೆ. ಕೌಟುಂಬಿಕ ವಿಷಯಗಳಲ್ಲಿ ಅಸ್ಥಿರವಾದ ಆಲೋಚನೆಗಳಿಂದ ವಿವಾದಗಳು ಉಂಟಾಗುತ್ತವೆ. ಪ್ರಮುಖ ವ್ಯವಹಾರಗಳನ್ನು ಮುಂದೂಡುವುದು ಉತ್ತಮ. ಆರೋಗ್ಯ ಸಮಸ್ಯೆಗಳು ನೋವುಂಟು, ಮಾಡುತ್ತವೆ. ಹೊಸ ಸಾಲವನ್ನು ತೆಗೆದುಕೊಳ್ಳದಿರುವುದು ಉತ್ತಮ.
ಗಮನಿಸಿ:-ನಿರುದ್ಯೋಗ ಪ್ರಯತ್ನಗಳು ನಿಧಾನವಾಗಿ ಸಾಗುತ್ತವೆ.
ಪರಿಹಾರ:- ಗಣಪತಿಗೆ ಗರಿಕೆಯನ್ನು ನೀಡಿ.

10)🐊ಮಕರ ರಾಶಿ🐊
📃ಆತ್ಮೀಯರಿಂದ ಶುಭ ಸುದ್ದಿ ದೊರೆಯುತ್ತದೆ. ಅಗತ್ಯಕ್ಕೆ ಆರ್ಥಿಕ ನೆರವು ದೊರೆಯುತ್ತದೆ. ಹೊಸ ವಾಹನ ಖರೀದಿಯ ಪ್ರಯತ್ನಗಳು ಕೂಡಿ ಬರುತ್ತವೆ. ಹೊಸ ವ್ಯಕ್ತಿಗಳಪರಿಚಯಗಳು ಉಂಟಾಗುತ್ತವೆ. ಕೈಗೆತ್ತಿಕೊಂಡ ಕೆಲಸದಲ್ಲಿ ಅಪ್ರಯತ್ನ ಕಾರ್ಯಸಿದ್ಧತೆ,ಉಂಟಾಗುತ್ತದೆ.ಉದ್ಯೋಗಗಳು ಹೆಚ್ಚು ಉತ್ಸಾಹ ದಾಯಕವಾಗಿ ಸಾಗುತ್ತವೆ.
ಗಮನಿಸಿ:-ಬಹಳ ಸಮಯದಿಂದ ನಿರೀಕ್ಷೆ ಮಾಡುತ್ತಿದ್ದ ಹುದ್ದೆ ಅಥವಾ ಜವಾಬ್ದಾರಿಗೆ ನಿಮ್ಮ ಹೆಸರನ್ನು ಸೂಚಿಸಲಾಗುತ್ತದೆ.
ಪರಿಹಾರ:- ತಾಯಿ ಚಾಮುಂಡಿಯನ್ನು ಪ್ರಾರ್ಥಿಸಿ,

11)⚱️ಕುಂಭ ರಾಶಿ⚱️
📃ಕೈಗೊಂಡ ಕೆಲಸಗಳಲ್ಲಿ ಸಮಸ್ಯೆಗಳು, ಎದುರಾಗುತ್ತವೆ, ವ್ಯರ್ಥ ಖರ್ಚುಗಳ ಬಗ್ಗೆ ಮರುಚಿಂತನೆ ಮಾಡುವುದು ಒಳ್ಳೆಯದು. ಕುಟುಂಬ ಸದಸ್ಯರೊಂದಿಗೆ ಭಿನ್ನಭಿಪ್ರಾಯಗಳು ಉಂಟಾಗುತ್ತವೆ, ದೂರದ ಪ್ರಯಾಣವನ್ನು ಮುಂದೂಡುವುದು ಉತ್ತಮ. ವೃತ್ತಿಪರ ಉದ್ಯೋಗಗಳಲ್ಲಿ ಅಧಿಕಾರಿಗಳೊಂದಿಗೆ ಕಿರಿ-ಕಿರಿ ಯುಂಟಾಗುತ್ತದೆ.
ಗಮನಿಸಿ:-ನಿರುದ್ಯೋಗಿಗಳ ಪ್ರಯತ್ನಗಳು ನಿಧಾನವಾಗುತ್ತವೆ.
ಪರಿಹಾರ:-ಗ್ರಾಮದೇವತೆಗೆ ನಿಂಬೆಹಣ್ಣಿನ ದೀಪ ಬೆಳಗಿ. 

12)🐬ಮೀನ ರಾಶಿ🐬
📃ಕುಟುಂಬ ಸದಸ್ಯರಿಂದ ಆರ್ಥಿಕನೆರವುದೊರೆಯುತ್ತದೆ, ವೃತ್ತಿಪರ ಉದ್ಯೋಗಗಳಲ್ಲಿ ಅಧಿಕಾರಿಗಳಿಗೆ, ಬಡ್ತಿ ಹೆಚ್ಚಾಗುತ್ತದೆ. ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸಿ, ಸಮಯಕ್ಕೆ ಸರಿಯಾಗಿಪೂರ್ಣಗೊಳಿಸಲಾಗುತ್ತದೆ. ವ್ಯಾಪಾರದ ಪಾಲುದಾರ ರೊಂದಿಗಿನ, ಚರ್ಚೆಗಳು ಉಂಟಾಗುತ್ತವೆ. ನಿರುದ್ಯೋಗಿಗಳಿಗೆ ,ಉದ್ಯೋಗಾವಕಾಶಗಳುದೊರೆಯುತ್ತದೆ. ಆಸ್ತಿ- ಭೂಮಿ ವ್ಯವಹಾರದಲ್ಲಿ ಈ ಹಿಂದೆ ನಿಮಗೆ ಬರಬೇಕಿದ್ದ ಬಾಕಿ ಇದ್ದಲ್ಲಿಈದಿನ ಪ್ರಯತ್ನಿಸಿ.
ಗಮನಿಸಿ:-ಕನಿಷ್ಠ ಪಕ್ಷ ಯಾವಾಗ ವಾಪಸ್ ಬರುತ್ತದೆ ಎಂದು ತಿಳಿಯುತ್ತದೆ.
ಪರಿಹಾರ:- ಗುರುರಾಯರನ್ನು ಪ್ರಾರ್ಥಿಸಿ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading