ಸುಳ್ಯ : ಬೃಹತ್ ಮೊಬೈಲ್ ಶೋರೂಂ ಶಿವಾನಿ ಮೊಬೈಲ್ಸ್ ಶುಭಾರಂಭ

ಸುಳ್ಯದ ಕುರುಂಜಿಭಾಗ್ ರಸ್ತೆಯ ಚೆನ್ನಕೇಶವ ವೃತ್ತದ ಬಳಿಯಲ್ಲಿರುವ ಕೀರ್ತನ್ ಟವರ್ಸ್ ನಲ್ಲಿ ಆದಿತ್ಯ ಕೆದಿಲಾಯ ರವರ ಮಾಲಕತ್ವದ ಶಿವಾನಿ ಮೊಬೈಲ್ಸ್ ಎ.2ರಂದು ಶುಭಾರಂಭಗೊಂಡಿತು.

. . . . . . . . .

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ರವರು ನೂತನ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ ‘ ತಂತ್ರಜ್ಞಾನದ ತರಬೇತಿ ಪಡೆದು ಸ್ವತಃ ವರ್ಕ್ ಮಾಡಿ ಅನುಭವ ಪಡೆದು ಇದೀಗ ಇಷ್ಟು ದೊಡ್ಡ ಮಟ್ಟದ ಮೊಬೈಲ್ ಶೋರೂಂ ತೆರೆದು ತಮ್ಮ ಕನಸನ್ನು ನನಸಾ ಗಿಸಿಕೊಂಡಿರುವುದು ಶ್ಲಾಘನೀಯ. ಆನ್ ಲೈನ್ ಖರೀದಿ ಕಡಿಮೆ ಮಾಡಿ ಸ್ಥಳೀಯ ವ್ಯಾಪಾರಸ್ಥರನ್ನು ಬೆಂಬಲಿಸುವಂತಾಗಬೇಕು ಎಂದರು.

. . . . . . .

ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಸುಳ್ಯ,ವರ್ತಕರ ಸಂಘದ ನಿಕಟಪೂರ್ವ ಅಧ್ಯಕ್ಷ ಪಿ. ಬಿ.ಸುಧಾಕರ ರೈ, ಸುಳ್ಯ ಗುರುರಾಘವೇಂದ್ರ ಮಠದ ಅಧ್ಯಕ್ಷರಾದ ಶ್ರೀಕೃಷ್ಣ ಸೋಮಾಯಾಗಿ,ಮೊಬೈಲ್ ಫೋನ್ ಒಕ್ಕೂಟದ ಅಧ್ಯಕ್ಷ ಎಸ್. ವೈ ರೆಹಮಾನ್,ಸುಳ್ಯ ಆಯುರ್ಧಾಮ ಆಸ್ಪತ್ರೆಯ ಸ್ಥಾಪಕಾಧ್ಯಕ್ಷ ಡಾ. ಹರಿಪ್ರಸಾದ್ ಶೆಟ್ಟಿ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ರೂ. ಅಬ್ದುಲ್ ಹಮೀದ್ ಜನತಾ, ಕೀರ್ತನ್ ಟವರ್ಸ್ ಮಾಲಕ ದಾಮೋದರ ಗೌಡ ನಾರ್ಕೋಡು, ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಸುಳ್ಯ ಸೃಷ್ಠಿ ಫ್ಯಾನ್ಸಿ ಮಾಲಕ ಶೈಲೇಂದ್ರ ಸರಳಾಯ, ವೆಹಿಕೆಲ್ ಕೆಫೆ ಮಾಲಕ ಮಯೂರ್ ಗೌಡ,ಬೆಂಗಳೂರು ಗ್ಯಾಲಕ್ಸಿ ಇಂಟೀರಿಯರ್ ಮಾಲಕ ನಿಶಾಂತ್ ಪೂಜಾರಿ ಯವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪದ್ಮ ಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ರವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮಾಲಕರ ತಂದೆ ಪುಂಡರೀಕಾಕ್ಷ, ತಾಯಿ ಶ್ರೀಮತಿ ದುರ್ಗಾ ಪರಮೇಶ್ವರಿ ಹಾಗೂ ಕೆದಿಲಾಯ ಕುಟುಂಬಸ್ಥರು
ಉಪಸ್ಥಿತರಿದ್ದರು.

ಇಲ್ಲಿ ಎಲ್ಲಾ ತರಹದ ಮೊಬೈಲ್ ರಿಪೇರಿ, ಪ್ರಸಿದ್ಧ ಕಂಪೆನಿಯ
ಹೊಸ ಮೊಬೈಲ್ ಮಾರಾಟ ಹಾಗೂ ಹಳೆಯ ಮೊಬೈಲ್ ಎಕ್ಸೇಂಜ್ ಸೌಲಭ್ಯವಿದೆ.ಬ್ಯಾಟರಿ & ಚಾರ್ಜರ್ ಕೂಡ ಲಭ್ಯವಿದೆ.ಹೆಡ್‌ಫೋನ್, ಟೆಂಪರ್ಡ್ ಗ್ಲಾಸ್,ಸಾಫ್ಟ್‌ವೇರ್ ಅಪ್ಡೇಟ್ & ಡೇಟಾ ಟ್ರಾನ್ಸರ್ ಮುಂತಾದ ಎಲ್ಲಾ ರೀತಿಯ ಮೊಬೈಲ್ ಸರ್ವೀಸ್ ,ಆಧುನಿಕ ತಂತ್ರಜ್ಞಾನ ಬಳಸಿ ಕ್ಲಪ್ತ ಸಮಯದಲ್ಲಿ ದುರಸ್ತಿ ಮಾಡಿ ಕೊಡಲಾಗುವುದು ಎಂದು ಮಾಲಕರಾದ ಆದಿತ್ಯ ಕೆದಿಲಾಯ ರವರು ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading