ಒಡಿಯೂರು ಶ್ರೀ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘ ದಾಖಲೆಯ ರೂ.830 ಕೋಟಿ ವ್ಯವಹಾರ – ರೂ.7.50 ಕೋಟಿ ಲಾಭ – ಸಂಘದ ಅಧ್ಯಕ್ಷ ಸಹಕಾರ ರತ್ನ ಎ.ಸುರೇಶ್ ರೈ ಹೇಳಿಕೆ

. . . . . . . . .

ಮಂಗಳೂರು : ಒಡಿಯೂರು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಸಾಧ್ವೀ ಶ್ರೀ ಶ್ರೀ ಮಾತಾನಂದಮಯಿಯವರ ಗೌರವ ಮಾರ್ಗದರ್ಶನದೊಂದಿಗೆ ಒಡಿಯೂರು ಶ್ರೀ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘವು ಆರ್ಥಿಕ ವರ್ಷ 2025-26ನೇ ಸಾಲಿನಲ್ಲಿ ಸಾರ್ವಕಾಲಿಕ ಸಾಧನೆಯೊಂದಿಗೆ ರೂ.830.೦೦ ಕೋಟಿ ವ್ಯವಹಾರ ನಡೆಸಿ ರೂ.7.50 ಕೋಟಿ ಲಾಭ ಗಳಿಸಿದೆ. ಕಳೆದ ಸಾಲಿಗೆ ಹೋಲಿಸಿದರೆ ಲಾಭ ಗಳಿಕೆಯಲ್ಲಿ ಶೇ. 36.36 ಏರಿಕೆ ಆಗಿದೆ ಎಂದು ಸಂಘದ ಅಧ್ಯಕ್ಷ ಸಹಕಾರ ರತ್ನ ಶ್ರೀ ಎ.ಸುರೇಶ್ ರೈ ತಿಳಿಸಿದರು.
ಸಂಘದ ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನ ವ್ಯವಹಾರಕ್ಕಿಂತ ಈ ಬಾರಿ ಶೇ.23.20 ಏರಿಕೆ ಕಂಡಿದೆ. ಸಹಕಾರಿಯು 24 ಶಾಖೆಗಳ ಮೂಲಕ ರೂ.458.೦೦ ಕೋಟಿ ಠೇವಣಿ ಸಂಗ್ರಹಿಸಿದೆ. ಕಳೆದ ಸಾಲಿಗೆ ಹೋಲಿಸಿದರೆ ಠೇವನಿ ಸಂಗ್ರಹಣೆಯಲ್ಲಿ ಶೇ.24.92 ಹೆಚ್ಚಳವಾಗಿದೆ. ಸಾಲ ಮತ್ತು ಮುಂಗಡಗಳು ರೂ.372.೦೦ ಕೋಟಿ, ಪಾಲು ಬಂಡವಾಳ ರೂ.2.52 ಕೋಟಿ, ನಿಧಿಗಳು ರೂ.21.೦೦ ಕೋಟಿ ಮತ್ತು ದುಡಿಯುವ ಬಂಡವಾಳ ರೂ.482.೦೦ ಕೋಟಿಗಳನ್ನು ಹೊಂದಿದೆ ಎಂದರು.
ಒಡಿಯೂರಿನ ಪರಮಪೂಜ್ಯ ಶ್ರೀಗುರುಗಳವರ ದಿವ್ಯಹಸ್ತದಿಂದ ಸಾಧ್ವೀ ಶ್ರೀ ಮಾತೆಯವರ ಮಾರ್ಗದರ್ಶನ ದೊಂದಿಗೆ 2011ರಲ್ಲಿ ಸಂಘವು ಕಾರ್ಯಾರಂಭಿಸಿತು. ಎಲ್ಲಾ ಶಾಖೆಗಳು ಗಣಕೀಕೃತಗೊಂಡು ಕೋರ್ ಸಿಸ್ಟಮ್ ಸಾಪ್ಟ್ವೇರ್ ಅಳವಡಿಸಿದೆ. ಪ್ರತಿ ವರ್ಷವು ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ಎ ಶ್ರೇಣಿಯನ್ನು ಪಡೆದಿದೆ. ಕಳೆದ ವರ್ಷ ಸದಸ್ಯರಿಗೆ ಶೇ.21 ಡಿವಿಡೆಂಡ್ ನೀಡಿದೆ. ಸಹಕಾರಿಯ ಆಡಳಿತ ಕಛೇರಿ ಮತ್ತು ಪಂಪ್ವೆಲ್ ಶಾಖೆಯು ಮಂಗಳೂರಿನ ಪಂಪ್ವೆಲ್‌ನಲ್ಲಿರುವ ಲೋಟಸ್ ಗ್ಯಾಲಕ್ಸಿಯಲ್ಲಿ ಸುಮಾರು 7೦೦೦ ಚದರ ಅಡಿ ವಿಶಾಲ ಕಟ್ಟಡ ಕೋಣೆಗಳನ್ನು ಸ್ವಂತಕ್ಕೆ ಖರೀದಿಸಿ, ಹವಾನಿಯಂತ್ರಿತ ಸುಸಜ್ಜಿತ ಆತ್ಯಾಧುನಿಕ ಸೌಲಭ್ಯಗಳೊಂದಿಗೆ ಕಾರ್ಯಾಚರಿಸುತ್ತಿದೆ. ಸಹಕಾರಿಯ ಐದು ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಸಹಕಾರಿಯು ನಾಲ್ಕು ವರ್ಷಗಳಿಂದ ಉತ್ತಮ ಸೌಹಾರ್ದ ಪ್ರಶಸ್ತಿಯನ್ನು ಪಡೆದಿದೆ. ದ.ಕ.ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಮಾರು 8000 ಒಡಿಯೂರು ಶ್ರೀ ವಿಕಾಸವಾಹಿನಿ ಸ್ವಸಹಾಯ ಗುಂಪುಗಳಲ್ಲಿ ಸುಮಾರು 68,000 ಕ್ಕೂ ಮಿಕ್ಕಿ ಸದಸ್ಯರಿದ್ದಾರೆ. ಉಪಾಧ್ಯಕ್ಷರಾದ ಶ್ರೀ ಲಿಂಗಪ್ಪ ಗೌಡ ಪನೆಯಡ್ಕ, ನಿರ್ದೇಶಕರಾದ ಶ್ರೀ ವೇಣುಗೋಪಾಲ ಮಾರ್ಲ, ಶ್ರೀ ಲೋಕನಾಥ ಶೆಟ್ಟಿ ಮಂಗಳೂರು, ಶ್ರೀ ಗಣಪತಿ ಭಟ್ ಸೇರಾಜೆ ಹಾಗೂ ಸಿಇಒ ಶ್ರೀ ದಯಾನಂದ ಶೆಟ್ಟಿ ಬಾಕ್ರಬೈಲು ಹಾಗೂ ಶಾಖಾ ವ್ಯವಸ್ಥಾಪಕರುಗಳು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading