ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್(ರಿ.) ಕಳಂಜ – ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ; ಅಧ್ಯಕ್ಷ : ರಾಜೇಶ್ ಅಮೀನ್ ಪಟ್ಟೆ, ಕಾರ್ಯದರ್ಶಿ : ಲೋಹಿತ್ ಕಟ್ಟತ್ತಾರು

ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್(ರಿ.) ಕಳಂಜ ಇದರ ವಾರ್ಷಿಕ ಮಹಾಸಭೆಯು ಏ.01ರಂದು ಕಳಂಜ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ವಠಾರದಲ್ಲಿ ಜರುಗಿತು.
ಸಭೆಯಲ್ಲಿ 2025-26 ನೇ ಸಾಲಿನ ವಾರ್ಷಿಕ ಜಮಾ ಖರ್ಚನ್ನು ಮಂಡಿಸಿ ಅನುಮೋದಿಸಲಾಯಿತು. ಬಳಿಕ 2026-27ರಿಂದ ಮೊದಲ್ಗೊಂಡು ಮುಂದಿನ 3 ವರ್ಷಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಟ್ರಸ್ಟಿನ ನೂತನ ಅಧ್ಯಕ್ಷರಾಗಿ ರಾಜೇಶ್‌ ಅಮೀನ್ ಪಟ್ಟೆ, ಕಾರ್ಯದರ್ಶಿಯಾಗಿ ಲೋಹಿತ್ ಕಟ್ಟತ್ತಾರು, ಜೊತೆ ಕಾರ್ಯದರ್ಶಿಯಾಗಿ ಗಿರಿಧರ ಕಳಂಜ, ಖಜಾಂಚಿಯಾಗಿ ದಯಾನಂದ ಕಳಂಜ, ಉಪಾಧ್ಯಕ್ಷರಾಗಿ ನವೀನ ಗೌಡ ಕಳಂಜರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಮಹಾಸಭೆಯಲ್ಲಿ ರಘುನಾಥ ರೈ ಕಳಂಜ, ಕರುಣಾಕರ ಶೆಟ್ಟಿ ನಾಲ್ಗುತ್ತು, ಸತೀಶ್ ಕಳಂಜ, ಗಗನ್ ನಾಲ್ಗುತ್ತು, ರವೀಂದ್ರನಾಥ್ ರೈ ಗುರಿಕ್ಕಾನ ಹಾಗೂ ಟ್ರಸ್ಟಿನ ಸದಸ್ಯರು ಮತ್ತು ಊರವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading