ಭಾರತೀಯ ಭೂಸೇನೆಯ ಹವಾಲ್ದಾರ್ ಭಾಸ್ಕರ ಕೇಮಟಿ ನಿವೃತ್ತಿ

. . . . . . . . .

ಭಾರತೀಯ ಭೂಸೇನೆಯ ಹವಾಲ್ದಾರ್ ಭಾಸ್ಕರ ಕೇಮಟಿ ರವರು ಮಾ.30 ರಂದು ನಿವೃತ್ತಿ ಹೊಂದಿದರು.
ಹರಿಹರ ಪಳ್ಳತ್ತಡ್ಕ ಗ್ರಾಮದ ಕೇಮಟಿ ಮನೆಯ ಇವರು 2002ರಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಭಾರತೀಯ ಸೇನೆಗೆ ಸೇರಿದರು. ಸೇನೆಯಲ್ಲಿ ಸಿ.ಎಫ್.ಎನ್(ಕ್ರಾಫ್ಟ್ಸ್ ಮ್ಯಾನ್) ಹುದ್ದೆಗೆ ಸೇರಿದ ಇವರು ನಂತರ ಹವಾಲ್ದಾರ್ ಆಗಿ ಭಡ್ತಿ ಹೊಂದಿದರು. ಇವರು ತಮ್ಮ ಸೇವಾ ಅವಧಿಯಲ್ಲಿ ಭೋಪಾಲ್(3ಇ.ಎಂ.ಇ ಸೆಂಟರ್), ಅಂಬಾಲಾ, ಕಾರ್ಗಿಲ್, ಜಬಲ್‌ಪುರ, ಶ್ರೀನಗರ, ಪಶ್ಚಿಮ ಬಂಗಾಳದ ಸುಖ್ನಾ, ಪ್ರಯಾಗ್‌ರಾಜ್, ಜಮ್ಮು ಕಾಶ್ಮೀರದ ಕುಪ್ವಾರಾ, ಪಂಜಾಬ್ ನ ಪಟಿಯಾಲ, ಪುಣೆ, ಮಹಾರಾಷ್ಟ್ರ, ಖಡ್ಕಿ ಹಾಗೂ ಸಿಕಂದರಾಬಾದ್ ಸೇರಿದಂತೆ ಮುಂತಾದ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಹರಿಹರ ಪಳ್ಳತ್ತಡ್ಕ ಗ್ರಾಮದ ಕೇಮಟಿ ಚೆನ್ನಪ್ಪ ಗೌಡ ಹಾಗೂ ಪದ್ಮಾವತಿ ದಂಪತಿಗಳ ಮೂವರು ಮಕ್ಕಳಲ್ಲಿ ಹಿರಿಯ ಮಗನಾಗಿ ಜನಿಸಿದ ಭಾಸ್ಕರ ರವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹರಿಹರ ಪಳ್ಳತ್ತಡ್ಕದಲ್ಲಿ ಪೂರ್ಣಗೊಳಿಸಿ ನಂತರ ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನಲ್ಲಿ ಜೆ.ಒ.ಸಿ ಶಿಕ್ಷಣವನ್ನು ಪಡೆದರು.
ಇವರ ಪತ್ನಿ ಭಾರತಿ.ಪಿ ರವರು ಸುಳ್ಯದ ಕೆ.ವಿ.ಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗದಲ್ಲಿದ್ದು, ಮಕ್ಕಳಾದ ದಿಶಾನ್ ಹಾಗೂ ದಿವಾನ್ ಸುಳ್ಯದ ರೋಟರಿ ವಿದ್ಯಾಸಂಸ್ಥೆಯಲ್ಲಿ 5ನೇ ಹಾಗೂ 2ನೇ ತರಗತಿಯಲ್ಲಿ ಓದುತ್ತಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading