ಸೇವಾಜೆ ಶಾಲಾ ವಿದ್ಯಾರ್ಥಿನಿ ಗೌತಮಿ ಪಿ.ವಿ‌. ನವೋದಯ ಶಾಲೆಗೆ ಆಯ್ಕೆ

ಸೇವಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿಯಲ್ಲಿ ಕಲಿಯುತ್ತಿರುವ ಗೌತಮಿ. ಪಿ ವಿ ಇವರು ಕಳೆದ ದಶಂಬರ ತಿಂಗಳಲ್ಲಿ ನಡೆದ ನವೋದಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಪ್ರಥಮ ಸುತ್ತಿನಲ್ಲಿ 2026-2027ನೇ ಸಾಲಿನಲ್ಲಿ 6ನೇ ತರಗತಿಗೆ ದಾಖಲಾಗಲು ಅರ್ಹತೆ ಪಡೆದಿರುತ್ತಾರೆ. ಇವರು ದೇವಚಳ್ಳ ಗ್ರಾಮದ ಶ್ರೀಮತಿ ವಿನುತ. ಪಿ. ವಿ ಶ್ರೀ ವೀರಪ್ಪ ಗೌಡ. ಪಿ...

ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲದ ಆಮಂತ್ರಣ ಬಿಡುಗಡೆ – ಕೊಳ್ಳಿಮುಹೂರ್ತ

ದ.ಕ ಸಂಪಾಜೆ ಗ್ರಾಮದ ಇತಿಹಾಸ ಪ್ರಸಿದ್ದ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ಒತ್ತೆಕೋಲ ಉತ್ಸವವು ಮಾ.28 ರಿಂದ 30 ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ಮಾರ್ಚ್ 14 ರಂದು ಒತ್ತೆಕೋಲದ ಆಮಂತ್ರಣ ಬಿಡುಗಡೆ ಹಾಗೂ ಕೊಳ್ಳಿ ಮೂಹೂರ್ತ ನಡೆಯಿತು.ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಲ್ಲಿ ಶ್ರೀ ದೈವಕ್ಕೆ ವಿಶೇಷ ಪೂಜೆಯನ್ನು ಮಾಡಿ ಬಳಿಕ ಕೆ.ಬಿ ಕೇಶವ ಆಚಾರ್ಯ ಕೀಲಾರು ಬೈಲು...
Ad Widget

ಉಬರಡ್ಕ : ನಿರ್ದೇಶಕರು ಹಾಗೂ ಕಾರ್ಯಕರ್ತರ ರಾಜೀನಾಮೆ ಪ್ರಕರಣ ಮಾತುಕತೆಯಿಂದ ಸುಖಾಂತ್ಯ

ಉಬರಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಹಾಗೂ ಆ ಬಳಿಕದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸಂದರ್ಭ ಕೆಲವರಿಗಾದ ಅಸಮಾಧಾನ ಹಾಗೂ ಬಣ ರಾಜಕೀಯ ನಡೆದಿದೆ ಎನ್ನಲಾದ ಹಿನ್ನೆಲೆಯಲ್ಲಿ ನಿರ್ದೇಶಕರಿಬ್ಬರು ನೀಡಿದ ರಾಜೀನಾಮೆ ಹಾಗೂ ಆ ಬಳಿಕ ಅವರಿಗೆ ಬೆಂಬಲವಾಗಿ ಕಾರ್ಯಕರ್ತರು ನೀಡಿದ ರಾಜೀನಾಮೆ ಪ್ರಕರಣಗಳನ್ನು ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಲಾಗಿದೆ ಎಂದು ಮಂಡಲ...

ಇನ್ಸ್‌ಪೈಯರ್ ಅವಾರ್ಡ್‌ ಕಾರ್ಯಕ್ರಮ – ಕೆ.ಪಿ.ಎಸ್ ಬೆಳ್ಳಾರೆ ಪ್ರಾಥಮಿಕ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಆಯೋಜಸಲ್ಪಡುತ್ತಿರುವ ಇನ್ಸ್‌ಪೈಯರ್ ಅವಾರ್ಡ್‌ ಕಾರ್ಯಕ್ರಮದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇದರ ಪ್ರಾಥಮಿಕ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಅವಾರ್ಡ್‌ಗೆ ಆಯ್ಕೆಯಾಗಿರುತ್ತಾರೆ. 6ನೇ ಆಂಗ್ಲ ಮಾಧ್ಯಮ ವಿಭಾಗದ ಗ್ರೀಷ್ಮಾ.ಕೆ ಎಸ್ ಹಾಗೂ 7ನೇ ಆಂಗ್ಲ ಮಾಧ್ಯಮದ ವೈಷ್ಣವ್.ಕೆ ಆಯ್ಕೆಯಾದ ವಿದ್ಯಾರ್ಥಿಗಳು. ವಿಜ್ಞಾನ ಶಿಕ್ಷಕ ದಿನೇಶ್ ಮಾಚಾರ್ ಇವರ...

ಕೊಲ್ಲಮೊಗ್ರು : ಆಕಸ್ಮಿಕವಾಗಿ ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು

ಕೊಲ್ಲಮೊಗ್ರು ಗ್ರಾಮದ ಶಿರೂರು ಬಳಿಯ ಬೊಳಿಯಾನ ಮನೆಯ ಮಹಿಳೆಯೋರ್ವರ ಮೈಮೇಲೆ ಬೆಂಕಿ ತಗಲಿ ಗಾಯಗೊಂಡಿದ್ದು, 10 ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.ಬೊಳಿಯಾನ ಮನೆ ದಿ.ಚಿನ್ನಪ್ಪ ಗೌಡ ಅವರ ಪತ್ನಿ ತಿಲಕ ಮಾ.10ರಂದು ಅಡುಗೆ ಮನೆಯಲ್ಲಿ ಬೆಳಿಗ್ಗೆ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಸೀರೆಗೆ ಬೆಂಕಿ ಹಿಡಿದು ತಿಲಕರವರ...

ಜ್ಞಾನದೀಪ ನವೋದಯ ತರಬೇತಿ ಕೇಂದ್ರದ 16 ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಜನವರಿ ತಿಂಗಳಲ್ಲಿ ನಡೆಸಿದ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಬೆಳ್ಳಾರೆ ಮತ್ತು ಸುಳ್ಯದ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ಒಟ್ಟು 16 ವಿದ್ಯಾರ್ಥಿಗಳು ಮುಡಿಪು ಜವಾಹರ್ ನವೋದಯ ವಿದ್ಯಾಲಯದ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಬೈರಮೂಲೆ ಸುಬ್ಬಪ್ಪ ಪಾಟಾಳಿ ಮತ್ತು ವೇದಾವತಿ...

ಇಂದಿನ(ಮಾರ್ಚ್ 20) ಕ್ಯಾಂಪ್ಕೋ ಮಾರುಕಟ್ಟೆ ಅಪ್‌ಡೇಟ್ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯ ಸಂಪೂರ್ಣ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 20 ಮಾರ್ಚ್ 2026ವಾರ : ಶುಕ್ರವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮಾರ್ಚ್ 20) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 260-305-445-460ಹಳೆ ಅಡಿಕೆ...

ಅರೆಭಾಷೆ ಅಕಾಡೆಮಿ ವತಿಯಿಂದ ಸುಳ್ಯದಲ್ಲಿ “ಅರೆಭಾಷೆ ರಂಗ್ – 2026” ಕಾರ್ಯಕ್ರಮ ; “ಭಾಷೆಯನ್ನು ಉಳಿಸುವಲ್ಲಿ ಯುವಜನತೆಯ ಪಾತ್ರ ಮುಖ್ಯ” – ಸದಾನಂದ‌ ಮಾವಜಿ ; “ಭಾಷೆಯನ್ನು ಬಳಸಿದಷ್ಟು ಉಳಿಯುತ್ತದೆ, ಬೆಳೆಯುತ್ತದೆ” – ಶೋಭಾ ಚಿದಾನಂದ

ಸುಳ್ಯ : “ಭಾಷೆಯನ್ನು ಉಳಿಸುವಲ್ಲಿ ಯುವಜನತೆಯ ಪಾತ್ರ ಮುಖ್ಯ. ಅರೆಭಾಷೆ ಸಾಹಿತ್ಯ, ಸಂಸ್ಕೃತಿ ಇನ್ನಷ್ಟು ಬೆಳೆಯಬೇಕು ಎಂಬ ದೃಷ್ಠಿಯಿಂದ ಯುವಜ‌ನರನ್ನು ಆಕರ್ಷಿಸಲು ಅರೆಭಾಷೆ ಅಕಾಡೆಮಿ ವತಿಯಿಂದ ಕಾಲೇಜುಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ” ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಹೇಳಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಡೆಮಿಯ...

ದ.ಕ.ಜಿಲ್ಲೆಯಲ್ಲಿ ಇಂದು (ಮಾ.20) ರಂಝಾನ್ ಹಬ್ಬದ ಆಚರಣೆ

ಚಂದ್ರದರ್ಶನ ಆಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು(ಮಾರ್ಚ್ 20) ಈದುಲ್ ಫಿತ್ವರ್(ರಂಝಾನ್ ಹಬ್ಬ) ಆಚರಣೆಗೆ ನಿರ್ಧರಿಸಲಾಗಿದೆ. ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ನಾಳೆ ಈದುಲ್ ಫಿತ್ವರ್ ಆಚರಿಸಲಾಗುತ್ತದೆ.ಮಧುರ ಹಬ್ಬದಾಚರಣೆಗೆ ಚಂದ್ರದರ್ಶನ ಆಗಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿಯೂ ಮಾರ್ಚ್ 20 ರಂದು ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ತಿಳಿದು ಬಂದಿದೆ. ( ವರದಿ: ಮುಸ್ತಾಫ ಬೆಳ್ಳಾರೆ)

ಕಲ್ಲುಗುಂಡಿ : ಸ್ಟಡಿ ಲಿಂಕ್ ಟ್ಯುಟೋರಿಯಲ್‌ನ 06 ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆ

ಕಲ್ಲುಗುಂಡಿ ಸ್ಟಡಿ ಲಿಂಕ್ ಟ್ಯುಟೋರಿಯಲ್‌ನ 06 ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ. ಚೆಂಬು ಗ್ರಾಮದ ಪರಿವಾರ ಶಿವಪ್ರಕಾಶ್ ಪಿ.ಕೆ ಹಾಗೂ ಪ್ರಮೀಳಾ ಪಿ.ಎಸ್ ದಂಪತಿಗಳ ಪುತ್ರಿ ಗೂನಡ್ಕ ಮಾರುತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಅನಿಕ್ಷಾ, ನೀರಬಿದಿರೆ ಪ್ರಶಾಂತ್ ಎನ್.ಜೆ ಹಾಗೂ ಸುಮಲತಾ ಎಂ.ಪಿ ದಂಪತಿಗಳ ಪುತ್ರ ದಿಶಾನ್ ಎನ್.ಪಿ, ಹಂಡನ ಪುರುಷೋತ್ತಮ ಹೆಚ್.ಎಸ್ ಹಾಗೂ ಸವಿತಾ.ಜಿ ದಂಪತಿಗಳ...
Loading posts...

All posts loaded

No more posts

error: Content is protected !!