ಭೂಸೇನೆಯ ಯೋಧ ಯಶವಂತ ನಿಡುಬೆ ಸೇವಾ ನಿವೃತ್ತಿ

ಕಲ್ಮಕಾರು ಗ್ರಾಮದ ಯಶವಂತ್ ನಿಡುಬೆ ಅವರು ಭಾರತೀಯ ಭೂಸೇನೆಯಲ್ಲಿ 25 ವರ್ಷಗಳ ಕಾಲ ದೇಶಸೇವೆ ಸಲ್ಲಿಸಿ ಇಂದು ಸೇವಾ ನಿವೃತ್ತರಾದರು.

. . . . . . . . .

2002 ರಲ್ಲಿ ಮಂಗಳೂರಿನಲ್ಲಿ ನಡೆದ ಸೇನಾ ನೇಮಕಾತಿಯಲ್ಲಿ ಆಯ್ಕೆಗೊಂಡು ಹೈದರಾಬಾದ್ ನಲ್ಲಿ ತರೆಬೇತಿ ಪಡೆದರು. ಸಿಯಾಚಿನ್ ಗ್ಲಾಸಿಯರ್ ನಲ್ಲಿ ವೃತ್ತಿ ಆರಂಭಿಸಿ, ಟಾಟಾ ನಗರ್, ಅಕ್ನೂರ್ ಸೆಕ್ಟರ್, ಪ್ರಯಾಗ್ ರಾಜ್, ಲಡಾಕ್, ಜಾನ್ಸಿ, ಬರೇಲಿ, ವೆಸ್ಸ್ ಬಂಗಾಳ, ಕುಪ್ವಾಡ ಸೆಕ್ಟರ್, ಕೊಯಮತ್ತೂರು ನಂತರ ಮಹಾರಾಷ್ಟ್ರದಲ್ಲಿ ಭೂಸೇನೆಯ 195 ಪೀಲ್ಡ್ ರೆಜಿನಮೆಂಟ್ ನ ಎಂ ಎ ಸಿ ಪಿ ಸುಬೇಧಾರ್ ಆಗಿ ಒಟ್ಟು 25 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.‌

. . . . . . .

ಇವರು ಕಲ್ಮಕಾರು ಗ್ರಾಮದ ನಿಡುಬೆ ಜನಾರ್ಧನ ಹಾಗೂ ನೇತ್ರಾವತಿ ದಂಪತಿಗಳ ಪುತ್ರ. ಇವರ ಪತ್ನಿ ನೇತ್ರಾವತಿ ಕೆ.ಪಿ. ಗೃಹಿಣಿಯಾಗಿದ್ದು, ಮಕ್ಕಳಾದ ಉಜ್ವಲ್ (8ನೇ ತರಗತಿ) ಹಾಗೂ ಹೆವೀನ್ (4 ನೇ ತರಗತಿ) ಎಲಿಮಲೆ ಜ್ಞಾನದೀಪ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಧೀರಜ್ ಕುಮಾರ್, ದಯಾನಂದ, ಉದಯ ,ಗುರುಪ್ರಸಾದ್ ಇವರ ಸಹೋದರರು. ಶ್ರೀಮತಿ ದಿವ್ಯ ವಾಸುದೇವ ಕಡಬ ಸಹೋದರಿಯಾಗಿದ್ದಾರೆ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading