ಸುಳ್ಯ : ಮನರಂಜಿಸಿದ ಅಮ್ಮ ಚಿಣ್ಣರ ಮನೆಯ ವಾರ್ಷಿಕೋತ್ಸವ, ಪುಟಾಣಿ ಮಕ್ಕಳ ನೃತ್ಯ ಹಾಗೂ ಸಾಧಕರಿಗೆ ಸನ್ಮಾನ ; “ಸುಂದರ ಸಂಸ್ಕೃತಿಯನ್ನು ಉಳಿಸುವ ರೀತಿಯಲ್ಲಿ ಪೋಷಕರು ಮಕ್ಕಳನ್ನು ಬೆಳೆಸಬೇಕು” – ಡಾ. ಶ್ರೀಮತಿ ಹರಿಣಾಕ್ಷಿ ಎಂ.ಡಿ

“ಸುಂದರ ಸಂಸ್ಕೃತಿಯನ್ನು ಉಳಿಸುವ ರೀತಿಯಲ್ಲಿ ಪೋಷಕರು ಮಕ್ಕಳನ್ನು ಬೆಳೆಸಬೇಕು” ಎಂದು ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ, ಉಡುಪಿ ಇದರ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಶ್ರೀಮತಿ ಹರಿಣಾಕ್ಷಿ ಎಂ.ಡಿ. ಹೇಳಿದರು.‌ ಅವರು ಮಾ.30 ರಂದು ಸುಳ್ಯದ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ನಡೆದ “ಅಮ್ಮ ಚಿಣ್ಣರ ಮನೆಯಲ್ಲಿ ವಾರ್ಷಿಕೋತ್ಸವ” ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಆಗಮಿಸಿ ಮಾತನಾಡಿದರು.‌ “ಅನ್ಯ ಭಾಷೆಗಳ ಜತೆಗೆ ನಮ್ಮ ಮಾತೃಭಾಷೆ ಹಾಗೂ ನಮ್ಮ ನೆಲದ ಸಂಸ್ಕೃತಿಯನ್ನು ಮರೆಯಬಾರದು.‌ ನಮ್ಮ ಮಕ್ಕಳು ಇನ್ನೊಬರಂತೆ ಸಾಧನೆ ಮಾಡಬೇಕು ಎಂದು ಒತ್ತಡ ಹಾಡದೇ ನಮ್ಮ ಮಕ್ಕಳನ್ನು ಉತ್ತಮವಾಗಿ ಬೆಳೆಸಬೇಕು” ಎಂದರು. 
ಯುವ ನ್ಯಾಯವಾದಿ ದಿನೇಶ್ ಮಡಪ್ಪಾಡಿ ಮಾತನಾಡಿ “ಕಳೆದ 19 ವರ್ಷಗಳಿಂದ ಶಾಲೆಯು ಉತ್ತಮವಾಗಿ ಬೆಳೆದು ಬರುತ್ತಿದ್ದು, ಮಕ್ಕಳಿಗೆ ಉತ್ತಮ ಸಂಸ್ಕಾರ ತುಂಬುವ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಿದೆ” ಎಂದರು 
ಸಿವಿಲ್ ಇಂಜಿನಿಯರಿಂಗ್ ಎಸೋಸಿಯೇಶನ್ ಸುಳ್ಯ ಇದರ ಅಧ್ಯಕ್ಷ ಕೃಷ್ಣರಾವ್‌ ಮಾತನಾಡಿ “ಒಳ್ಳೆಯ ಸಂಸ್ಕಾರ ಬೆಳೆಸಿಕೊಂಡಾಗ ವಿದ್ಯೆ ಒಲಿಯುತ್ತದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮ್ಮ ಸೇವಾ ಟ್ರಸ್ಟ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ವಹಿಸಿದ್ದರು.‌ ಮುಖ್ಯ ಅತಿಥಿಗಳಾಗಿ ಅಮ್ಮ ಸೇವಾ ಟ್ರಸ್ಟ್ ನಿರ್ದೇಶಕ ಹಮೀದ್ ಇಡ್ನೂರು ಉಪಸ್ಥಿತರಿದ್ದರು. 
ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ, ಉಡುಪಿ ಇದರ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಶ್ರೀಮತಿ ಹರಿಣಾಕ್ಷಿ ಎಂ.ಡಿ ಹಾಗೂ ಸಿವಿಲ್ ಇಂಜಿನಿಯರಿಂಗ್ ಎಸೋಸಿಯೇಶನ್ ಸುಳ್ಯ ಇದರ ಅಧ್ಯಕ್ಷ ಕೃಷ್ಣರಾವ್‌ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕಿ ಅಶ್ವಿನಿ ಶೈಲೇಶ್ , ಸಹಶಿಕ್ಷಕಿ ಶ್ರೀಮತಿ ಸುನಿತಾ ಸುಧೀರ್ & ಶಶಿ ಬಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲೆಯ ಪುಟಾಣಿಗಳಿಂದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಿತು.
ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ, ಪೋಷಕರಿಗೆ ಬಹುಮಾನ ವಿತರಿಸಲಾಯಿತು.
ಬೆಳಿಗ್ಗೆ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಕೆ.ವಿ.ಜಿ ಮೆಡಿಕಲ್ ಕಾಲೇಜು ರೋಗಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ| ನವ್ಯಾ ಬಿ.ಎನ್ ನೆರವೇರಿಸಿ ಶುಭಹಾರೈಸಿದರು. ಅಧ್ಯಕ್ಷತೆಯನ್ನು ಪೋಷಕ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಅತ್ಯಾಡಿ ವಹಿಸಿದ್ದರು.
ಅಮ್ಮ ಸೇವಾ ಟ್ರಸ್ಟ್ ನಿರ್ದೇಶಕರಾದ ಸೀತಾರಾಮ ಕೇವಳ, ಶ್ರೀಮತಿ ಬೀನಾ ಕರುಣಾಕರ ಗೌರವ ಉಪಸ್ಥಿತರಿದ್ದರು.
ಡಾ|ಸ್ಮಿತಾ ಹರ್ಷವರ್ದನ್ ಪ್ರಾರ್ಥಿಸಿದರು. ಹರಿಪ್ರಸಾದ್ ಅತ್ಯಾಡಿ ಸ್ವಾಗತಿಸಿ, ಪೂಜಾಶ್ರೀ ವಿಜೇತ್ ಕೋಡಿ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading