ಎ.1 – 4 : ವಳಲಂಬೆಯ ನೇರಳಾಡಿ ಬದಿಕಾನದಲ್ಲಿ ಶ್ರೀ ಮಲೆ ದೈವಗಳ ಪ್ರತಿಷ್ಠೆ ಹಾಗೂ ದೈವಗಳ ನೇಮೋತ್ಸವ (ಜಾಲಾಟ)

ಗುತ್ತಿಗಾರು ಗ್ರಾಮದ ವಳಲಂಬೆಯ ನೇರಳಾಡಿ ಬದಿಕಾನದಲ್ಲಿ ಪುನರ್ ನಿರ್ಮಾಣಗೊಂಡ ಮಾಡದಲ್ಲಿ ಶ್ರೀ ಮಲೆ ಉಳ್ಳಾಕುಲು ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಕಲಶಾಭಿಷೇಕ, ವಿವಿಧ ಧಾರ್ಮಿಕ ಕ್ರಿಯಾ ಭಾಗಗಳು ಹಾಗೂ ಶ್ರೀ ಮಲೆ ದೈವಗಳ ನೇಮೋತ್ಸವವು (ಜಾಲಾಟ) ಎ.1ರಿಂದ 4ರ ತನಕ ಜರುಗಲಿದೆ‌.
ಮಾ.29ರಂದು ಗೊನೆ ಮುಹೂರ್ತ ನೆರವೇರಿತು.  ಎ.1ರಂದು ಬೆಳಿಗ್ಗೆ ಬದಿಕಾನ ಮಾಡದಲ್ಲಿ ಸರ್ಪ ಸಂಸ್ಕಾರ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಪುಣ್ಯಾಹ, ಸ್ಥಳಶುದ್ಧಿ, ವಾಸ್ತು ಹೋಮ, ರಾಘ್ಷೋಘ್ನ ಹೋಮ, ವಾಸ್ತುಪೂಜೆ, ವಾಸ್ತುಬಲಿ, ಅನ್ನಸಂತರ್ಪಣೆ ಜರುಗಲಿದೆ.
ಎ.2ರಂದು ಪ್ರಾತ:ಕಾಲ ಗಣಪತಿ ಹೋಮ, ಪ್ರತಿಷ್ಠಾಂಗ ಹೋಮ, ಶ್ರೀ ಮಲೆ ದೈವಗಳ ಪ್ರತಿಷ್ಠೆ, ಗುಳಿಗ ದೈವದ ಶಿಲಾ ಪ್ರತಿಷ್ಠೆ (ಅಂಬ್ರೋಳಿ), ಮಹಾಪೂಜೆ ನಡೆಯಲಿದ್ದು, ಬಳಿಕ ಶ್ರೀ ಶಂಕಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜಾರಿಗಳ ಕಲಶಸ್ನಾನವಾಗಿ ವೃಷಭಲಗ್ನದಲ್ಲಿ ನೇರಳಾಡಿಯಲ್ಲಿ ಶ್ರೀ ದೈವಗಳ ಗುಂಡದ ಕೋಲು ಹೊಡೆಯುವುದು., ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಆಶ್ಲೇಷ ಬಲಿ, ಪ್ರಸಾದ ವಿತರಣೆ, ರಾತ್ರಿ ದಂಬೆಕೋಡಿ ಭಂಡಾರ ಛಾವಡಿಯಿಂದ ಬದಿಕಾನದ ಮಾಡಕ್ಕೆ ದೈವಗಳ ಭಂಡಾರ ತರುವುದು. ನಂತರ ನೇರಳಾಡಿ ಕೊಡಿಅಡಿಗೆ ಭಂಡಾರ ಹೋಗುವುದು, ರಾತ್ರಿ ಅನ್ನಸಂತರ್ಪಣೆ ಜರುಗಲಿದೆ.

. . . . . . . . .

ಎ.3ರಂದು ಪ್ರಾತ:ಕಾಲ ಶ್ರೀ ಉಳ್ಳಾಕುಲು ದೈವದ ನೇಮ, ಬೆಳಿಗ್ಗೆ ಶ್ರೀ ಪುರುಷ ದೈವದ ನೇಮ, ಮಧ್ಯಾಹ್ನ ಅನ್ನಸಂತರ್ಪಣೆ ಜರುಗಲಿದೆ‌ ‌ ಅಪರಾಹ್ನ ಶ್ರೀ ಮಲೆ ಚಾಮುಂಡಿ ದೈವದ ನೇಮ, ಸಂಜೆ ಕಾರಣಿಕದ ಅಜ್ಜಿ ದೈವದ ನೇಮ, (ಅಮ್ಮಜ್ಜಿ) ಪ್ರಾರಂಭಗೊಂಡು ಕೂರ್ಜುಗಳೊಂದಿಗೆ ತನ್ನ ಸ್ಥಾನಗಳಿಗೆ ಹೋಗುವುದು, ರಾತ್ರಿ ಅಜ್ಜಿ ದೈವಕ್ಕೆ ಹರಿಕೆ ಒಪ್ಪಿಸುವುದು, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ‌.
ಎ.4ರಂದು ಪ್ರಾತ:ಕಾಲ ಶ್ರೀ ಶಿರಾಡಿ ದೈವದ ನೇಮ, ಮಧ್ಯಾಹ್ನ ಅನ್ನಸಂತರ್ಪಣೆ, ಅಪರಾಹ್ನ ಗುಳಿಗ ದೈವದ ಕೋಲ, ಸಂಜೆ ಶ್ರೀ ದೈವಗಳ ಭಂಡಾರವನ್ನು ಬದಿಕಾನದ ಮಾಡಕ್ಕೆ ತಂದು ನಂತರ ದಂಬೆಕೋಡಿ ಭಂಡಾರದ ಚಾವಡಿಗೆ ಹೋಗುವುದರ ಮೂಲಕ ನೇಮೋತ್ಸವವು ಕೊನೆಗೊಳ್ಳಲಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading