ಏನೆಕಲ್ಲು : ಏಪ್ರಿಲ್ 12ರಿಂದ 19ರವರೆಗೆ “ಕಲಾಮಾಯೆ ದಶ ಸಂಭ್ರಮ-2026” ಮಕ್ಕಳ ಗೌಜಿ ಬೇಸಿಗೆ ಶಿಬಿರ – ನಾಟಕ, ನೃತ್ಯ, ಸಾಂಸ್ಕೃತಿಕ ಹಾಗೂ ಕ್ರಿಕೆಟ್ ಪಂದ್ಯಾಟ ಕಾರ್ಯಕ್ರಮ

ಸಾಂಸ್ಕೃತಿಕ ಲೋಕದಲ್ಲಿ ಯಶಸ್ವಿ ಪಯಣದ ಮೂಲಕ ಹತ್ತನೇ ವಸಂತಕ್ಕೆ ಹೆಜ್ಜೆ ಇಡುತ್ತಿರುವ ಕಲಾಮಾಯೆ ಸಂಸ್ಥೆ ಏನೆಕಲ್ ಇದರ “ಕಲಾಮಾಯೆ ದಶ ಸಂಭ್ರಮ -2026” ಕಾರ್ಯಕ್ರಮವು ಏಪ್ರಿಲ್ 12ರಿಂದ 19 ರವರೆಗೆ ಶ್ರೀ ಆದಿಶಕ್ತಿ ಭಜನಾ ಮಂದಿರ(ರಿ.) ಏನೆಕಲ್ ಇಲ್ಲಿ ರಾಜ್ಯದ ಅನುಭವಿ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ, “ಮಕ್ಕಳ ಗೌಜಿ ಚಿಣ್ಣರ ಬಣ್ಣದ ಬೇಸಿಗೆ ಶಿಬಿರ” ನಡೆಯಲಿದ್ದು, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಹತ್ತು ಹಲವು ಸಾಂಸ್ಕೃತಿಕ, ಶೈಕ್ಷಣಿಕ ಆಟ ಪಾಠಗಳ ಮನೋರಂಜನಾ ಚಟುವಟಿಕೆಗಳು ಒಳಗೊಂಡಿರುತ್ತದೆ. ಏಪ್ರಿಲ್ 19 ರಂದು ಸಂಜೆ 6:00 ರಿಂದ ದಶ ಸಂಭ್ರಮ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಶಿಬಿರ ವಿದ್ಯಾರ್ಥಿಗಳ ಕಿರು ನಾಟಕ, ನೃತ್ಯ ಪ್ರದರ್ಶನ ನಡೆದು, ಶಿಬಿರಾರ್ಥಿಗಳಿಗೆ ಸ್ಮರಣಿಕೆ, ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ನಂತರ ‘ಕೋಸ್ಟಲ್ ಡ್ಯಾನ್ಸಿಂಗ್ ಸ್ಟಾರ್’ ನೃತ್ಯ ಸ್ಪರ್ಧಾ ಕಾರ್ಯಕ್ರಮ ವೇದಿಕೆ ರಂಗೇರಲಿದೆ. ತದನಂತರ ಬಲೇ ತೆಲಿಪಾಲೆ ಖ್ಯಾತಿಯ ಅತಿಥಿ ಕಲಾವಿದರಿಂದ ‘ಕಾಮಿಡಿ ಟೈಮ್’ ಹಾಗೂ ಊರಿನ ಹಿರಿಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರನ್ನು ಮನಸೂರೆಗೊಳಿಸಲಿದೆ. ವಿಶೇಷವಾಗಿ ಏನೆಕಲ್ ಗ್ರಾಮ ವ್ಯಾಪ್ತಿಯ ಆಟಗಾರರಿಗಾಗಿ ಕಲಾಮಾಯೆ ಟ್ರೋಪಿ ಕ್ರಿಕೆಟ್ ಪಂದ್ಯಾಟ ನಡೆಯಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading